Advertisement
ಜನರಿಗೆ ಕುಡಿಯುವ ನೀರಿಲ್ಲಸುಮಾರು 450 ಮಂದಿ ನಿವಾಸಿಗಳಿರುವ ಈ ಪ್ರದೇಶದಲ್ಲಿ ಮಾರ್ಚ್ ನಂತರ ನೀರಿನ ಸಮಸ್ಯೆ ತೀವ್ರ ಬಿಗಡಾಯಿಸುತ್ತದೆ. ಗ್ರಾ.ಪಂ. ಹೇಳುವ ಪ್ರಕಾರ ಪ್ರಸ್ತುತ ಅಬ್ಬಿಗುಡ್ಡಿಯಲ್ಲಿ ಬಾವಿ ತೋಡಿದರೆ ನೀರು ಬರುವುದಿಲ್ಲ. ಈಗ ಬೇರೊಂದು ಬಾವಿಯಿಂದ ಪ್ರತಿ ಮನೆಗೆ 250ಲೀ. ನೀರನ್ನು ನಳ್ಳಿ ಮೂಲಕ ಬಿಡಲಾಗುತ್ತಿದೆ.
ಈಗಾಗಲೇ ವಾರಾಹಿ ನದಿ ತಟದಲ್ಲಿ ರೂ.3.5 ಲಕ್ಷ ವೆಚ್ಚದಲ್ಲಿ ನೂತನ ಬಾವಿಯೊಂದನ್ನು ತೆರೆಯಲಾಗಿದೆ. ಆದರೆ ಇಲ್ಲಿಂದ ನೀರನ್ನು ಅಬ್ಬಿಗುಡ್ಡಿ ಪ್ರದೇಶಕ್ಕೆ ತಲುಪಿಸಬೇಕಾದರೆ ನೂತನ ಮೋಟಾರ್ ಮತ್ತು ಪೈಪ್‌ಗ್ಳನ್ನು ಹಾಕಬೇಕಾಗಿದೆ. ಈ ಕಾಮಗಾರಿಗೆ ಗ್ರಾ.ಪಂ.ನಿಂದ 14ನೇ ಹಣಕಾಸಿನ ಯೋಜನೆಯಡಿ ರೂ.5 ಲಕ್ಷ ಹಣವನ್ನು ವ್ಯಯಿಸಬಹುದು. ಆದರೆ ಇದಕ್ಕೆ ಇನ್ನೂ 5 ಲಕ್ಷ ರೂ. ಕೊರತೆ ಇದೆ. ಈ ಹಣವನ್ನು ಹಣವನ್ನು ತಾ.ಪಂ., ಜಿ.ಪಂ. ಅಥವಾ ಶಾಸಕರ ನಿಧಿಯಿಂದ ಬಳಸಬೇಕಾಗಿದೆ ಎನ್ನುತ್ತಾರೆ. ನಮಗೆ ಈಗ ನೀರು ಸಿಗುತ್ತಿಲ್ಲ
ಅಬ್ಬಿಗುಡ್ಡಿಗೆ ಈಗ ಯಾವ ಕಡೆಯಿಂದಲೂ ನೀರು ಬರುತ್ತಿಲ್ಲ. ಕೆಲವರ ಮನೆಯಲ್ಲಿ ಬಾವಿಯಿದ್ದರೆ, ಪೈಪ್ ಮೂಲಕ ನೀರು ಕೂಡ ಸರಬರಾಜಾಗುತ್ತಿಲ್ಲ. ದುಬಾರಿ ಹಣ ತೆತ್ತು ಟ್ಯಾಂಕರ್ ನೀರು ಪಡೆಯಬೇಕಾದ ಸನ್ನಿವೇಶವಿದೆ.
– ಹುಸೇನ್, ಅಬ್ಬಿಗುಡ್ಡಿ ನಿವಾಸಿ
Related Articles
ಈಗಾಗಲೇ ವಾರಾಹಿ ನದಿ ತಟದಲ್ಲಿ ನೂತನ ಬಾವಿಯನ್ನು ತೆಗೆಯಲಾಗಿದೆ. ಅದಕ್ಕೆ ಮೋಟಾರ್, ಪೈಪ್‌ಗ್ಳನ್ನು ಅಭ್ಯ ಅನುದಾನದಡಿ ಅಳವಡಿಸಿ ಎತ್ತರದ ಪ್ರದೇಶವಾದ ಅಬ್ಬಿಗುಡ್ಡಿಯ ಮನೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ಸೌಕೂರು ಸಮೀಪದ ಬಾವಿಯಿಂದ ಅಲ್ಲಿನ ಜನರಿಗೆ ನೀರನ್ನು ಒದಗಿಸುತ್ತಿದ್ದೇವೆ. 14ನೇ ಹಣಕಾಸು ಯೋಜನೆಯಡಿ ರೂ.5,77,000 ಹಣ ಇರಿಸಿದ್ದು ಅನುಮೋದನೆಗೊಂಡಿದೆ. ಶೀಘ್ರ ಅಲ್ಲಿಗೆ ನೀರನ್ನು ಶಾಶ್ವತವಾಗಿ ಸರಬರಾಜು ಮಾಡುತ್ತೇವೆ.
– ವನಿತಾ ಶೆಟ್ಟಿ,,
ಅಭಿವೃದ್ಧಿ ಅಧಿಕಾರಿ,ಗ್ರಾ.ಪಂ. ಗುಲ್ವಾಡಿ
Advertisement
– ದಯಾನಂದ ಬಳ್ಕೂರು