ಎಂಥದೆಲ್ಲ ಭ್ರಮೆಗಳು ಜನಮಾನಸದಲ್ಲಿ ಹೊಯ್ದಾಡುತ್ತವೆ ಎಂದರೆ ಗುರುಗ್ರಹದ ಬಲವೊಂದು ದೊರೆತಾಗ ಪ್ರತಿ ಕೆಲಸಗಳು ಯಶಸ್ಸಿನ ಶಿಖರದತ್ತ ಜಿಗಿಯುತ್ತದೆ ಎಂಬ ನಂಬಿಕೆಯಲ್ಲೇ ಮುಳುಗೆದ್ದು ಬಿಡುತ್ತಾರೆ. ಗುರುಬಲ ಒಂದಿದ್ದರೆ ಮುಟ್ಟಿದ್ದೆಲ್ಲಾ ಚಿನ್ನವೇ ಆಗುತ್ತದೆ ಎಂಬ ಚಿತ್ರ ಆತ್ಮವಿಶ್ವಾಸ ತಳೆದುಬಿಡುತ್ತಾರೆ. ಹಿಂದಿನವಾರ ಈ ಅಂಕಣದಲ್ಲಿ ಬಂದ ಗುರುಗ್ರಹದ ಬಗೆಗಿನ ಕೆಲವು ಸಕಾರಾತ್ಮಕ ಮಾತುಗಳು ಈ ಜನರನ್ನು ಒಂದು ರೀತಿಯ ಗುಂಗಿನಲ್ಲಿ ಬಂಧಿಸಿಬಿಟ್ಟಿದೆ. ಸ್ಪಷ್ಟವಾಗಿ ಇದೇ ಅಂಕಣದಲ್ಲಿ ಹಿಂದಿನವಾರ ಬರೆದು ಶ್ರುತ ಪಡಿಸಿದೊಂದು ವಿಷಯವನ್ನು ಮತ್ತೂಮ್ಮೆ ಓದುಗರ ಎದುರು ತೆರೆದಿಡುತಿದ್ದೇನೆ. ಗುರುಗ್ರಹವೇ ಖಳನಾಯಕನಾದಾಗ ಭಿಕ್ಷೆಯನ್ನು ಬೇಡಿಸಲೂ ಕಾರಣನಾಗುತ್ತಾನೆ.
ಕಾಯುವ ಗುರುವೇ ಕಾಡಿಸಿದ್ದು ನರಳಿಸಿದ್ದು ಬಹಳ ಜನರ ಅನುಭವ ಎನ್ನಬಹುದು.
ಇತ್ತೀಚೆಗೆ ನಮ್ಮ ದೇಶದ ಪ್ರಮುಖರೊಬ್ಬರು ನಾನು ಮದುವೆಯಾಗಲಾರೆ, ಜೀವನದಲ್ಲಿ ನನಗಿದರ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ನೀಡಿದರು. ನಿಜಕ್ಕೂ ಇವರ ಜಾತಕದಲ್ಲಿ ಗುರುಗ್ರಹವೇ ಜೀವನದ ಸಂದರ್ಭದಲ್ಲಿ ಉತ್ತಮ ವೈವಾಹಿಕ ಬಂಧನವನ್ನು ಒದಗಿಸಿಕೊಡಬೇಕು. ಆದರೆ ದುರ್ದೈವವಶಾತ್ ಇವರ ಜಾತಕದ ಉತ್ತಮೋತ್ತಮರಲ್ಲಿ ಒಬ್ಬನಾದ ಶನೈಶ್ಚರಸ್ವಾಮಿ ಗುರುಗ್ರಹದ ಕೆಲವೇ ಮಟ್ಟಿಗೆ ಇರಬಹುದಾದ ಉತ್ತಮ ಶಕ್ತಿಯನ್ನು, ತನ್ನ ಕ್ರೂರ ನೀಚ ದೃಷ್ಟಿಯಿಂದ ಮದುವೆಯಾಗದಿರುವ ಇವರ ನಿರ್ಧಾರಕ್ಕೆ ವೇದಿಕೆಯನ್ನು ನಿರ್ಮಿಸಿದ. ಮೊದಲೇ ಇವರ ಜಾತಕದಲ್ಲಿ ಗುರು ದುಷ್ಟನಾಗಿದ್ದಾನೆ. ಕೇಂದ್ರಾಧಿಪತ್ಯ ದೋಷ ಇರುವ ಗುರು ಈ ಪ್ರಮುಖರ ವೈವಾಹಿಕ ಜೀವನದ ಸಾಫಲ್ಯತೆಗಳನ್ನು ಇವರ ಕೆಲಸದ ಹುದ್ದೆಯ ಮೇಲ್ವಿಚಾರಣೆಯ ವಿಚಾರದಲ್ಲಿ ಗೊಂದಲಗಳನ್ನು ನಿರ್ಮಿಸುತ್ತಿರುತ್ತಾನೆ. ಲಗ್ನಭಾವದಲ್ಲಿನ ದುಷ್ಟ, ಕುಜ ಹಾಗೂ ಸೂರ್ಯ ಗ್ರಹಗಳು ಸದಾ ಜೀವಭಯದಲ್ಲಿರಿಸಿ ಮನೋವಿಕಾರಕ ಚಂದ್ರನಿಂದ ದಿಟ್ಟ ನಿಲುವು ತಳೆಯಲು ಅಸಮರ್ಥರನ್ನಾಗಿಸುತ್ತಾರೆ. ಪೂರ್ವ ಪುಣ್ಯದಲ್ಲಿಯೇ ಗುರು ಇದ್ದು ಶನಿಯ ಕ್ರೂರ ನೀಚ ದೃಷ್ಟಿಯ ಫಲವಾಗಿ ಉಳಿದ ಗ್ರಹಗಳು ಇವರನ್ನು ಇನ್ನಿತರ ರೀತಿಯಲ್ಲಿ ಪರದಾಡಿಸಲು ಕಾರಣವಾಗಿದೆ. ಮನಸ್ಸು ಮಾಡಿದರೆ ಭಾರತ ದೇಶವನ್ನು ಸಂಪನ್ನವಾದ ನೆಲೆಯಲ್ಲಿ ಕರೆದೊಯ್ಯಬಲ್ಲ ಮಹತ್ತರ ಶಕ್ತಿ ಹಾಗೂ ಮನೋಬಲವನ್ನು ಈ ಪ್ರಮುಖರು ಪಡೆಯಬಹುದಿತ್ತು.
ಗುರು ಗ್ರಹದ ಬಲವಿದ್ದೂ ರಾಹುಶನಿಗಳು ಕೆಡಿಸಿದ ಪ್ರಧಾನಿಪಟ್ಟ
ತೀರಾ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ವರಿಷ್ಠ ಮುತ್ಸದ್ಧಿ ರಾಜಕಾರಣಿ ನಿಷ್ಟುರವಾದಿ ಲಾಲಕೃಷ್ಣ ಆಡ್ವಾಣಿ ಪಕ್ಷದ ಬಹುಮುಖ್ಯ ಸಭೆಯಲ್ಲಿ ಭಾವೋದ್ವೇಗದಿಂದ ಕಣ್ಣೀರಿಟ್ಟರು. ತಾನು ಪ್ರಧಾನ ಮಂತ್ರಿಯಾಗಲಿಲ್ಲ ಇನ್ನಂತೂ ಆಗಲಾರೆ ಎಂಬುದಕ್ಕಲ್ಲ ಈ ಕಣ್ಣಿರು. ಬದಲು ತಾನು ಸಾಗಿಬಂದ, ತಾನು ಬೆಳೆಸಿದ ಪಕ್ಷವನ್ನು ಭ್ರಷ್ಟಾಚಾರದ ಕೊಳಕಿನಿಂದ ಮೇಲೆತ್ತಲಾಗಲಿಲ್ಲವಲ್ಲ ಎಂಬ ಅಳಲು ಕಣ್ಣಿರಲ್ಲಿತ್ತು. ಅವರ ಅನುಮಾನದ ಹುತ್ತದ ಕೊಳೆ ಅವರ ಚಿತ್ತವನ್ನು ನೋಗೆ ಒಡ್ಡಿತ್ತು. ಪಕ್ಷದಲ್ಲಿ ಉಂಟಾದ ಅಶಿಸ್ತು, ಅಪ್ರಮಾಣಿಕತೆ ಮೆರೆದ ಮಂದಿಯ ಬಗ್ಗೆ ಜಿಗುಪ್ಸೆ ಇತ್ತು. ಸದಾ ಅನುಕೂಲವನ್ನೇ ಒದಗಿಸಿಕೊಡಬೇಕಿದ್ದ ಅವರ ಜಾತಕದ ಗುರುಗ್ರಹ 2009ರ ಲೋಕಸಭಾ ಚುನಾವಣೆಯಲ್ಲಿ ನೀಚತ್ವವನ್ನು ಸಂಪಾದಿಸಿಕೊಂಡಿತ್ತು. ಹಲವು ತಲ್ಲಣಗಳನ್ನು ನಿುìಸಬೇಕಾದ ಜಾತಕದ ರಾಹುದೋಷ 2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆದವಾನಿಯವರಿಗೆ ನಷ್ಟವನ್ನೇ ತರಬೆಕಾದ ನಷ್ಟದಲ್ಲಿ ಕ್ರೂರವಾಗಿತ್ತು. ಶತಾಯಗತಾಯ ಅವರ ಸುಖವನ್ನು ಛಿದ್ರಗೊಳಿಸಲೆಂದೇ ಹಠ ತೊಟ್ಟಿದ್ದ ಶನೈಶ್ಚರ ಸ್ವಾಮಿ ಪಂಚಮ ಶನಿಯಾಗಿ ಕಾಡುತ್ತಿದ್ದ. ಪರಿಣಾಮದಲ್ಲಿ ಕರ್ಮಸ್ಥಾನದ ಸಿದ್ಧಿಯನ್ನು ಕೆಡಿಸಲೇ ಬಂದಂತೆ ಈ ಕಾಟ ಆದವಾನಿಯವರ ಕರ್ಮಸ್ಥಾನದಲ್ಲಿ ಬೆನ್ನು ಹತ್ತಿತ್ತು. ಯೋಗ್ಯತೆ ಇದ್ದೂ ಆದವಾನಿ ಸೋತರು. ಲೋಕಸಭಾ ಸ್ಥಾನ ಗೆದ್ದರೂ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ. ಸಾಲದೆಂಬಂತೆ ಜಿನ್ನಾ ಬಗೆಗೆ ಕೆಲವು ಉತ್ತಮ ಮಾತುಗಳನ್ನಾಡಿ ಪರದಾಡಿದರು. ಎಷ್ಟೇ ಅಲ್ಲವೆಂದರೂ ಬಿಜೆಪಿಯನ್ನು ನಿಯಂತ್ರಿಸುವ ಆರ್‌ಎಸ್‌ಎಸ್ ಕೆಂಗಣ್ಣಿಗೆ ಆದವಾನಿ ಗುರಿಯಾದದ್ದು ಈಗ ಇತಿಹಾಸ. ಅವರ ಮಾತುಗಳು ಅವರನ್ನು ಮೂಲೆಗುಂಪು ಮಾಡಿತ್ತು. ನೀಚತ್ವವನ್ನು ಗೋಚಾರದಲ್ಲಿ ಪಡೆದಿದ್ದ ಗುರುಗ್ರಹವೇ ಅವರ ವಾಕ್ ಸ್ಥಳದ ಅಧಿಪತಿಯಾಗಿದ್ದದು ಒಂದು ಆಕಸ್ಮಿಕವೇನಲ್ಲ. ಕಾಡುವ ಸಂದರ್ಭ ಬಂದಾಗ ಗುರುಗ್ರಹವೂ ದಾರಿ ತಪ್ಪಿಸಬಲ್ಲ ಎಂಬುದಕ್ಕೆ ಇದು ಒಂದು ದೊಡ್ಡ ನಿದರ್ಶನ. ಪರಿಪೂರ್ಣ ಚಂದ್ರಗ್ರಹ ಈ ಇಳಿವಯಸ್ಸಿನಲ್ಲೂ ಅವರ ಚೇತನವನ್ನೇ ಕಾಪಾಡಿಕೊಂಡೇ ಬಂದಿದ್ದಾನೆ. ಲಾಭಾಧಿಪತಿ ಬುಧನನ್ನು ಬೌದ್ಧಿಕವಾಗಿ ಅರಳಿಸಬಲ್ಲ ಚಂದ್ರ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆದವಾನಿಯವರನ್ನು ಅನಿರೀಕ್ಷಿತ ಸಂಪನ್ನತೆಗೆ ತಳ್ಳದಿರಲಾರ ಎಂಬುದೊಂದು ಬಹು ಮಹತ್ವದ ಅಂಶ. ಈ ಬುಧ ಆದವಾನಿಯವರ ಜಾತಕದಲ್ಲಿ ನಷ್ಟದಲ್ಲಿದ್ದರೂ ಗುರುನ ನಕ್ಷತ್ರವಾದ ಶಾಖಾ ನಕ್ಷತ್ರದಲ್ಲಿ ವಿರೋಧಿಗಳನ್ನು ಬಗ್ಗುಬಡಿಯುವ ಚೈತನ್ಯವನ್ನು ಹೊಂದಿದ್ದಾನೆ. ಅಂಗರಕ್ಷಕರ ಬಹುಮುಖ್ಯ ವ್ಯವಸ್ಥೆಗೆ ಯಾವುದೇ ಚ್ಯುತಿ ಒದಗಬಾರೆದೆಂಬುದು ಮುಖ್ಯ.
ಗುರು ಗ್ರಹ ಸಾಮಾನ್ಯವಾಗಿ ಮಿಥುನ, ಕನ್ಯಾ,ಲಗ್ನದವರನ್ನು ಅಗಾಧವಾಗಿ ಕಾಡುತ್ತದೆ.
ಮಿಥುನ ಲಗ್ನದವರಿಗೆ ರಾಹು, ಕುಜ, ಶನಿ ಗ್ರಹಗಳ ದೌರ್ಬಲ್ಯ ಕೂಡಿಬಂದಲ್ಲಿ ಗುರು ಪ್ರತ್ಯಕ್ಷ ರಾಕ್ಷಸನಾಗಿ ಮಾರ್ಪಡುತ್ತಾನೆ. ಈ ಅಂಕಣದ ಮೊದಲ ಭಾಗದಲ್ಲಿ ವಿಶ್ಲೇಷಿಸಿದ ನಮ್ಮ ರಾಷ್ಟ್ರದ ಪ್ರಮುಖ ವ್ಯಕ್ತಿ ಮಿಥುನ ಲಗ್ನ ಜಾತಕದವರಾಗಿದ್ದಾರೆ. ದುರ್ಬಲ ಶನಿ, ದುರ್ಬಲ ರಾಹು ಹಾಗೂ ದುಷ್ಟ ಕುಜಗ್ರಹಗಳು ಇವರನ್ನು ನಿರಂತರವಾಗಿ ಕಾಡಿದ್ದಾರೆ. ಬಹು ಸೂಕ್ಷ್ಮ ಆವರಣಗಳಿಂದ ಗುರುಗ್ರಹ ಅಪರೂಪಕ್ಕೆ ಸಾಕಷ್ಟು ದುಷ್ಟತನವನ್ನು ಕಳೆದುಕೊಂಡಿದ್ದರೂ ನೀಚ ಶನಿ ಗುರುಗ್ರಹದ ಧನಾತ್ಮಕ ಆದರ್ಶಗಳನ್ನು ಛಿದ್ರಗೊಳಿಸಿದೆ. ಬಹುಮುಖ್ಯ ಸೂಕ್ಷ್ಮ ಸಂವೇದಿ ದಿಟ್ಟ ಮಾರ್ಗದರ್ಶಕರೊಬ್ಬರು ಈ ವ್ಯಕ್ತಿಗೆ ಒದಗಿಬಂದಲ್ಲಿ 2020 ನಂತರದಲ್ಲಿ
ಭಾರತದ ಒಬ್ಬ ಅದ್ಭುತ ನಾಯಕನಾಗುವ ಯೋಗ ಕೂಡಿಬರಲು ಇವರ ಜಾತಕದ ಧರ್ಮ ಕರ್ಮಾಧಿಪ ದೃಷ್ಟಿಯೋಗ ಅವಕಾಶಗಳನ್ನು ರೂಪಿಸಿಕೊಳ್ಳಬಲ್ಲದು. ಮಾರ್ಗದರ್ಶಕ ಯಾರು ಸೂಕ್ಷ್ಮ ಸಂವೇದಿ ದಿಟ್ಟ ಮಾರ್ಗದರ್ಶಕ ಎಂಬುದಕ್ಕೆ ವ್ಯಾಖ್ಯೆಗಳು ಈ ಭ್ರಷ್ಟ ವ್ಯವಸ್ಥೆಗಳ ನಡುವೆ ಸಂಪನ್ನನೊಬ್ಬ ಸಿಗಬಲ್ಲನೇ? ಸಿಗಬಲ್ಲ ಎಂಬುದನ್ನು ನಿರಾಕರಿಸಲಾಗದು. ಮುಖ್ಯವಾಗಿ ಮಾತುಗಳಲ್ಲಿನ ಮೃದುತ್ವ ಆದರೆ ಮಾತಾಡಲು ಗಟ್ಟಿಯಾಗಿ ಮುಂದಾಗಲು ಏನೋ ಅಳುಕು. ಇವು ಒಂದಕ್ಕೊಂದು ವೈರುಧ್ಯಗಳಾದರೂ ಶುಕ್ರಗ್ರಹದ ಅಗಾಧವಾದೊಂದು ಅನಿರೀಕ್ಷಿತ ಶಕ್ತಿ ಜಾತಕದಲ್ಲಿ ಈ ವ್ಯಕ್ತಿಗೆ ಭವಿಷ್ಯದಲ್ಲಿ ಬೆಳಕನ್ನಿಟ್ಟಿದೆ.