Advertisement
ನಗರದ ವಿ.ಪಿ. ಬಡಾವಣೆಯಲ್ಲಿ ಎಎಪಿ ಜಿಲ್ಲಾ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಪ್ ಎಂದರೆ ಕೇವಲ ದೆಹಲಿ, ಪಂಜಾಬ್ ಮಾತ್ರವಲ್ಲ. ಚಂಡೀಘಡ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದರು.
Related Articles
Advertisement
ದೆಹಲಿಯಲ್ಲಿ ಉಚಿತವಾಗಿ ವಿದ್ಯುತ್, ನೀರು, ಮಹಿಳೆಯರಿಗೆ ಸಾರಿಗೆ ಉಚಿತ, ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ಪ್ರತಿ ಕುಟುಂಬಕ್ಕೂ 10ರಿಂದ 15 ಸಾವಿರ ರೂ. ಉಳಿತಾಯ ಮಾಡುತ್ತಿದ್ದೇವೆ. ಆದರೆ ನಮ್ಮಲ್ಲಿ ಉತ್ತರಕರ್ನಾಟಕ ಭಾಗದಲ್ಲಿ ಶಾಲೆಗಳೇ ಇಲ್ಲ. ಆದರೆ ಅಲ್ಲಿನ ಶಾಸಕರು ಬೆಂಗಳೂರಿನಲ್ಲಿ ಬಂಗಲೆ ಕಟ್ಟಿಸಿಕೊಂಡು ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೆಹಲಿ ಸರ್ಕಾರ ಶಿಕ್ಷಣಕ್ಕಾಗಿ ಶೇ. 24ರಷ್ಟು ಅನುದಾನ ಮೀಸಲಿಟ್ಟಿದೆ. ಸರ್ಕಾರಿ ಶಾಲೆ ಶಿಕ್ಷಕರಿಗೆ ವಿದೇಶಗಳಲ್ಲಿ ತರಬೇತಿ ಕೊಡಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸ್ವಿಮ್ಮಿಂಗ್ ಫೂಲ್ ಇದೆ. ವೈದ್ಯಕೀಯ ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಜನತೆ ಮೂರು ಪಕ್ಷಗಳ ಆಡಳಿತವನ್ನೂ ನೋಡಿದ್ದಾರೆ. ಎಲ್ಲರದ್ದೂ ಕೇವಲ ಬೊಗಳೆಯಾಗಿದೆ. ಅರವಿಂದ್ ಕೇಜ್ರಿವಾಲ್ ಸ್ವಚ್ಛ ಆಡಳಿತದ ಮೂಲಕ ಪ್ರಧಾನಿಗೆ ಪರ್ಯಾಯ ನಾಯಕರಾಗಿ ಬೆಳೆಯುತ್ತಿದ್ದಾರೆ ಎಂದ ಕೂಡಲೇ ಅವರ ಸರ್ಕಾರದ ವಿರುದ್ಧ ಸಿಬಿಐ, ಇಡಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ 4.57 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇದರಲ್ಲಿ ಸಿಂಹಪಾಲು ಶೇ. 40 ಲಂಚಕ್ಕೆ ಹೋಗಿದೆ. ಈಗ ನ್ಯಾಯಾಲಯ ಎಸಿಬಿ ರದ್ದು ಮಾಡಿರುವುದು ಮುರು ಪಕ್ಷಗಳಿಗೂ ಗುದ್ದು ನೀಡಿದಂತಾಗಿದೆ. ಎಲ್ಲ ನಾಯಕರಲ್ಲಿ ಡವಡವ ಶುರುವಾಗಿದೆ. ಇಲ್ಲಿ ಬರೀ ಹೊಂದಾಣಿಕೆ ರಾಜಕಾರಣ. ಇದನ್ನು ]ರಾಮುಲು ಬಹಿರಂಗವಾಗಿ ಹೇಳಿದ್ದಾರೆ. ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ ಎಂದಿದ್ದಾರೆ.
ಯತ್ನಾಳ್ ಮುಖ್ಯಮಂತ್ರಿಯಾಗಲು 2500 ಸಾವಿರ ಕೋಟಿ ರೂ. ಬೇಕು ಎಂದಿದ್ದಾರೆ. ಈ ನಾಯಕರ ಮಾತುಗಳಲ್ಲೇ ಆಡಳಿತ ವ್ಯವಸ್ಥೆ ಗೊತ್ತಾಗುತ್ತಿದೆ ಎಂದು ಕುಟುಕಿದರು. ಎಎಪಿ ಜಿಲ್ಲಾಧ್ಯಕ್ಷ ಜಗದೀಶ್, ಕೋಲಾರ ಮಾಜಿ ಸಂಸದ ಡಾ| ವೆಂಕಟೇಶ್, ತುಮಕೂರು ಜಿಲ್ಲಾಧ್ಯಕ್ಷ ಡಾ| ವಿಶ್ವನಾಥ್, ಆಪ್ ಮುಖಂಡರಾದ ಕಲಾವಿದ ಟೆನ್ನಿಸ್ ಕೃಷ್ಣ, ಶಿವಮೊಗ್ಗದ ನೇತ್ರಾವತಿ, ಶೇಷಣ್ಣಕುಮಾರ್, ಶಶಿಧರ ಮತ್ತಿತರರು ಇದ್ದರು.
ನಮ್ಮದು ಜಾತಿ ಧರ್ಮ ಮೀರಿದ ಸರ್ಕಾರ. ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ನಡೆಯುತ್ತಿದೆ. ನಾವು 0% ಸರ್ಕಾರ ಮಾಡುತ್ತೇವೆ. ಭ್ರಷ್ಟಾಚಾರರಹಿತ ಆಡಳಿತಕ್ಕೆ ಜನ ಸ್ಪಂದನೆ ನೀಡುತ್ತಿದ್ದಾರೆ. ಎಎಪಿ ಜಿಪಂನಿಂದ ಲೋಕಸಭೆವರೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.ಪೃಥ್ವಿ ರೆಡ್ಡಿ, ಎಎಪಿ ರಾಜ್ಯಾಧ್ಯಕ್ಷ