Advertisement

ಅಭಿನಂದನ್ ಪೋಷಕರಿಗೆ ವಿಮಾನ ಪ್ರಯಾಣಿಕರಿಂದ ವಿಶೇಷ ಗೌರವ

11:20 AM Mar 01, 2019 | Karthik A |

ನವದೆಹಲಿ: ಪಾಕಿಸ್ಥಾನದ ಯುದ್ಧವಿಮಾನವನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ತಾನು ಚಲಾಯಿಸುತ್ತಿದ್ದ ಮಿಗ್ ವಿಮಾನ ಪತನಗೊಂಡು ಪಾಕಿಸ್ಥಾನದ ನೆಲದಲ್ಲಿ ಸೆರೆಯಾದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ತಾಯ್ನೆಲಕ್ಕೆ ವಾಪಾಸಾಗುತ್ತಿದ್ದಾರೆ. ಅಭಿನಂದನ್ ಅವರನ್ನು ಎದರುಗೊಳ್ಳಲು ಅವರ ಹೆತ್ತವರು ಮತ್ತು ಅವರ ಪತ್ನಿ ನಿನ್ನೆ ಸಾಯಂಕಾಲ ಚೆನ್ನೈನಿಂದ ಹೊರಟು ವಾಘಾ ಗಡಿಗೆ ಬಂದಿದ್ದಾರೆ.

Advertisement

ಅಭಿನಂದನ್ ಹೆತ್ತವರು ಮತ್ತು ಅವರ ಪತ್ನಿ ಚೆನ್ನೈನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅವರಿಗೊಂದು ಅಚ್ಚರಿ ಕಾದಿತ್ತು. ದೇಶದ ವೀರಪುತ್ರನ ಹೆತ್ತವರನ್ನು ಗುರುತಿಸಿದ ವಿಮಾನದಲ್ಲಿದ್ದ ಇತರೇ ಪ್ರಯಾಣಿಕರು ಅವರಿಗೆ ವಿಮಾನದೊಳಗೆಯೇ ಎದ್ದುನಿಂತು ಗೌರವವನ್ನು ಸಲ್ಲಿಸಿದ್ದಾರೆ. ದೆಹಲಿಯಲ್ಲಿ ವಿಮಾನ ಲ್ಯಾಂಡಿಂಗ್ ಆಗಿ ಪ್ರಯಾಣಿಕರೆಲ್ಲಾ ಇಳಿಯುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು. ಆ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪ್ರಯಾಣಿಕರ ಈ ವರ್ತನೆಗೆ ದೇಶದೆಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರ ಈ ಅನಿರೀಕ್ಷಿತ ಗೌರವಕ್ಕೆ ಅಭಿನಂದನ್ ಅವರ ತಂದೆ ಮತ್ತು ತಾಯಿ ಹಾಗೂ ಅವರ ಪತ್ನಿ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next