ಬೀದರ: ಸೇವೆ ಎಂದರೆ ನಿಸ್ವಾರ್ಥತೆಯಿಂದಮಾಡುವ ಕಾರ್ಯವಾಗಿದೆ. ಅಲ್ಲಿ ಸ್ವಾರ್ಥತೆಯ ಕರಿನೆರಳು, ಇಗೋ ಇರಬಾರದು. ಒಂದುಮಗುವಿಗೆ ತಾಯಿ ಹೇಗೆ ನಿಸ್ವಾರ್ಥದಿಂದ ಉಪಚಾರ ಮತ್ತು ಸೇವೆ ಮಾಡುತ್ತಾಳ್ಳೋ ಹಾಗೆಯೇ ಸ್ವಯಂ ಸೇವಕರು ಕೂಡಾಯಾವುದೇ ಫಲಾಪೇಕ್ಷೆ ಇಲ್ಲದೆ ಎಲೆಮರೆಯ ಕಾಯಿಯಂತೆ ಕೆಲಸ ಮಾಡಬೇಕು ಎಂದುಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದಕಾಡಲೂರು ಸತ್ಯನಾರಾಯಣಾಚಾರ್ಯ ಕರೆ ನೀಡಿದರು.
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ವಕೀಲರ ಸಂಘ, ವಾರ್ತಾ ಇಲಾಖೆ ಆಶ್ರಯದಲ್ಲಿ ನಗರದ ಬಾಲ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ, ತಾಲೂಕು ಕಾನೂನು ಸೇವೆಗಳಪ್ರಾಧಿ ಕಾರ, ಸಮಿತಿಗಳ ಅರೆಕಾಲಿಕ ಸ್ವಯಂ ಸೇವಕರಿಗೆ ಅಭಿಶಿಕ್ಷಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವರಲ್ಲಿ ಮಾನವೀಯತೆಯನ್ನು ತುಂಬುವಕಾರ್ಯ ಆಗಬೇಕು. ಜನತೆಗೆ ಕಾನೂನಿನ ಅರಿವುನೀಡುವುದೇ ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಅವುಗಳ ಕುರಿತು ಜನತೆಗೆ ಅರಿವು ನೆರವು ನೀಡುವ ಕಾರ್ಯ ಪ್ರಾಮಾಣಿಕವಾಗಿ ಸ್ವಯಂ ಸೇವಕರಿಂದ ಆಗಬೇಕು. ಸಂವಿಧಾನದ ಆಶಯಗಳನ್ನು ಅಂತಃಕರಣದಿಂದ ಈಡೇರಿಸುವ ಕಾರ್ಯ ಮನೆಮನಗಳಿಗೆ ತಲುಪುವ ಸಲುವಾಗಿಯೇ ಈ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಧನರಾಜ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾ ಧೀಶರಾದ ರಾಧಾ ಎಚ್. ಆರ್, ಝರಿನಾ, ಟಿ.ಪಿ ಸಿದ್ರಾಮ, ಅಪರ್ಣಾ, ವಿನಾಯಕ ಒನಖೀಂಡೆ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಂಬಾದಾಸ್, ಶೀಲಾಬಾಯಿ, ಧನರಾಜ ಬಿರಾದಾರ, ಮಕ್ಕಳ ರಕ್ಷಣಾ ಅಧಿಕಾರಿಗಳಾದ ಗೌರಿಶಂಕರ ಪರ್ತಾಪುರೆ, ಶಂಕ್ರೆಪ್ಪಾ ಜನಶೆಟ್ಟಿ, ವಿಜಯಕುಮಾರ ಪಾಂಚಾಳ ಸೇರಿದಂತೆ ತರಬೇತಿದಾರರು ಉಪಸ್ಥಿತರಿದ್ದರು.