Advertisement
ಅಭಿಷೇಕ್-ಜ್ಯೋತಿ ಜೋಡಿ ಫೈನಲ್‌ನಲ್ಲಿ ಚೈನೀ ಸ್ ತೈಪೆಯ ಯಿ ಸುವಾನ್ ಚೆನ್-ಚೀ ಲುಹ್ ಚೆನ್ ವಿರುದ್ಧ 158-151 ಅಂಕಗಳ ಮೇಲುಗೈ ಸಾಧಿಸಿದರು.
ಇದಕ್ಕೂ ಮೊದಲು ನಡೆದ ಪುರುಷರ ಕಂಪೌಂಡ್ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮ ಚಿನ್ನದ ಪದಕ ಕಳೆದುಕೊಂಡು ನಿರಾಸೆ ಅನುಭವಿಸಿದ್ದರು. ಅಭಿಷೇಕ್ ವರ್ಮ, ರಜತ್ ಚೌಹಾಣ್, ಮೋಹನ್ ಭಾರದ್ವಜ್ ಅವರನ್ನೊಳಗೊಂಡ ಭಾರತ ತಂಡ ಕೊರಿಯಾ ವಿರುದ್ಧ ಕೇವಲ ಒಂದಂಕದ ಹಿನ್ನಡೆ ಅನು ಭವಿಸಿ (232-233) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ವನಿತಾ ಕಂಪೌಂಡ್ ತಂಡ ವಿಭಾಗದಲ್ಲೂ ಭಾರತ 215-231 ಅಂಕಗಳಿಂದ ಕೊರಿಯಾ ವಿರುದ್ಧ ಸೋತು ಚಿನ್ನ ಕಳೆದುಕೊಂಡಿತು. ಜ್ಯೋತಿ ಸುರೇಖಾ ವೆನ್ನಮ್, ಮುಸ್ಕಾನ್ ಕಿರಾರ್, ಪ್ರಿಯಾ ಗುರ್ಜರ್ ಭಾರತ ತಂಡದಲ್ಲಿದ್ದರು.
ಆದರೆ ಮಿಶ್ರ ಕಂಪೌಂಡ್ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್-ಜ್ಯೋತಿ ಭರ್ಜರಿಯಾಗಿ ತಿರುಗಿ ಬಿದ್ದರು. ಆರಂಭದಿಂದಲೇ ನಿಖರ ಗುರಿ ಕಂಡುಕೊಳ್ಳುವ ಮೂಲಕ ಚೈನೀಸ್ ತೈಪೆ ಎದುರಾಳಿಗಳನ್ನು ಹಿಂದಿಕ್ಕಿದರು.
Related Articles
Advertisement