ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಎಬಿಪಿ -ಸಿ ವೋಟರ್ ನಡೆಸಿದ ಸಮೀಕ್ಷೆ ವರದಿಯಲ್ಲಿ ಬಿಜೆಪಿಗೆ ಭಾರೀ ಶಾಕ್ ಸಿಕ್ಕಿದೆ.
ಸೀ ವೋಟರ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ,
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ ಮತ್ತೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಗಳು ಕಡಿಮೆ. ಎನ್‌ಡಿಎ ಮೈತ್ರಿ ಕೂಟ ಕೇವಲ 233 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಮೈತ್ರಿ ಕೂಟವಾಗಲಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ 167 ಮತ್ತು ಇತರ ಪಕ್ಷಗಳು 143 ಸ್ಥಾನಗಳಲ್ಲಿ ಜಯ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ ಜಯಭೇರಿ
ಸಮೀಕ್ಷೆಯಲ್ಲಿ ಅತೀ ಹೆಚ್ಚು 80 ಲೋಕಸಭಾ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಮಹಾಘಟಬಂಧನ್ ಜಯಭೇರಿ ಭಾರಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಕೂಟ 51 ಸ್ಥಾನಗಳನ್ನು ಜಯಿಸಲಿದೆ ಎಂದು ಸಮೀಕ್ಷೆ ಹೇಳಿದ್ದು , ಬಿಜೆಪಿ 25 ಸ್ಥಾನಕ್ಕೆ ಕುಸಿಯಲಿದ್ದು, ಕಾಂಗ್ರೆಸ್ 4ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಪಂಜಾಬ್‌ನಲ್ಲಿ 13 ಸ್ಥಾನಗಳ ಪೈಕಿ ಎನ್‌ಡಿಎಗೆ 1 ಮತ್ತು ಕಾಂಗ್ರೆಸ್‌ಗೆ 13 ಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ 2,ಕಾಂಗ್ರೆಸ್ ಮೈತ್ರಿಕೂಟಕ್ಕೆ 4 , ದೆಹಲಿಯಲ್ಲಿ 7 ಸ್ಥಾನ ಬಿಜೆಪಿ ಕ್ಲೀನ್ ಸ್ವೀಪ್, ಉತ್ತರಾಖಂಡ್‌ನಲ್ಲಿ 4 ಸ್ಥಾನ ಬಿಜೆಪಿ ಕ್ಲೀನ್ ಸ್ವೀಪ್, ಹರ್ಯಾಣದಲ್ಲಿ ಎನ್‌ಡಿಎ 7 ಮತ್ತು ಯುಪಿಎ 3, ಬಿಹಾರದಲ್ಲಿ ಎನ್‌ಡಿಎ 35, ಯುಪಿಎ 5, ರಾಜಸ್ಥಾನದಲ್ಲಿ ಬಿಜೆಪಿ 18 , ಕಾಂಗ್ರೆಸ್ 7, ಮಧ್ಯಪ್ರದೇಶದಲ್ಲಿ ಬಿಜೆಪಿ 23 , ಕಾಂಗ್ರೆಸ್ 6 , ಗುಜರಾತ್‌ನಲ್ಲಿ ಬಿಜೆಪಿ 24 , ಕಾಂಗ್ರೆಸ್ 2, ಮಹಾರಾಷ್ಟ್ರ ಎನ್‌ಡಿಎ 16, ಯುಪಿಎ 28 ಮತ್ತು ಇತರರು 4, ಗೋವಾ ಬಿಜೆಪಿ 1 , ಕಾಂಗ್ರೆಸ್ 1 , ಜಾರ್ಖಂಡ್ ಎನ್‌ಡಿಎ 5,ಯುಪಿಎ 8 , ಇತರರು 1 , ಒಡಿಶಾದಲ್ಲಿ ಎನ್‌ಡಿಎ 12 , ಇತರರು 9 ,ಛತ್ತೀಸ್‌ಗಢದಲ್ಲಿ ಬಿಜೆಪಿ 5, ಕಾಂಗ್ರೆಸ್ 6, ಪಶ್ಚಿಮ ಬಂಗಾಳದಲ್ಲಿ ಎನ್‌ಡಿಎ 7 , ಯುಪಿಎ 1, ಟಿಎಂಸಿ 34 ಸ್ಥಾನ, ಅಸ್ಸಾಂನಲ್ಲಿ ಎನ್‌ಡಿಎ 6 , ಯುಪಿಎ 7 ಮತ್ತು ಇತರರು 1 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.