Advertisement
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇವಿಎಂ-ವಿವಿಪ್ಯಾಟ್‌ಗಳ ತಾಂತ್ರಿಕ ವಿಷಯಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು. ಇವಿಎಂನ ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಷಯಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
Related Articles
Advertisement
5 ಕೋಟಿ ಮಂದಿಗೆ ಪ್ರಾತ್ಯಾಕ್ಷಿಕೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ 3.5 ಕೋಟಿ ಜನರಿಗೆ ಇವಿಎಂ ಬಗ್ಗೆ ಪ್ರಾತ್ಯಾಕ್ಷಿಕೆ ನೀಡಲಾಗಿತ್ತು. ಈ ಬಾರಿ ಇಲ್ಲಿವರೆಗೆ 3 ಕೋಟಿಗೂ ಹೆಚ್ಚು ಜನರಿಗೆ ಪ್ರಾತ್ಯಾಕ್ಷಿಕೆ ನೀಡಲಾಗಿದ್ದು, 5 ಕೋಟಿಗೂ ಹೆಚ್ಚು ಜನರಿಗೆ ಪ್ರಾತ್ಯಾಕ್ಷಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ವಿವಿಪ್ಯಾಟ್ ಬಳಕೆಯಿಂದ ಮತದಾನದ ಖಾತರಿ ಸಿಗಲಿದೆ.
ಒಬ್ಬ ಮತದಾರ ಮತ ಚಲಾಯಿಸಿದಾಗ ವಿವಿಪ್ಯಾಟ್‌ನ ಗಾಜಿನ ಕಿಂಡಿಯಲ್ಲಿ ಏಳು ಸೆಕೆಂಡ್‌ವರೆಗೆ ಮತದಾನದ ವಿವಿರ ಪ್ರದರ್ಶನಗೊಳ್ಳುತ್ತದೆ. ಇವಿಎಂ ಮತಯಂತ್ರಗಳ ಜಿಪಿಎಸ್ ವ್ಯವಸ್ಥೆ ಅಳವಡಿಸಿರುವ ವಾಹನಗಳಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಾಗಿಸಲಾಗುತ್ತದೆ.
ರಾಜಕೀಯ ಪಕ್ಷದ ಪ್ರತಿನಿಧಿಗಳ ಬೆಂಗಾವಲಿಗೂ ಅವಕಾಶವಿರುತ್ತದೆ ಎಂದು ಸಂಜೀವ ಕುಮಾರ್ ವಿವರಿಸಿದರು. ಈ ವೇಳೆ ಉಪ ಮುಖ್ಯ ಚುನಾವಣಾಧಿಕಾರಿ ವಿ. ರಾಘವೇಂದ್ರ ಅವರು ಇವಿಎಂ-ವಿವಿಪ್ಯಾಟ್ ಬಗ್ಗೆ ಪ್ರಾತ್ಯಾಕ್ಷಿಕೆ ನೀಡಿದರು. ವಾರ್ತಾ ಇಲಾಖೆ ನಿರ್ದೇಶಕ ಬೃಂಗೇಶ್ ಮತ್ತಿತರರು ಇದ್ದರು.