Advertisement
ನೈಸ್ ರಸ್ತೆ ನಿರ್ಮಾಣದಲ್ಲಿನ ಅಕ್ರಮ ಕುರಿತಂತೆ ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಶುರು ಮಾಡಿದ್ದ ಅಬ್ರಾಹಂ, ನಂತರ ಖೇಣಿ ಅವರ ಪೌರತ್ವ ಪ್ರಶ್ನಿಸಿ ಮತ್ತು ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಮೊಕದ್ದಮೆಗಳನ್ನು ಹೂಡಿ, ಕಾನೂನು ಸಮರ ನಡೆಸುತ್ತ ಬಂದಿದ್ದಾರೆ.
Related Articles
Advertisement
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ತಮ್ಮ ಪಕ್ಷದ ಚಿಹ್ನೆಯಡಿ ಖೇಣಿ ವಿರುದ್ಧ ಸ್ಪರ್ಧಿಸಲು ಸಮ್ಮತಿ ಸೂಚಿಸುವಂತೆ ಕೋರಿರುವ ಅವರು, ಪಕ್ಷಗಳಿಂದ ಟಿಕೆಟ್ ಕೊಡದಿದ್ದರೂ ಖೇಣಿ ವಿರುದ್ಧ ನಾನು ಸ್ಪ ರ್ಧಿಸುವುದು ಖಚಿತ ಎಂದು ಹೇಳಿದ್ದಾರೆ
ಜನ ಜಾಗೃತರಾಗಿದ್ದಾರೆಅಶೋಕ್ ಖೇಣಿ ವಿರುದ್ಧ ಅಕ್ರಮಗಳ ಕುರಿತಂತೆ ಹಲವು ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಿ ರೈತರು ಮತ್ತು ಸರ್ಕಾರಕ್ಕೆ ಅವರು ಮೋಸ ಮಾಡಿರುವುದನ್ನು ಬಯಲಿಗೆಳೆದಿರುತ್ತೇನೆ. ಕಳೆದ ಬಾರಿ ಚುನಾವಣೆಯಲ್ಲಿ ಖೇಣಿ ವಿರುದ್ಧ ಸಾಂಕೇತಿಕವಾಗಿ ಸ್ಪ ರ್ಧಿಸಿ ಮತದಾರರಲ್ಲಿ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೆ. ಆದರೆ, ಬೀದರ ದಕ್ಷಿಣ ಕ್ಷೇತ್ರದ ಮುಗ್ಧ ಮತದಾರರು ಖೇಣಿಯವರ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಈಗ ಜನರು ಜಾಗೃತರಾಗಿದ್ದು, ಅಕ್ರಮದ ವಿರುದ್ಧ ಹೋರಾಡುತ್ತಿರುವ ತಮಗೆ ಈ ಬಾರಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ವಿಶೇಷ ವರದಿ