Advertisement

Mangaluru”ಅಭಿಮತ’ ಟಿವಿ ಪಂಚಮ ಸಂಭ್ರಮ: “ಸಮಾಜಕ್ಕೆ ಅರ್ಪಣೆ ಧರ್ಮ ಕಾರ್ಯ’

12:02 AM Sep 04, 2023 | Team Udayavani |

ಮಂಗಳೂರು: ನಮ್ಮ ಸಂಪಾದನೆಯ ಒಂದು ಪಾಲನ್ನು ಸಮಾಜಕ್ಕೆ ನೀಡುವುದು ಧರ್ಮದ ಕಾರ್ಯ ಎಂದು ಮುಂಬಯಿ ಹೇರಂಭಾ ಗ್ರೂಪ್‌ ಆಫ್ ಇಂಡಸ್ಟ್ರೀಸ್‌ನ ಕನ್ಯಾನ ಸದಾಶಿವ ಶೆಟ್ಟಿ ಹೇಳಿದ್ದಾರೆ.

Advertisement

ರವಿವಾರ ಕೆಪಿಟಿ ಸಮೀಪದ ಶರಬತ್‌ಕಟ್ಟೆ ಶ್ರೀನಿ ಟವರ್‌ನಲ್ಲಿ “ಅಭಿಮತ’ ಟಿವಿಯ ಪಂಚಮ ಸಂಭ್ರಮ ಹಾಗೂ ಸುಸಜ್ಜಿತ ಕೇಂದ್ರ ಕಚೇರಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಧ್ಯಮ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ಪರ್ಧೆ, ಸವಾಲುಗಳಿವೆ. ಅನುಭವಿ ಪರ್ತಕರ್ತೆ, ಸಮರ್ಥ ಮಹಿಳೆ ಡಾ| ಮಮತಾ ಶೆಟ್ಟಿ ಅವರು ಧೈರ್ಯದಿಂದ ಸವಾಲುಗಳನ್ನು ಎದುರಿಸಿ “ಅಭಿಮತ’ ಚಾನೆಲ್‌ನ್ನು ಕಟ್ಟಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದು ಸಮಾಜಸೇವೆಯೂ ಹೌದು. ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.

ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿ, ಸಮಾಜದ ಸೇವೆ ಮಾಡುವುದು ಮಾಧ್ಯಮಗಳ ಪ್ರಮುಖ ಕೆಲಸ. ಅಭಿಮತ ಟಿವಿ ತುಳುನಾಡಿನ ಸಂಸ್ಕೃತಿಯ ಪ್ರಸಾರಕ್ಕೂ ಆದ್ಯತೆ ನೀಡುತ್ತಾ ಬಂದಿದೆ ಎಂದರು.

ಜನಮನ ಗೆದ್ದ ಅಭಿಮತ
ಅಭಿಮತ ಟಿವಿಯ ಮುಖ್ಯಸ್ಥೆ ಡಾ| ಮಮತಾ ಪಿ. ಶೆಟ್ಟಿ ಮಾತನಾಡಿ, 2018ರ ಮಾ. 1ರಂದು ಆರಂಭಗೊಂಡ “ಅಭಿಮತ’ ಟಿವಿ ಚಾನೆಲ್‌ ಮನೆ-ಮನಗಳನ್ನು ತಲುಪಿದೆ. ಟೀಕೆಗಳನ್ನು ಕೂಡ ಸವಾಲಾಗಿ ಸ್ವೀಕರಿಸಿ ಮುನ್ನಡೆದಿದ್ದೇವೆ. ಕನ್ಯಾನ ಸದಾಶಿವ ಶೆಟ್ಟಿ ಅವರ ಮುಂದಾಳತ್ವದಲ್ಲಿ ಅ. 1ರಿಂದ ಕಾಸರಗೋಡು ಸಹಿತ ಕರಾವಳಿ ಜಿಲ್ಲೆಯಾದ್ಯಂತ ಹೊಸತನದೊಂದಿಗೆ ಪ್ರಸಾರವಾಗಲಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಲಾಭದ ಒಂದು ಪಾಲನ್ನು ಸಮಾಜದ ಅಶಕ್ತರಿಗೆ ನೀಡುವ ಉದ್ದೇಶವಿದೆ ಎಂದರು.

Advertisement

ಶಾಸಕ ವೇದವ್ಯಾಸ ಕಾಮತ್‌, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅನಘಾ ರಿಫೈನರೀಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಎನ್‌.ವಿ. ಶಾಂಭಶಿವಾ ರಾವ್‌, ಮಾಜಿ ಸಚಿವ ಬಿ.ರಮಾನಾಥ ರೈ, ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮನಪಾ ಸದಸ್ಯೆ ಶಕೀಲಾ ಕಾವಾ, ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ. ಸುಬ್ಬಯ್ಯ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಸರಕಾರಿ ಮಹಿಳಾ ಐಟಿಐ ಪ್ರಾಂಶುಪಾಲೆ ಶಿವಕುಮಾರ್‌, ತಾ.ಪಂ. ಮಾಜಿ ಸದಸ್ಯ ಉಸ್ಮಾನ್‌ ಕರೋಪಾಡಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿತೀಶ್‌ ಶೆಟ್ಟಿ ಮತ್ತು ರಾಜೇಶ್‌ ಭಟ್‌ ಮಂದಾರ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next