Advertisement

ಅಶ್ವಮೇಧದ ಕುದುರೆ ತಾಕತ್ತಿದ್ದರೆ ಕಟ್ಟಿ , ಗೆಲ್ಲಿ

09:45 AM Apr 04, 2019 | keerthan |

ಮೂಡುಬಿದಿರೆ: ಲೋಕಸಭಾ ಚುನಾವಣೆ ಎಂಬ ಅಶ್ವಮೇಧ ಯಾಗದ ಕುದುರೆಯಾಗಿ ಮಿಥುನ್‌ ರೈ ಅವರನ್ನು ಬಿಟ್ಟಿದ್ದೇವೆ, ತಾಕತ್ತಿದ್ದರೆ ಕಟ್ಟಿ, ಗೆಲ್ಲಿ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಎದುರಾಳಿಗಳಿಗೆ ಸವಾಲೆಸೆದರು.

Advertisement

ಮೂಡುಬಿದಿರೆಯಲ್ಲಿ ಬುಧವಾರ ಸಂಜೆ ಸಮಾಜ ಮಂದಿರದಲ್ಲಿ ನಡೆದ “ಕಾಂಗ್ರೆಸ್‌ -ಜೆಡಿಎಸ್‌’ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್‌ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಳಿನ್‌ ಕುಮಾರ್‌ ನಿಷ್ಕ್ರಿಯ ಸಂಸದ, ಮಿಥುನ್‌ ಭರವಸೆ ಮೂಡಿಸುವ ಯುವಕ ಎಂದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದು 8 ತಿಂಗಳಾಗಿದ್ದು ಇದುವರೆಗಿನ ಸಾಧನೆ ಮಾದರಿಯಾಗಿದೆ, ಈ ಹಿನ್ನೆಲೆಯಲ್ಲಿ ಮಿಥುನ್‌ ರೈ ಅವರನ್ನು ಪ್ರಜ್ಞಾವಂತರು ಆರಿಸಿ ಲೋಕಸಭೆಗೆ ಕಳುಹಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ: ಮಿಥುನ್‌
ಅಭ್ಯರ್ಥಿ ಮಿಥುನ್‌ ರೈ ಮಾತನಾಡಿ, ಬೂತ್‌ ಮಟ್ಟದಿಂದಲೇ ಕಾರ್ಯಕರ್ತರ ನೆರಳಾಗಿ ನಿಲ್ಲುತ್ತೇನೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ’ ಎಂದು ಮಾತು ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಬಿಜೆಪಿಯವರು ಬಿಲ್ಲವರಿಗೆ ಕತ್ತಿ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತ ಬಂದಿದ್ದಾರೆ. ಬಿಜೆಪಿಗರೇ ನಳಿನ್‌ ಬೇಡ
ಎನ್ನುತ್ತಿದ್ದಾರೆ. ಎಲ್ಲ ಉಪಚುನಾವಣೆ ಗಳಲ್ಲಿ ಬಿಜೆಪಿಗೆ ಸೋಲಾಗಿದೆ. ಇದು ಮುಂದಿನ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಿದರು.
ಪಕ್ಷಕ್ಕೆ ಸೇರ್ಪಡೆ
ಅನ್ಯಪಕ್ಷದ ಬೆಂಬಲಿಗರಾಗಿದ್ದ ಕಿನ್ನಿಗೋಳಿ ವಲಯದ 10 ಮಂದಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಲೇರಿಯನ್‌ ಸಿಕ್ವೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಸಿ. ಮೊಲಿ ನಿರೂಪಿಸಿದರು.
ಜೆಡಿಎಸ್‌, ಕಾಂಗ್ರೆಸ್‌ ನಾಯಕರಾದ ಮಹಮ್ಮದ್‌ ಕುಂಞಿ, ಸುಮತಿ ಹೆಗ್ಡೆ, ತೋಡಾರು ದಿವಾಕರ ಶೆಟ್ಟಿ, ಶ್ಯಾಲೆಟ್‌ ಪಿಂಟೋ, ಪುರುಷೋತ್ತಮ ಚಿತ್ರಾಪುರ, ಜಿಲ್ಲಾ ಅಶ್ರಫ್‌, ಸುಪ್ರಿಯಾ ಡಿ. ಶೆಟ್ಟಿ, ಧನಂಜಯ ಮಟ್ಟು, ವಸಂತ್‌ ಬರ್ನಾರ್ಡ್‌, ರೀಟಾ ಕುಟಿನ್ಹೋ, ಶಿರ್ತಾಡಿ ಸಂಪತ್‌ ಸಾಮ್ರಾಜ್ಯ, ಪ್ರವೀಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next