Advertisement
ಎಡಬಿಡದೇ ಫೋರ್ - ಸಿಕ್ಸರ್ ಮೂಲಕ ಬೌಲರ್‌ಗಳನ್ನು ದಂಡಿಸುವ ಇವರು ಕ್ರೀಡಾಂಗಣದ ಯಾವ ಮೂಲೆಯನ್ನೂ ಬಿಡುವುದಿಲ್ಲ. ಈ ದೈತ್ಯ ಆಟಗಾರ 360 ಡಿಗ್ರಿಯಲ್ಲಿ ಬಾರಿಸುವ ಬೌಂಡರಿಗಳು ಕ್ರೀಡಾಭಿಮಾನಿಗಳನ್ನು ಮತ್ತಷ್ಟು ರೊಚ್ಚಿಗೇಳಿಸುತ್ತವೆ.
Related Articles
ಮಿ. 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಕ್ರಿಕೆಟ್‌ನಲ್ಲಿನ ದಾಖಲೆಗಳನ್ನು ಬಿಡಿಸಿ ಹೇಳುತ್ತಾ ಹೋದರೆ ಮುಗಿಯದ ಕಥೆಯಾಗುತ್ತದೆ. ಪ್ರತಿ ಪಂದ್ಯಕ್ಕೆ ಏನಾದರೂ ಒಂದು ದಾಖಲೆ ನಿರ್ಮಿಸುವ ಎಬಿಡಿ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟ್ಸ್‌ಮನ್ ಮಾತ್ರವಲ್ಲ, ಉತ್ತಮ ವಿಕೇಟ್ ಕೀಪರ್, ಬೌಲರ್, ಉತ್ತಮ ಕ್ಷೇತ್ರ ರಕ್ಷಕನೂ ಹೌದು. ಏಕದಿನ ಕ್ರಿಕೆಟ್‌ನಲ್ಲಿ 31 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಟಿ-20, ಏಕದಿನ, ಟೆಸ್ಟ್ ಸರಣಿಗಳಿರಲಿ ಎಲ್ಲ ವಿಭಾಗದಲ್ಲಿ ಕೂಡ ಅದ್ಭುತ ಪ್ರದರ್ಶನ ನೀಡುವ ಉತ್ತಮ ಆಟಗಾರ. ಮೂರು ಬಾರಿ ಐಸಿಸಿ ವರ್ಷದ ಕ್ರಿಕಟಿಗ ಎಂಬ ಗೌರವಕ್ಕೆ ಭಾಜನನಾಗಿದ್ದಾರೆ.
Advertisement
2. ಕ್ರೀಡಾ ಲೋಕದ ದೈತ್ಯ ಪ್ರತಿಭೆ ಒಬ್ಬ ಕ್ರೀಡಾಳು ತನ್ನ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡುತ್ತಾರೆ. ಆದರೆ ಎಬಿಡಿ ಹಾಗಲ್ಲ. ಈತ ಬಹುಮುಖ ಪ್ರತಿಭೆ. ಹಲವಾರು ಮಾದರಿ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲ, ದ. ಅಫ್ರಿಕಾದ ಜೂನಿಯರ್ ಆ್ಯಥ್ಲೀಟ್‌ನಲ್ಲಿ 100 ಮೀ. ಓಟದಲ್ಲಿ ದಾಖಲೆ ನಿರ್ಮಿಸಿದ್ದಾರೆ. 19 ವರ್ಷದೊಳಗಿನ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಆಟಗಾರನಾಗಿದ್ದರು, ರಗ್ಬಿ ತಂಡದ ನಾಯಕನಾಗಿದ್ದರು. ಜತೆಗೆ ಈಜಿನಲ್ಲಿ 6 ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಿರಿಯರ ಡೇವಿಸ್ ಕಪ್ ತಂಡಕ್ಕೆ ದ. ಅಫ್ರಿಕಾದಿಂದ ಆಯ್ಕೆಗೊಂಡಿದ್ದು ಮಾತ್ರವಲ್ಲದೆ ಗಾಲ್ಫ್, ಹಾಕಿ ಮತ್ತು ಫುಟ್ ಬಾಲ್ ತಂಡದ ಸಕ್ರಿಯ ಆಟಗಾರನಾಗಿದ್ದರು. ಎಲ್ಲ ಮಾದರಿಯ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದಾರೆ. 3. ಗಾಯಕ, ಲೇಖಕ
ಕ್ರಿಕೆಟ್‌ನಲ್ಲಿ ತನಗೆ ಯಾರು ಸಾಟಿಯಿಲ್ಲದ ಪ್ರದರ್ಶನ ನೀಡುವ ಎಬಿಡಿ ವಿಲಿಯರ್ಸ್ ಒಬ್ಬ ಅದ್ಭುತ ಗಾಯಕ, ಲೇಖಕ ಹಾಗೂ ಗಿಟಾರ್ ವಾದಕರೂ ಹೌದು. ಇವರು ಮ್ಯಾಕ್‌ಜೋ ಡ್ರೋಮ್ ವಾರ್ ಎಂಬ ಅಲ್ಬಂನ್ನು 2010ರಲ್ಲಿ ಬಿಡುಗಡೆಗೊಳಿಸಿದ್ದರು. ಅಲ್ಲದೇ ತನ್ನ ಆತ್ಮಕಥೆಯನ್ನು ಬರೆದು ಖ್ಯಾತ ಲೇಖಕರ ಪಟ್ಟಿಯಲ್ಲೂ ಗುರುತಿಸಿಕೊಂಡಿದ್ದಾರೆ. – ಭೀರಪ್ಪ ಉಪ್ಪಲದೊಡ್ಡಿ, ಸಿಂಧನೂರು