Advertisement

‘ಆಶಿಕಿ’ ಹಾಡು ಹಬ್ಬ: ದಸರಾಗೆ ಬರುತ್ತಿದೆ ಮ್ಯೂಸಿಕಲ್‌ ಲವ್‌ ಸ್ಟೋರಿ

04:00 PM Sep 19, 2022 | Team Udayavani |

‘ಆಶಿಕಿ’ ಎಂಬ ಚಿತ್ರವೊಂದು ತಯಾರಾಗಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ನಟ ಅಜೇಯ್‌ ರಾವ್‌ ಬಿಡುಗಡೆ ಮಾಡಿದರು. “ಶ್ರೀ ಲಕ್ಷ್ಮಿ ನರಸಿಂಹ ಮೂವೀಸ್‌’ ಬ್ಯಾನರ್‌ ನಡಿ ಜಿ ಚಂದ್ರಶೇಖರ್‌ ಆಶಕಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿರ್ದೇಶಕಿ ಜೆ.ಚಂದ್ರಕಲಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

Advertisement

ನಿರ್ದೇಶಕಿ ಜೆ.ಚಂದ್ರಕಲಾ ಮಾತನಾಡಿ, “ನಿರ್ದೇಶಕಿಯರು ಬಳಹ ಅಪರೂಪ ಎಂದು ಎಲ್ಲರೂ ಹೇಳುತ್ತಿದ್ದರು. ಯಾಕೆ ವಿರಳ ಅಂದರೆ, ನಿರ್ದೇಶಕಿಯರನ್ನು ನಂಬಿಕೊಂಡು ಯಾವ ನಿರ್ಮಾಪಕರು ದುಡ್ಡ ಹಾಕಲು ಮುಂದೆ ಬರೋದಿಲ್ಲ. ನಾನು ಇಂಡಸ್ಟ್ರಿಗೆ ಬಂದು ಹದಿನೇಳು ವರ್ಷವಾಯ್ತು. ಏನಾದರೂ ಸಾಧನೆ ಮಾಡಬೇಕು ಎಂಬ ಪ್ರಯತ್ನದಲ್ಲಿ ದ್ದೇನೆ. ಆಶಿಕಿ ಮ್ಯೂಸಿಕಲ್‌ ಲವ್‌ ಸ್ಟೋರಿ ಸಿನಿಮಾ. ಲಿಯೋ ಅದ್ಭುತ ಮ್ಯೂಸಿಕ್‌ ಕೊಟ್ಟಿದ್ದಾರೆ’ ಎಂದರು.

ಇದನ್ನೂ ಓದಿ:ಮಂಗಳೂರು: ಬೈಕ್ ಸ್ಕಿಡ್ ಆಗಿ ಬಾರ್ ಮ್ಯಾನೇಜರ್ ಸಾವು, ಸಹ ಸವಾರ ಗಂಭೀರ

ಸಂದೀಪ್‌ ಕುಮಾರ್‌, ಪ್ರದೀಪ್‌ ರಾಜ್‌ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ. ಗುರುಪ್ರಸಾದ್‌, ಸುಚೇಂದ್ರ ಪ್ರಸಾದ್‌, ತುಳಸಿ ಶಿವಮಣಿ, ಪ್ರಮೋದಿನಿ ಹಿರಿಯ ತಾರಾಬಳಗ ಚಿತ್ರದಲ್ಲಿದೆ.

ಮ್ಯೂಸಿಕಲ್‌ ಲವ್‌ ಸ್ಟೋರಿ ಜೊತೆಗೆ ತ್ರಿಕೋನ ಪ್ರೇಮಕಥೆ ಹೊತ್ತ “ಆಶಿಕಿ’ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಲಿಯೋ ಸಂಗೀತ ಚಿತ್ರಕ್ಕಿದೆ. ರಾಜರತ್ನ, ನಿತಿನ್‌ ಅಪ್ಪಿ ಛಾಯಾಗ್ರಾಹಣ, ನಾಗೇಂದ್ರ ಅರಸ್‌ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಸೆನ್ಸಾರ್‌ ಪಾಸಾಗಿರುವ ಆಶಿಕಿ ಸಿನಿಮಾ ದಸರಾಗೆ ತೆರೆಗೆ ಬರಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next