Advertisement

ಸಾರ್ವಕಾಲಿಕ ಐಪಿಎಲ್‌ ತಂಡ ಪ್ರಕಟಿಸಿದ ಎಬಿಡಿ

10:31 PM Jul 02, 2020 | Sriram |

ಹೊಸದಿಲ್ಲಿ: “360 ಡಿಗ್ರಿ ಬ್ಯಾಟ್ಸ್‌ ಮನ್‌’ ಎಬಿ ಡಿ ವಿಲಿಯರ್ ಐಪಿಎಲ್‌ ಇತಿಹಾಸದ ಶ್ರೇಷ್ಠ ಆಟಗಾರರಲ್ಲೊಬ್ಬರು. ಡೆಲ್ಲಿ ಡೇರ್‌ಡೆವಿಲ್ಸ್‌ ಮೂಲಕ ಐಪಿಎಲ್‌ಗೆ ಅಡಿಯಿಟ್ಟ ಅವರು ಆರ್‌ಸಿಬಿ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌. 2020ರ ಪಂದ್ಯಾವಳಿ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಅವರು ಐಪಿಎಲ್‌ನ ಸರ್ವಶ್ರೇಷ್ಠ ಆಟಗಾರರ ತಂಡವೊಂದನ್ನು ಆಯ್ದಿದ್ದಾರೆ. ಧೋನಿ ಇದರ ನಾಯಕರಾಗಿದ್ದಾರೆ.

Advertisement

ಸ್ವತಃ ತಮ್ಮನ್ನೂ ಈ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಉಳಿದ 3 ವಿದೇಶಿ ಕ್ರಿಕೆಟಿಗರೆಂದರೆ ಬೆನ್‌ ಸ್ಟೋಕ್ಸ್‌, ರಶೀದ್‌ ಖಾನ್‌ ಮತ್ತು ಕಾಗಿಸೊ ರಬಾಡ.

ಎಬಿಡಿ ಐಪಿಎಲ್‌ ಇಲೆವೆನ್‌: ವೀರೇಂದ್ರ ಸೆಹವಾಗ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್, ಬೆನ್‌ ಸ್ಟೋಕ್ಸ್‌, ಮಹೇಂದ್ರ ಸಿಂಗ್‌ ಧೋನಿ (ನಾಯಕ), ರವೀಂದ್ರ ಜಡೇಜ, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌, ಕಾಗಿಸೊ ರಬಾಡ, ಬುಮ್ರಾ.

Advertisement

Udayavani is now on Telegram. Click here to join our channel and stay updated with the latest news.

Next