Advertisement
ಗರ್ಭಧಾರಣೆ ಎಂಬುದು ಪ್ರತಿ ಮಹಿಳೆಗೂ ವಿಶೇಷ ಮತ್ತು ಖುಷಿಯ ಸಂಗತಿ. ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಬಹುತೇಕ ಮಹಿಳೆಯರು ತಾಯಿಯಾಗುವ ಭಾಗ್ಯ ಹೊಂದದೆ ಹತಾಶರಾದವರಿದ್ದಾರೆ. ಅದಕ್ಕಾಗಿಯೇ ತಾಯಿಯಾಗುವುದು ಒಂದು ಅದೃಷ್ಟ ಎನ್ನುತ್ತಾರೆ. ಗರ್ಭಿಣಿಯಾಗಿದ್ದೇನೆಂದು ತಿಳಿದಾಗ ಆ ಮಹಿಳೆ ಪಡುವ ಖುಷಿ ಅಷ್ಟಿಷ್ಟಲ್ಲ. ಆದರೆ, ಆ ಖುಷಿಗೆ ಗರ್ಭಪಾತವು ತಣ್ಣೀರೆರಚುವುದು ಪ್ರಸ್ತುತ ಸಾಮಾನ್ಯ ಎಂಬಂತಾಗಿದೆ.
Related Articles
ದೇಹವು ಗರ್ಭಧಾರಣೆಗೆ ಹೊಂದಿಕೊಳ್ಳದಿರುವುದು ಗರ್ಭಪಾತಕ್ಕೆ ಕಾರಣವಾಗಿದೆ. ಆಧುನಿಕ ಜೀವನಶೈಲಿಯು ಗರ್ಭಪಾತಕ್ಕೆ ಕಾರಣವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಜಂಕ್‌ಫುಡ್ ಸೇವನೆ, ಧೂಮಪಾನ, ಮದ್ಯಪಾನ, ವಿಟಮಿನ್, ಕ್ಯಾಲ್ಸಿಯಂ ಕೊರತೆ, ಮಾನಸಿಕ ಆರೋಗ್ಯದಲ್ಲಿ ಸ್ಥಿರತೆ ಇಲ್ಲದಿರುವುದು, ಅತಿಯಾದ ಒತ್ತಡ, ಮನಸ್ಸನ್ನು ಕಾಡುವ ನೋವುಗಳು ಗರ್ಭಪಾತಕ್ಕೆ ಕಾರಣವಾಗುತ್ತವೆ. ವಯಸ್ಸು, ಸೋಂಕುಗಳು, ಥೈರಾಯ್ಡ, ಮಧುಮೇಹ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದರೂ, ಗರ್ಭಪಾತ ಸಂಭವಿಸುತ್ತದೆ. ಮನಸ್ಸಿನ ಮೇಲಾಗುವ ಆಘಾತಗಳಿಂದ ನೋವನುಭವಿಸುವುದು, ಔಷಧಗಳ ಅಡ್ಡಪರಿಣಾಮ, 35 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸಹಜವಾಗಿ ಗರ್ಭಪಾತ ಸಂಭವಿಸುತ್ತದೆ.
Advertisement
ಗರ್ಭಧಾರಣೆ ಸಮಯದಲ್ಲಿ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದರೊಂದಿಗೆ, ಅನಗತ್ಯ ಯೋಚನೆ, ಹಿಂಸಾತ್ಮಕ ಯೋಚನೆಗಳಿಂದ ಹೊರಬರುವುದು ಅಷ್ಟೇ ಅವಶ್ಯಕ. ಈ ಸಂದರ್ಭದಲ್ಲಿ ಪತಿ, ಮನೆಯವರು ಕಾಳಜಿ ಇದ್ದರಷ್ಟೇ ಸಾಲದು. ಸ್ನೇಹಿತರು, ದೈನಂದಿನ ಜತೆಗಿರುವವರ ಕಾಳಜಿಯೂ ಅಷ್ಟೇ ಪ್ರಾಮುಖ್ಯವಾಗಿರುತ್ತದೆ.
ಸ್ವಾಭಾವಿಕ ಗರ್ಭಪಾತಮೊದಲ ತ್ತೈಮಾಸಿಕದಲ್ಲಿ ಗರ್ಭಪಾತ ಉಂಟಾಗಿದ್ದರೆ ಅದು ಸ್ವಾಭಾವಿಕ ಗರ್ಭಪಾತವಾಗಿರುತ್ತದೆ. ಹಾಗಾಗಿ ಅದು ಸಂಭವಿಸಿದ 2-3 ವಾರಗಳಲ್ಲೇ ಇನ್ನೊಂದು ಗರ್ಭಧಾರಣೆಗೆ ಪ್ರಯತ್ನಿಸಬಹುದು. ಆದರೆ, ಎರಡು ಅಥವಾ ಮೂರನೇ ತ್ತೈಮಾಸಿಕದಲ್ಲಿ ಗರ್ಭಪಾತವಾಗಿದ್ದರೆ, ಮುಂದಿನ ಗರ್ಭಧಾರಣೆಗೆ ಕನಿಷ್ಠ ಮೂರರಿಂದ ಆರು ತಿಂಗಳು ಕಾಯಬೇಕು. ಏಕೆಂದರೆ, ಆ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ಅಸಹಜತೆಗಳು ಉಂಟಾಗಿರುತ್ತದೆ. ವೈದ್ಯರ ಸೂಕ್ತ ತಪಾಸಣೆಯ ನಂತರವೇ ಮುಂದುವರಿಯಬೇಕು. ಪೌಷ್ಟಿಕ ಆಹಾರ ಸೇವಿಸಿ
ಗರ್ಭಾವಸ್ಥೆಯಲ್ಲಿರುವಾಗ ಅತ್ಯುತ್ತಮ ಪೋಷಕಾಂಶಭರಿತ ಆಹಾರವನ್ನು ಮಹಿಳೆಯರು ಸೇವಿಸಬೇಕು. ಆರೈಕೆಯ ವಿಧಾನವೂ ಅಷ್ಟೇ ವ್ಯವಸ್ಥಿತವಾಗಿರಬೇಕು. ಮಹಿಳೆ ಸೇವಿಸುವ ಪ್ರತಿಯೊಂದು ಆಹಾರವೂ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಆಹಾರಕ್ರಮ ರೂಢಿಸಿಕೊಳ್ಳುವುದು ಅತ್ಯಗತ್ಯ. ಪಾಶ್ಚರೀಕರಿಸದ ಡೈರಿ ಉತ್ಪನ್ನಗಳು, ಬೇಯಿಸದ ಮೊಟ್ಟೆ, ಮಾಂಸ, ಮದ್ಯಸೇವನೆ, ಧೂಮಪಾನ, ಮಾದಕ ದ್ರವ್ಯಗಳ ಬಳಕೆಯನ್ನು ಮಾಡಲೇಬಾರದು. ಮಾನಸಿಕ ಆರೋಗ್ಯ ಮುಖ್ಯ
ಆರೋಗ್ಯ ಸ್ಥಿತಿ ಮತ್ತು ದಿನಚರಿಗಳು ಸೂಕ್ತ ರೀತಿಯಲ್ಲಿ ಇದ್ದರೆ ಆರೋಗ್ಯವಂತ ಮಗು ಪಡೆಯಲು ಸಾಧ್ಯ. ಇಲ್ಲವಾದರೆ ಸಾಕಷ್ಟು ರೀತಿಯ ಸಮಸ್ಯೆಗಳು ಬಂದೊದಗುತ್ತವೆ. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಗರ್ಭಧಾರಣೆಗೆ ಬಹುಮುಖ್ಯ. ಆರೋಗ್ಯದ ಬಗ್ಗೆ ಸೂಕ್ತ ವೈದ್ಯರಲ್ಲಿ ಸಂಪೂರ್ಣ ತಪಾಸಣೆ ನಡೆಸಿ ಸಮಸ್ಯೆ ಕಂಡು ಬಂದಲ್ಲಿ ಅದಕ್ಕೆ ಮೊದಲು ಚಿಕಿತ್ಸೆ ಪಡೆಯಿರಿ. ಅನಂತರವಷ್ಟೇ ಗರ್ಭಧಾರಣೆಗೆ ಮುಂದಾಗಬೇಕು. ಬಳಿಕ ವೈದ್ಯರ ಸಲಹೆಯೊಂದಿಗೇ ಒಂಬತ್ತು ತಿಂಗಳನ್ನು ಕಳೆಯಬೇಕಾದುದು ಬಹುಮುಖ್ಯ. ವೈದ್ಯರ ಸಲಹೆ ಅಗತ್ಯ
ಗರ್ಭಧಾರಣೆಗೆ ಪ್ರಯತ್ನಿ ಸುವವರು ಮೊದಲಾಗಿ ದೈಹಿಕ, ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಬೇಕು. ಆಹಾರಕ್ರಮ ದೇಹಕ್ಕೆ ಪೂರಕವಾಗುವಂತಿರಬೇಕು. ಗರ್ಭಪಾತವಾಗುವ ಯಾವುದೇ ಮುನ್ಸೂ ಚನೆ ಎದುರಾದರೂ ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.
– ಡಾ| ಸವಿತಾ, ವೈದ್ಯರು - ಧನ್ಯಾ ಬಾಳೆಕಜೆ