Advertisement
ನಗರದ ಬಸವೇಶ್ವರ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ಆರ್‌ಎಸ್‌ಎಸ್ ನಗರ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡಿದರು.
Related Articles
Advertisement
ದೇಶ ಮೊದಲು: ದೇಶ ಮೊದಲು ಎಂಬ ಗುರಿ-ಆಶಯದ ನಿಟ್ಟಿನಲ್ಲಿ ಸಂಘ ದಿಟ್ಟ ಹೆಜ್ಜೆ ಇಡುತ್ತಿದೆ. ಪ್ರತಿಯೊಬ್ಬರ ಮನದಲ್ಲೂ ದೇಶಭಕ್ತಿ ಅರಳಿಸುವುದೇ ಸಂಘದ ಮೂಲ ಧ್ಯೇಯ. ಯಾವುದೇ ಸ್ವಾರ್ಥ-ಅಹಂಕಾರ ಸಂಘಕ್ಕಿಲ್ಲ. ಹಿಂದೂ ಸಮಾಜದ ಮೇಲೆ ಸಂಘಕ್ಕೆ ನಂಬಿಕೆ ಇದೆ. ಇಂದು ಹಲವಾರು ಸವಾಲುಗಳು ನಮ್ಮೆದುರು ಇವೆ. ಹಣ-ಮತಾಂತರ-ಭಯೋತ್ಪಾದನೆ ಮೂಲಕ ಹಿಂದೂ ಸಮಾಜ ಛಿದ್ರಗೊಳಿಸಬೇಕೆನ್ನುವ ಮನಸ್ಸುಗಳಿವೆ. ನಮ್ಮ ದೇಶದಲ್ಲಿರುವ ಕ್ರಿಶ್ಚಿಯನ್, ಮುಸ್ಲಿಂರೂ ಹೊರಗಿನಿಂದ ಬಂದವರಲ್ಲ. ಆದರೆ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮೂಡಬೇಕಿದೆ. ಸಂಘಕ್ಕೆ ಯಾರೂ ಶತ್ರುಗಳಿಲ್ಲ. ಜಾತಿ ಪದ್ಧತಿಯೇ ಇಂದು ದೊಡ್ಡ ಸವಾಲಾಗಿದೆ. ಮನೆಯೊಳಗೆ ಪೂಜೆಯ ಪದ್ಧತಿ ಯಾವುದೇ ಇರಲಿ, ಹೊರಗೆ ಬಂದರೆ ನಾವೆಲ್ಲ ಹಿಂದೂಗಳೆಂಬುದು ದೃಢವಾಗಿರಬೇಕು. ಜಾತಿ ವ್ಯವಸ್ಥೆ-ಮೇಲು-ಕೀಳು ಹೋಗಲಾಡಿಸಬೇಕು. ಇದು ಸಂಘದ ಮೂಲ ಗುರಿಯಾಗಿದೆ ಎಂದು ಹೇಳಿದರು.
ತೋಟಗಾರಿಕೆ ವಿವಿಯ ಕುಲಪತಿ ಡಾ| ಕೆ.ಎಂ. ಇಂದಿರೇಶ, ಆರ್‌ಎಸ್‌ಎಸ್ ಉತ್ತರ ಪ್ರಾಂತ ಸಹ ಸಂಘ ಚಾಲಕ ಅರವಿಂದರಾವ ದೇಶಮುಖ ಮುಂತಾದವರು ಉಪಸ್ಥಿತರಿದ್ದರು.
ಭವ್ಯ ಪಥ ಸಂಚಲನ ನಗರ ವಾರ್ಷಿಕೋತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂ ಸೇವಕರಿಂದ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಎರಡು ಮಾರ್ಗಗಳಲ್ಲಿ ಬಸವೇಶ್ವರ ಕಾಲೇಜು ಮೈದಾನದಿಂದ ಆರಂಭಗೊಂಡ ಪಥ ಸಂಚಲನಗಳು, ಒಂದು ಮಾರ್ಗ ಒಂದು ಮಾರ್ಗ ಕರವೀರ ಮಠ, ಶಿರೂರ ಅಗಸಿ, ಕಿಣಗಿ ಕ್ರಾಸ್, ಹುಂಡೇಕಾರ ಗಲ್ಲಿ ಕ್ರಾಸ್, ಚರಂತಿಮಠ, ಮಾರವಾಡಿ ಗಲ್ಲಿ ಕ್ರಾಸ್, ಜವಳಿ ಚೌಕ, ಶಾರದಾ ಪ್ರಸ್ ಕ್ರಾಸ್, ಹಳಪೇಟ ಕ್ರಾಸ್, ಭಾವಸಾರ ಗಜಾನನ ಚೌಕ, ಕೊಪ್ಪ ಆಸ್ಪತ್ರೆ, ಶಿವಾಜಿ ಸರ್ಕಲ್, ಹಳೆಯ ಅಂಚೆ ಕಚೇರಿ, ಶ್ರೀ ವೆಂಕಟೇಶ್ವರ ದೇವಸ್ಥಾನ, ವಲ್ಲಭಬಾಯಿ ಚೌಕ ಮೂಲಕ ಹಾಯ್ದು ಬಸವೇಶ್ವರ ವೃತ್ತಕ್ಕೆ ಆಗಮಿಸಲಿದೆ. ಇನ್ನೊಂದು ಮಾರ್ಗದಲ್ಲಿ ಬಸವೇಶ್ವರ ಕಾಲೇಜು ಮೈದಾನದಿಂದ ಆರಂಭಗೊಳ್ಳುವ ಪಥ ಸಂಚಲನ, ಸಾಸನೂರ ಪೆಟ್ರೋಲ್ ಬಂಕ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ಸರ್ಕಲ್, ಶಾಂತಿ ನಗರ ಕ್ರಾಸ್, ಹಳೆಯ ಐಬಿ ಕ್ರಾಸ್, ಹರಣಶಿಕಾರಿ ಗಲ್ಲಿ, ವಾಸವಿ ಚಿತ್ರ ಮಂದಿರ, ದರ್ಗಾ ನಗರ ಕ್ರಾಸ್, ಶಾರದಾ ಲಾಡ್ಜ, ಹೊಳೆ ಆಂಜನೇಯ ದೇವಸ್ಥಾನದ ಮೂಲಕ ಹಾಯ್ದು ಬಸವೇಶ್ವರ ವೃತ್ತ ತಲುಪಿದವು. ಎರಡೂ ಮಾರ್ಗಗಳು, ಬಸವೇಶ್ವರ ವೃತ್ತದಲ್ಲಿ ಸಂಗಮಗೊಂಡ ದೃಶ್ಯ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಅಲ್ಲದೇ ದೇಶದ ಮಹಾನ್ ನಾಯಕರ, ವೇಷಧರಿಸಿದ ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಗಮನ ಸೆಳೆದರು. ಪಥ ಸಂಚಲನ ಸಂಚರಿಸುವ ಮಾರ್ಗದ ರಸ್ತೆಗಳಿಗೆ ತಳಿರು ತೋರಣ ಕಟ್ಟಿ-ರಂಗೋಲಿ ಹಾಕಿ, ಹೂವುಗಳಿಂದ ಅಲಂಕಾರ ಮಾಡಿ ಸ್ವಾಗತಿಸಲಾಯಿತು.
ಹಲವಾರು ಸವಾಲುಗಳು ನಮ್ಮೆದುರು ಇವೆ. ಹಣ-ಮತಾಂತರ-ಭಯೋತ್ಪಾದನೆ ಮೂಲಕ ಹಿಂದೂ ಸಮಾಜ ಛಿದ್ರಗೊಳಿಸಬೇಕೆನ್ನುವ ಮನಸ್ಸುಗಳಿವೆ. ನಮ್ಮ ದೇಶದಲ್ಲಿರುವ ಕ್ರಿಶ್ಚಿಯನ್, ಮುಸ್ಲಿಂರೂ ಹೊರಗಿನಿಂದ ಬಂದವರಲ್ಲ. ಆದರೆ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮೂಡಬೇಕಿದೆ. ಸಂಘಕ್ಕೆ ಯಾರೂ ಶತ್ರುಗಳಿಲ್ಲ. ಜಾತಿ ಪದ್ಧತಿಯೇ ಇಂದು ದೊಡ್ಡ ಸವಾಲಾಗಿದೆ. ಮನೆಯೊಳಗೆ ಪೂಜೆಯ ಪದ್ಧತಿ ಯಾವುದೇ ಇರಲಿ, ಹೊರಗೆ ಬಂದರೆ ನಾವೆಲ್ಲ ಹಿಂದೂಗಳೆಂಬುದು ದೃಢವಾಗಿರಬೇಕು. -ನರೇಂದ್ರ, ಪ್ರಾಂತ ಪ್ರಚಾರಕರು, ಕರ್ನಾಟಕ ಉತ್ತರ, ಆರ್‌ಎಸ್‌ಎಸ್