Advertisement
ಬಿಜೆಪಿ ವಿರುದ್ಧ ಮಾತನಾಡುವ ಬದಲು ಕಾಂಗ್ರೆಸ್ನ ಅಜಯ್ ಮಾಕೇನ್ ಮತ್ತು ಸಂದೀಪ್ ದೀಕ್ಷಿತ್ ಅವರು ಆಪ್ ವಿರುದ್ಧವೇ ಆರೋಪಗಳನ್ನು ಮಾಡುತ್ತಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಆತಿಶಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಜತೆ ಮೈತ್ರಿ ಸಾಧಿಸಲು ಆಪ್ ಪ್ರಾಮಾಣಿಕ ಪ್ರಯತ್ನ ಮಾಡಿತು. ಅಲ್ಲದೇ, ನಮ್ಮ ನಾಯಕರಾರೂ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಮಾತನಾಡಲಿಲ್ಲ. ಆದರೆ, ದಿಲ್ಲಿಯಲ್ಲಿ ಮಾತ್ರ ಕಾಂಗ್ರೆಸ್ ನಾಯಕರು ಬಿಜೆಪಿಯ ಸ್ಕ್ರಿಪ್ಟ್ನಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ಅದು ಬಿಜೆಪಿ ಕಚೇರಿಯಲ್ಲಿ ಅಂತಿಮವಾದಂತಿದೆ ಎಂದು ಆತಿಶಿ ಹಾಗೂ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
Related Articles
Advertisement
ಕಾಂಗ್ರೆಸ್ ಅಭ್ಯರ್ಥಿಗಳಾದ ಸಂದೀಪ್ ದೀಕ್ಷಿತ್ ಹಾಗೂ ಫರ್ಹಾದ್ ಸೂರಿ ಅವರಿಗೆ ಬಿಜೆಪಿಯಿಂದ ಬೆಂಬಲ ದೊರೆಯುತ್ತಿದೆ. ಈ ನಡೆಗಳು ಇಂಡಿಯಾ ಕೂಟದೆಡೆಗಿನ ಕಾಂಗ್ರೆಸ್ನ ಬದ್ಧತೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಏಕೆ ಜಟಾಪಟಿ?– 2013ರ ದಿಲ್ಲಿ ವಿಧಾನಸಭೆ ಎಲೆಕ್ಷನ್ ವೇಳೆ ಆಪ್ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟ
– ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಈ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿ ಫುಲ್ ಗರಂ
– ಅಸ್ತಿತ್ವದಲ್ಲಿಲ್ಲದ ಯೋಜನೆ ಜಾಹೀರಾತು ಬಗ್ಗೆ ದಿಲ್ಲಿ ಯುವ ಕಾಂಗ್ರೆಸ್ನಿಂದ ಕೇಜ್ರಿವಾಲ್ ವಿರುದ್ಧ ದೂರು
– ಆಪ್ ಹಾಗೂ ಕೇಜ್ರಿವಾಲ್ ವಿರುದ್ಧ ಮತ್ತೂಬ್ಬ ನಾಯಕ ಸಂದೀಪ್ ದೀಕ್ಷಿತ್ ವಾಗ್ಧಾಳಿ
– ಆಪ್ಗೆ ಅನನುಕೂಲವಾಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಆಯ್ಕೆ
– ಬಿಜೆಪಿ ವಿರುದ್ಧ ಮಾತನಾಡುವ ಬದಲು ಆಪ್ ವಿರುದ್ಧ ಟೀಕೆ ಎಂಬ ಆಪ್ ನಾಯಕರ ಆರೋಪ
– ಆಪ್ಗೆ ಹಿನ್ನಡೆಯುಂಟು ಮಾಡಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಜೆಪಿ ನೆರವು: ಆಪ್ ಆರೋಪ