Advertisement

ಬೆಟ್ಟದಿಂದ ಬೆಟ್ಟಕ್ಕೆ ನೆಗೆಯುವ ಪರ್ವತ ಮೇಕೆಗಳ ಬಗ್ಗೆ ನಿಮಗೆಷ್ಟು ಗೊತ್ತು..!

04:20 PM Mar 20, 2021 | Team Udayavani |

ಜಗತ್ತಿನಲ್ಲಿ ನಾವು ಕಂಡು ಕೇಳರಿಯದ ಜೀವ ವೈವಿಧ್ಯತೆ ಇದೆ. ಇಂತಹ ಪ್ರಾಣಿಗಳು ಈ ಪ್ರಪಂಚದಲ್ಲಿ ಇದೆಯಾ? ಎಂಬಷ್ಟರಮಟ್ಟಿಗೆ ಆಶ್ಚರ್ಯ ಪಡುವಂತಹ ಪ್ರಾಣಿಗಳು ಇವೆ. ಸಂಶೋಧನೆ ಮಾಡುತ್ತಾ ಹೋದಂತೆ ಹೊಸ ಹೊಸ ಜೀವಿಗಳ ಆವಿಷ್ಕಾರ ಆಗ್ತಾನೆ ಇದೆ. ಅಲ್ಲದೆ ಅಪರೂಪದ ಪ್ರಾಣಿಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇವೆ. ಈ ಅಪರೂಪದ ಪ್ರಾಣಿಗಳ ಪಟ್ಟಿಯಲ್ಲಿ ನಾವು ಪರ್ವತ ಮೇಕೆ (ಮೌಂಟೇನ್ ಗೋಟ್)ನ್ನು ಸೇರಿಸಬಹುದು. ಯಾಕಂದ್ರೆ ಅದರ ಜೀವನ ಶೈಲಿ ಮತ್ತು ಆಹಾರ ಪದ್ದತಿ ವಿಶೇಷವಾಗಿರುತ್ತದೆ. ಹಾಗಾದ್ರೆ ಬನ್ನಿ ಈ ಪರ್ವತ ಮೇಕೆಯ ಬಗ್ಗೆ ತಿಳಿಯೋಣ.

Advertisement

ಸಾಮಾನ್ಯವಾಗಿ ನೀವು ನ್ಯಾಷನಲ್ ಜಿಯೋಗ್ರಫಿ ವಾಹಿನಿಯಲ್ಲಿ ಈ ಪ್ರಾಣಿಯನ್ನು ನೋಡಿರಬಹುದು. ನೋಡಲು ಸಾಮಾನ್ಯ ಮೇಕೆಗಳಂತೆ ಇದ್ದರೂ ಕೂಡ ಇದರ ಜೀವನವೇ ಬೇರೆ. ಈ ಪ್ರಾಣಿಯ ವಿಶೇಷ ಏನು ಅಂದರೆ ಆಹಾರವನ್ನು ಅಥವಾ ಮೇವನ್ನು ಅರಸಿಕೊಂಡು ಬೆಟ್ಟದ ತುದಿಗೆ ಹೋಗುತ್ತವೆ. ಅಲ್ಲದೆ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಸಲೀಸಾಗಿ ನೆಗೆಯುವ ಚಾಣಾಕ್ಷ ಬುದ್ದಿ ಮತ್ತು ಶಕ್ತಿ ಈ ಪರ್ವತ ಮೇಕೆಗಳಿಗಿದೆ.

ಪ್ರಕೃತಿ ವೈಶಿಷ್ಟ್ಯಗಳಲ್ಲಿ ಈ ಪರ್ವತ ಮೇಕೆ ಕೂಡ ಒಂದು. ಈ ಪ್ರಾಣಿಗಳು ಹೆಚ್ಚಾಗಿ ಉತ್ತರ ಅಮೆರಿಕದ ಆಲ್ಫೆನ್ ಮತ್ತು ಉಪ ಆಲ್ಫೇನ್ ಪ್ರದೇಶದಲ್ಲಿ ಕಂಡು ಬರುತ್ತವೆ. ಉತ್ತರ ಅಮೇರಿಕ ಹೊರತು ಪಡಿಸಿದರೆ ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಈ ಮೇಕೆಗಳು ಕಂಡು ಬರುತ್ತವೆ.

Advertisement

ಉತ್ತರ ಅಮೆರಿಕಾದಲ್ಲಿ ಕಂಡುಬರುವ ಕಡಿದಾದ ಮತ್ತು ಕೊರಕಲು ಪ್ರದೇಶಗಳನ್ನು ನೋಡಿದ್ರೆ ಎಂತವರಿಗೂ ಭಯ ಆಗುತ್ತದೆ. ಅಂತಹ ಕಡಿದಾದ ಪ್ರದೇಶಗಳನ್ನು ಕೂಡ ಮೇಕೆಗಳು ಸಲೀಸಾಗಿ ಹತ್ತುತ್ತವೆ. ತನ್ನ ಗೊರಸೆ ಕಾಲುಗಳನ್ನು ಬಳಸಿಕೊಂಡು ನಾಜೂಕಾಗಿ ಬೆಟ್ಟವನ್ನು ಏರುತ್ತವೆ.

ಪರ್ವತ ಮೇಕೆಗಳು ಎತ್ತರ ಪ್ರದೇಶವನ್ನು ಏರಲು ಕಾರಣ : ಹೌದು ಈ ಪ್ರಾಣಿಗೆ ನೆಲದ ಮೇಲೆ ಆಹಾರ ಸಿಕ್ಕಿದರೂ ಕೂಡ ಪರ್ವತ, ಕಡಿದಾದ ಪ್ರದೇಶಗಳನ್ನು ಏಕೆ ಏರುತ್ತದೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ. ಆದ್ರೆ ಪರ್ವತ ಮೇಕೆಗಳು ಬೆಟ್ಟಗಳನ್ನು ಏರಲು ಕಾರಣ ಇದೆ. ಈ ರೀತಿ ಟ್ರಕ್ಕಿಂಗ್ ಮಾಡುವುದು ಈ ಮೇಕೆಗಳಿಗೆ ಪಾರಂಪರಿಕವಾಗಿ ಬಂದ ಗುಣ. ಅಂದ್ರೆ ಅನುವಂಶಿಯವಾಗಿ ಬಂದಿರುವ ಗುಣ ಅಂದ್ರೆ ತಪ್ಪಾಗುವುದಿಲ್ಲ.

ಉತ್ತರ ಅಮೆರಿಕಾದಲ್ಲಿ ಕಂಡುಬರುವ ಕಡಿದಾದ ಮತ್ತು ಕೊರಕಲು ಪ್ರದೇಶಗಳನ್ನು ನೋಡಿದ್ರೆ ಎಂತವರಿಗೂ ಭಯ ಆಗುತ್ತದೆ. ಅಂತಹ ಕಡಿದಾದ ಪ್ರದೇಶಗಳನ್ನು ಕೂಡ ಮೇಕೆಗಳು ಸಲೀಸಾಗಿ ಹತ್ತುತ್ತವೆ. ತನ್ನ ಗೊರಸೆ ಕಾಲುಗಳನ್ನು ಬಳಸಿಕೊಂಡು ನಾಜೂಕಾಗಿ ಬೆಟ್ಟವನ್ನು ಏರುತ್ತವೆ.

ಇವು ತನ್ನ ಜೀವಮಾನದಲ್ಲಿಯೇ ಅದೆಷ್ಟೋ ಬೆಟ್ಟ ಗುಡ್ಡಗಳನ್ನು ಸಲೀಸಾಗಿ ಹತ್ತುತ್ತವೆ. ಅಲ್ಲದೆ ಈ ಪ್ರಾಣಿಗಳು ಕಾಲು ಜಾರಿ ಕೆಳಗಡೆ ಬಿದ್ದ ಉದಾಹರಣೆಗಳೇ ಇಲ್ಲವಂತೆ. ಆದ್ರೆ ಪರ್ವತ ಮೇಕೆಗಳಿಗೆ ನಿಜವಾದ ಶತ್ರು ಯಾವುದು ಅಂದ್ರೆ ಬೆಟ್ಟಗಳ ಮೇಲೆ, ಹಿಮದಲ್ಲಿ ವಾಸಿಸುವ ಹಿಮ ಸಿಂಹ ಮತ್ತು ಪರ್ವತ ಸಿಂಹಗಳು. ಒಂಟಿಯಾಗಿ ಓಡಾಡುವ ಮೇಕೆಗಳನ್ನು ಸಿಂಹಗಳು ಭೇಟೆಯಾಡುವ ಕಾರಣಗಳಿಂದ ಸಿಂಹಗಳಿಗೆ ಈ ಮೇಕೆಗಳು ಹೆದರುತ್ತವೆ.

ಪರ್ವತ ಮೇಕೆಗಳ ಉಣ್ಣೆಗಳಿಗೆ ಭಾರೀ ಬೇಡಿಕೆ ಇರುವುದರಿಂದ ಜಗತ್ತಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಆದ್ರೆ ಸದ್ಯದ ಕಾಲಘಟ್ಟದಲ್ಲಿ ಪರ್ವತ ಮೇಕೆಗಳು ಅಳಿವಿನಂಚಿನಲ್ಲಿದ್ದು, ಉತ್ತರ ಅಮೇರಿಕದ ಕೆಲವು ಕಡೆ ಇವುಗಳ ಸಂರಕ್ಷಣಾ ವಲಯಗಳನ್ನು ಮಾಡಲಾಗಿದೆ.

  -ಗಿರೀಶ ಗಂಗನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next