Advertisement

SSLC ಸಾಧಕರು: ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಟೋರಿಕ್ಷಾ ಚಾಲಕನ ಮಗ

04:24 PM Aug 10, 2020 | keerthan |

ದಾವಣಗೆರೆ: ಇಂದು ಪ್ರಕಟಗೊಂಡ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆ ಹರಿಹರದ ಎಂಕೆಟಿಎಲ್ ಕೆ ಶಾಲೆಯ ವಿದ್ಯಾರ್ಥಿ ಎಂ. ಅಭಿಷೇಕ್ ಕನ್ನಡ ಮಾಧ್ಯಮದಲ್ಲಿ 625 ಕ್ಕೆ 623 ಅಂಕ ಗಳಿಸಿದ್ದಾನೆ. ಬಡತನ ಕುಟುಂಬದ ಬಂದ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಈತ ಕನ್ನಡದಲ್ಲಿ125, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ ವಿಷಯದಲ್ಲಿ ನೂರಕ್ಕೆ ನೂರು, ಸಮಾಜದಲ್ಲಿ 98 ಅಂಕ ಪಡೆದಿದ್ದಾನೆ.

Advertisement

ಕನ್ನಡ ಮಾಧ್ಯಮದಲ್ಲಿ 623 ಅಂಕ ಪಡೆದಿರುವ ವಿಷಯ ತಿಳಿದು ಖುಷಿ ಆಗಿದೆ. ನಾನು ಒಳ್ಳೆಯ ಅಂಕ ಪಡೆಯುತ್ತೇನೆ ಎನ್ನುವ ವಿಶ್ವಾಸ ಇತ್ತು. ಎಲ್ಲಾ ವಿಷಯದಲ್ಲಿ ನೂರಕ್ಕೆ ನೂರು ಬರಬಹುದು ಅಂದುಕೊಂಡಿರಲಿಲ್ಲ. ನಾಲ್ಕು ಸಬ್ಜೆಕ್ಟ್ ನಲ್ಲಿ ಬಂದಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಮುಂದೆ ಸೈನ್ಸ್ ತೆಗೆದುಕೊಂಡು ಆಮೇಲೆ ಇಂಜಿನಿಯರಿಂಗ್ ಮಾಡುವ ಆಸೆ ಇದೆ. ಯಾವ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಬೇಕು ಎಂದೇನು ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಇಂಜಿನಿಯರಿಂಗ್ ಮಾಡಿ, ನನ್ನ ತಂದೆ ತಾಯಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ವ್ಯಕ್ತಪಡಿಸಿದರು.

ಅಭಿಷೇಕ್ ತಂದೆ ಮಂಜುನಾಥ್ ಆಟೋರಿಕ್ಷಾ ಚಾಲಕರಾಗಿದ್ದು ಈಗ ಕ್ರೂಸರ್ ತೆಗೆದುಕೊಂಡು ಬಾಡಿಗೆ ಮಾಡುತ್ತಿದ್ದಾರೆ. ಮಗನ ಫಲಿತಾಂಶ ಬಂದಾಗ ಬಾಡಿಗೆಗಾಗಿ ಹಾವೇರಿಗೆ ಹೋಗಿದ್ದರು. ದಿನಗಟ್ಟಲೆ ಓದುವುದಕ್ಕಿಂತಲೂ ಪ್ರತಿಯೊಂದನ್ನೂ ಮನಸಿಟ್ಟು ಓದಬೇಕು ಎನ್ನುವುದು ಅಭಿಷೇಕ್ ಅಳವಡಿಸಿ ಕೊಂಡಿರುವ ಮಾರ್ಗ. ಲಾಕ್ ಡೌನ್ ಸಂದರ್ಭವನ್ನು ಓದುವುದಕ್ಕೆ ಚೆನ್ನಾಗಿ ಬಳಸಿಕೊಂಡೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next