Advertisement

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ಸಿಎಎ, ನೀಟ್‌ ರದ್ದತಿ: ಡಿಎಂಕೆ

12:49 AM Mar 21, 2024 | Team Udayavani |

ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಐಎನ್‌ಡಿಐಎ ಒಕ್ಕೂಟ ಅಧಿಕಾರಕ್ಕೆ ಬಂದರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ನೀಟ್‌ ರದ್ದು ಮಾಡುವುದಾಗಿ ಡಿಎಂಕೆ ಬುಧವಾರ ಭರವಸೆ ನೀಡಿದೆ.
ಬಿಜೆಪಿ ನೇತೃತ್ವದ ಮೈತ್ರಿಕೂಟವಾದ ಎನ್‌ಡಿಎಯನ್ನು ಮಣಿಸಿ ಈ ಬಾರಿ ಅಧಿಕಾರಕ್ಕೇರಲು ಸಕಲ ಸಿದ್ಧತೆ ಆರಂಭಿಸಿರುವ ಐಎನ್‌ಡಿಐಎ ಮೈತ್ರಿಕೂಟದ ಪರವಾಗಿ ಡಿಎಂಕೆ ಪ್ರಣಾಳಿಕೆಯನ್ನು ಬಿಡು ಗಡೆ ಮಾಡಿದೆ.

Advertisement

ಇದಲ್ಲದೇ ಜಮ್ಮು ಕಾಶ್ಮೀರ ಮತ್ತು ಪುದುಚೆರಿಗಳಿಗೆ ರಾಜ್ಯದ ಸ್ಥಾನಮಾನ ನೀಡಲಾಗುವುದು. ಜಮ್ಮು   ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲಾಗುವುದು ಎಂದು ವಾಗ್ಧಾನ ಮಾಡಿದೆ. ರಾಜ್ಯಪಾಲರನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ಒದಗಿಸಲಾಗು ವುದು. ರಾಜ್ಯ ಪಾಲರನ್ನು ಕ್ರಿಮಿನಲ್‌ ವಿಚರಣೆಯಿಂದ ರಕ್ಷಿಸುವ 361ನೇ ವಿಧಿಯನ್ನು ರದ್ದು ಮಾಡಲಾಗುವುದು, ಚೆನ್ನೈಯಲ್ಲಿ ಸುಪ್ರೀಂ ಕೋರ್ಟ್  ಪೀಠವನ್ನು ಸ್ಥಾಪನೆ ಮಾಡಲಾಗುವುದು, ನೂತನ ಶಿಕ್ಷಣ ನೀತಿಯನ್ನು ರದ್ದು ಮಾಡಲಾಗುವುದು, ಶಾಲೆಗಳಲ್ಲಿ ಮುಂಜಾನೆ ಊಟ ನೀಡಲಾಗುವುದು, ಟೋಲ್‌ಗೇಟ್‌ಗಳನ್ನು ರದ್ದು ಮಾಡ ಲಾಗುವುದು ಎಂದೂ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಪ್ರಣಾಳಿಕೆಯಲ್ಲೇನಿದೆ?
ನೀಟ್‌, ಸಿಎಎ, ಎನ್‌ಇಪಿ, ಟೋಲ್‌ಗೇಟ್‌ ರದ್ದು
ಜಮ್ಮು ಕಾಶ್ಮೀರ, ಪುದು ಚೆರಿಗೆ ರಾಜ್ಯ ಸ್ಥಾನಮಾನ
ಚೆನ್ನೈಯಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪನೆ
ಶಾಲಾ ಮಕ್ಕಳಿಗೆ ಮುಂಜಾನೆಯ ಉಪಹಾರ
ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ
ಐಐಟಿ, ಐಐಎಂ, ಐಐಎಸ್‌ಸಿಗಳ ಸ್ಥಾಪನೆ

ಕರ್ನಾಟಕ ಮಾದರಿಯಲ್ಲಿ ಮಹಿಳೆಯರಿಗೆ ಸಹಾಯ

ಐಎನ್‌ಡಿಐಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಎಲ್ಲ ಮಹಿಳೆಯರಿಗೂ ಮಾಸಿ ಕ 1,000 ರೂ. ನೀಡುವುದಾಗಿ ಡಿಎಂಕೆ ಘೋಷಿಸಿದೆ. ಈ ರೀತಿ ಮಹಿಳೆಯರಿಗೆ ಹಣ ಸಹಾಯ ಒದಗಿಸುವ ಯೋಜನೆಯನ್ನು ಕರ್ನಾಟಕ ದಲ್ಲಿ ಈಗಾಗಲೇ ಕಾಂಗ್ರೆಸ್‌ ಸರಕಾರ ಜಾರಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next