Advertisement

ಅಬ್ಬಕ್ಕಳ ಹೆಸರೇ ಮಹಿಳೆಯರಿಗೆ ಸ್ಫೂರ್ತಿ

12:25 AM Mar 01, 2020 | mahesh |

ಉಳ್ಳಾಲ: ಪರಕೀಯರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ರಾಣಿ ಅಬ್ಬಕ್ಕಳ ಹೆಸರೇ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ತನ್ನ ಆಡಳಿತಲ್ಲಿ ದೂರಗಾಮಿ ಕಲ್ಪನೆ, ಲಯಬದ್ಧವಾದ ಯೋಚನೆ, ಸ್ವಾಭಿಮಾನದ ಕಿಚ್ಚು ಹಚ್ಚಿಸಿದ ಪರಿ ಇಂದಿಗೂ ಎಲ್ಲರಿಗೂ ಪ್ರೇರಣೆಯಾಗಿದ್ದು, ಇಂತಹ ಮಹನೀಯರ ಉತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

Advertisement

ದ‌.ಕ. ಜಿಲ್ಲಾಡಳಿತ, ಜಿ.ಪಂ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನ ದಲ್ಲಿ 2 ದಿನಗಳ ಕಾಲ ನಡೆಯುವ ನಡೆಯಲಿರುವ ವೀರ ರಾಣಿ ಅಬ್ಬಕ್ಕ ಉತ್ಸವಕ್ಕೆ ದೊಂದಿ ಉರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭ ಪ್ರಶಸ್ತಿಗಳ ಹಿಂದೆ
ಹೋಗದೆ ಎಲೆಮರೆಯ ಕಾಯಿ ಯಂತೆ ಸಮಾಜದ ಕಾರ್ಯ ನಡೆಸಿ ಕೇಂದ್ರ ಸರಕಾರದ ಗೌರವಕ್ಕೆ ಪಾತ್ರರಾದ ಪದ್ಮಶ್ರೀ ಹಾಜಬ್ಬ, ತುಳಸಿ ಗೌಡರಂತವರನ್ನು ಪುರಸ್ಕರಿ ಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಮಾತನಾಡಿ ಸಂವಿಧಾನದ ಎಂಟನೇ ಪರಿಚ್ಛೇದ ದಲ್ಲಿ ತುಳುಭಾಷೆ ಸೇರ್ಪಡೆ ಮತ್ತು ಕ‌ರ್ನಾಟಕದಲ್ಲಿ ತುಳು ಅಧಿಕೃತ ರಾಜ್ಯಭಾಷೆ ಆಗಲೇಬೇಕು ಎಂದರು. ಶಾಸಕ ಯು.ಟಿ. ಖಾದರ್‌ ಮಾತನಾಡಿದರು.

ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ ಮತ್ತು ಹರೇಕಳ ಹಾಜಬ್ಬ ಅವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಅಬ್ಬಕ್ಕ ಉತ್ಸವ ಅಧಿಕೃತ ಲಾಂಛನ ಅನಾವರಣಗೊಳಿಸಲಾಯಿತು.

ತಾಲೂಕು ಪಂಚಾಯತ್‌ ಅಧ್ಯಕ್ಷ ಮೊಹಮ್ಮದ್‌ ಮೋನು, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಸ್ವಾಗತಿಸಿ ಪ್ರಸ್ತಾವನೆ ಗೈದರು. ರಾಜೇಂದ್ರ ಕಲ್ನಾವಿ ಕಾರ್ಯಕ್ರಮ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next