ಅಂಬರೀಶ್ ಪುತ್ರ ಅಭಿಷೇಕ್ ತಮ್ಮ ತಂದೆಯೊಂದಿಗೆ ಕಳೆದ ಕೆಲವು ಹಾಸ್ಯದ ಸನ್ನಿವೇಶಗಳನ್ನು ಮೆಲುಕು ಹಾಕಿ, ದುಃಖದಲ್ಲಿದ್ದ ತಾಯಿಯ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದರು. ಅದು ಅವರ ಮಾತಲ್ಲೇ, “ನನಗಾಗ ಸುಮಾರು ಮೂರು ನಾಲ್ಕು ವರ್ಷ ಇರಬಹುದು. ಒಮ್ಮೆ ಆಗ ನಾನು, ಅಪ್ಪ , ಅಮ್ಮ ಮೂರು ಜನ ಸಿಂಗಾಪುರ್‌ಗೆ ಹೋಗಿದ್ದೇವು. ಅಪ್ಪ ಫಾರಿನ್‌ಗೆ ಹೋದಾಗ ಶಾಫಿಂಗ್ ಅಂತಾ ಸುತ್ತುವವರೇ ಅಲ್ಲ.
ಅವರು ಉಳಿದುಕೊಂಡ ಹೋಟೆಲ್ ಬಿಟ್ಟು ಎಲ್ಲು ಹೋಗ್ತಿರಲಿಲ್ಲ. ಆದ್ರೆ ಅಮ್ಮನಿಗೆ ಶಾಫಿಂಗ್ ಮಾಡೊದು ಊರು ನೋಡುವುದು ಅಂದ್ರೆ ತುಂಬಾ ಇಷ್ಟ. ಅವತ್ತು ಒಂದು ದಿನಾ ನಾವು ಏಳ್ಳೋದಕ್ಕೂ ಮುಂಚೆಯೇ ಅಮ್ಮ, ನನಗೆ ಮತ್ತೆ ಅಪ್ಪನಿಗೆ ಹೇಳದೆ, ನಮ್ಮ ರೂಮ…ನಲ್ಲಿದ್ದ ಟಿವಿ ಮೇಲೆ ನಾನು ಶಾಪಿಂಗ್ಗೆ ಹೋಗ್ತಿನಿ. ಬರೋದು ಲೇಟಾಗುತ್ತೆ ಅಂತಾ ಒಂದು ಚೀಟಿ ಬರೆದು ಅಂಟಿಸಿ ಹೋಗಿದ್ರು. ಸ್ವಲ್ಪ ಸಮಯದ ನಂತರ ನಾನು ಎದ್ದು ರೂಮ್ ಅಲ್ಲಿ ಅಮ್ಮನನ್ನ ಹುಡುಕಿದೆ.
ಅಮ್ಮ ಸಿಗಲಿಲ್ಲ, ನನಗೆ ಅಪ್ಪ ಅಂದ್ರೆ ತುಂಬಾ ಭಯ ಹಾಗಾಗಿ, ನಾನು ಸ್ವಲ್ಪ ಹೊತ್ತು ಕಾದು ನಂತರ ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ಆಗ ಅಪ್ಪ ಯಾಕೋ ಮಗನೆೇ ಏನ್ ಆಯಿತು ಅಂತಾ ಕೇಳಿದ್ರು. ಆಗ ನಾನು ಬಾತ್ ರೂಮ್ ಅಂದೇ ಅಪ್ಪ ನನ್ನ ಕರೆದುಕೊಂಡು ಹೋದ್ರು. ಐದು ನಿಮಿಷ ಬಿಟ್ಟು ಮತ್ತೆ ನಾನು ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಮತ್ತೆ ಯಾಕೋ ಮಗನೆ ಅಂದ್ರು, ನಾನು ಬ್ರೆಶ್ ಮಾಡಬೇಕು ಅಂದೇ.
ಅಷ್ಟೇ ತಾನೇ ಆಯ್ತು ಬಾ ಅಂತ ಹೇಳಿ ಬ್ರೆಷ್ ಮಾಡಿಸಿದರು. ಮತ್ತೆ ಐದು ನಿಮಿಷ್ ಬಿಟ್ಟು ನಾನು ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಯಾಕೂ ಮಗನೆ ಅಂದ್ರು, ನಾನು ಮತ್ತೆ ಕಿರು ಬೆರಳನ್ನ ತೋರಿಸಿದೆ. ಅಪ್ಪಗೆ ನಾನು ಮಾಡೋದ್ ನೋಡಿ ತುಂಬಾ ಕಿರಿಕಿರಿಯಾಗಿ ಕೋಪಗೊಂಡಿದ್ದರು. ಆಮೇಲೆ ಅಪ್ಪ ನನ್ನ ಒಂದು ಕೈಯಲ್ಲಿ ಎತ್ತಿ ಬೇಸಿನ್ ಮೇಲೆ ನಿಲ್ಲಿಸಿ ಮಾಡ್ಕೊ ಅಂತಾ ಗದರಿದರು. ಎರಡು ಗಂಟೆ ನಂತರ ಅಮ್ಮ ರೂಮ…ಗೆ ವಾಪಸ್ಸಾದ್ರು. ಆಗ ನಾನು ಕೋಪದಿಂದ ಅಮ್ಮ ನನ್ನ ಬಿಟ್ಟು ಎಲ್ಲಿ ಹೋಗಿದ್ದೆ ಅನ್ನೋವಷ್ಟರಲ್ಲಿ,
ಅಪ್ಪ ಅಮ್ಮ ಇವನ್ನಾ ನನ್ನ ಜೊತೆ ಯಾಕಮ್ಮ ಬಿಟ್ಟು ಹೋದೆ ಎಂದರು’ ಎಂದು ಅಭಿಷೇಕ್ ತಮ್ಮ ಬಾಲ್ಯದ ಮೆಲುಕು ಹಾಕಿದರು. ಇದು ತುಂಬಾ ಹಾಸ್ಯಮಯವಾಗಿತ್ತು. ಅವತ್ತಿಂದಾ ನಾವು ಎಲ್ಲೇ ಪ್ರವಾಸಕ್ಕೆ ಹೋದರೂ, ಅಪ್ಪ ಬೆಳಗ್ಗೆ ಎದ್ದ ತಕ್ಷಣ ಅಮ್ಮನ ಕೈ ಹಿಡ್ಕೊಂಡು ನೀನು ಎಲ್ಲು ಹೋಗೋವಂತಿಲ್ಲ ಎಂದು ಹೇಳ್ತಿದ್ರು. ನಿನ್ನೆ ನನಗೆ ಈ ಒಂದು ಘಟನೆ ನೆನಪಿಗೆ ಬಂತು ಇವತ್ತು ಅಮ್ಮ ತುಂಬಾ ಅಳುತ್ತಾ ಇ¨ªಾರೆ. ಹಾಗಾಗಿ ಅವರು ಸ್ವಲ್ಪ ನಗಲಿ ಅಂತಾ ನಾನು ಈ ಘಟನೆಯನ್ನ ಹೇಳಿದೆ’ ಎಂದು ಅಭಿಷೇಕ್ ಭಾವುಕರಾದರು.