Advertisement

Kannada Cinema; ಚಿತ್ರೀಕರಣ ಮುಗಿಸಿದ ‘ಸೂರಿ ಲವ್‌ ಸಂಧ್ಯಾ’

06:45 PM Dec 17, 2023 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಸೂರಿ ಲವ್ಸ್‌ ಸಂಧ್ಯಾ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು. “ಸೆವನ್‌ ಕ್ರೋರ್‌ ಎಂಟರ್‌ ಟೈನ್ಮೆಂಟ್ಸ್‌’ ಬ್ಯಾನರ್‌ ಅಡಿಯಲ್ಲಿ ಕೆ. ಟಿ. ಮಂಜುನಾಥ್‌ ನಿರ್ಮಾಣ ಮಾಡುತ್ತಿರುವ “ಸೂರಿ ಲವ್ಸ್‌ ಸಂಧ್ಯಾ’ ಸಿನಿಮಾಕ್ಕೆ ಯಾದವ್‌ ರಾಜ್‌ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಬಹು ಸಮಯದ ನಂತರ ಹಿರಿಯ ನಟ ಕಂ ನಿರ್ದೇಶಕ ಕಾಶಿನಾಥ್‌ ಪುತ್ರ ಅಭಿಮನ್ಯು ಕಾಶಿನಾಥ್‌ ಈ ಸಿನಿಮಾದಲ್ಲಿ ನಾಯಕನಾಗಿ ಮತ್ತೂಮ್ಮೆ ತೆರೆಮೇಲೆ ಬರುತ್ತಿದ್ದಾರೆ.

ಟ್ರಾವೆಲ್‌ ಲವ್‌ ಸ್ಟೋರಿಯನ್ನು ಹೊಂದಿರುವ “ಸೂರಿ ಲವ್ಸ್‌ ಸಂಧ್ಯಾ’ ಸಿನಿಮಾದಲ್ಲಿ ನಾಯಕ ಅಭಿಮನ್ಯು ಕಾಶಿನಾಥ್‌ ಬಾರ್‌ ಸಪ್ಲೈಯರ್‌ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಪೂರ್ವಾ ಮಧ್ಯಮ ವರ್ಗದ ಹುಡುಗಿಯಾಗಿ ಅಭಿಮನ್ಯುಗೆ ಜೋಡಿಯಾಗಿದ್ದಾರೆ.

ಉಳಿದಂತೆ ಪ್ರತಾಪ್‌ ನಾರಾಯಣ್‌, ಪಲ್ಲವಿ, ಶಾರದಮ್ಮ, ಜಯರಾಮಣ್ಣ, ಕೆ. ಎಂ. ರಾಜೇಶ್‌, ಮೊಟ್ಟೆ ರಾಜೇಂದ್ರನ್‌, ನೀನಾಸಂ ಅಶ್ವಥ್‌, ಅವೀನ್‌ ಸಿಂಗ್‌, ಪ್ರದೀಪ್‌ ಕಬ್ರಾ, ರಾಜೀವ್‌ ಪಿಳ್ಳೆ„, ಸಿಯಾಜ್‌ ಕರೀಂ, ವೆಂಕಟೇಶ್‌ ದೀಕ್ಷಿತ್‌, ಅರುಣ್‌ ಬಾಬು ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾದ ನಾಲ್ಕು ಹಾಡುಗಳಿಗೆ ಚೆನ್ನೈನ ಎಸ್‌. ಎನ್‌. ಅರುಣಗಿರಿ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಕೋಲಾರ, ಮೈಸೂರು, ವಾರಣಾಸಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ “ಸೂರಿ ಲವ್ಸ್‌ ಸಂಧ್ಯಾ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಿರುವ ಚಿತ್ರತಂಡ ಇತ್ತೀಚೆಗೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣ ಮುಗಿಸಿದೆ.

Advertisement

ಸದ್ಯ “ಸೂರಿ ಲವ್ಸ್‌ ಸಂಧ್ಯಾ’ ಸಿನಿಮಾದ ಪೋಸ್ಟ್‌ ಪೊ›ಡಕ್ಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಹೊಸ ವರ್ಷದ ಆರಂಭದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next