ನವದೆಹಲಿ: ಆಮ್ ಆದ್ಮಿ ನೇತೃತ್ವದ ಪಂಜಾಬ್ ಸರ್ಕಾರವು ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಮತ್ತು ಮಾದಕ ವಸ್ತುಗಳ ಪೂರೈಕೆಯಲ್ಲಿ ತೊಡಗಿಕೊಂಡಿದೆ ಎಂದು ಭಾರತೀಯ ಜನತಾ ಪಕ್ಷ ಗುರುವಾರ (ಫೆ.02) ಆರೋಪಿಸಿದೆ.
ಇದನ್ನೂ ಓದಿ:Budget 2023: ಭಾರತದಿಂದ ಅಫ್ಘಾನಿಸ್ತಾನಕ್ಕೆ 200 ಕೋಟಿ ರೂ. ನೆರವಿನ ಘೋಷಣೆ: ತಾಲಿಬಾನ್ ಪ್ರತಿಕ್ರಿಯೆ ಏನು?
ಬುಧವಾರ ಖನ್ನಾ ಪೊಲೀಸರು ಆಮ್ ಆದ್ಮಿ ಪಕ್ಷದ ದೀಪಕ್ ಗೋಯಲ್, ನಟೋರಿಯಸ್ ಕ್ರಿಮಿ ನಲ್ ಗಳಾದ ಆಕಾಶ್ ದೀಪ್ ಮತ್ತು ಪರಮಿಂದರ್ ಸಿಂಗ್ ಅಲಿಯಾಸ್ ಎಂಬಾತನನ್ನು ಬಂಧಿಸಿದ್ದು, ಆರು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಶಾಮೀಲಾಗಿದ್ದು, ಇವರು ನಟೋರಿಯಸ್ ಗ್ಯಾಂಗ್ ಸ್ಟರ್ ಸುಖ್ ಪ್ರೀತ್ ಬುಧಾ ಜೊತೆ ನಂಟು ಹೊಂದಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಪಂಜಾಬ್ ನಲ್ಲಿ ಮಾದಕ ವಸ್ತು ಜಾಲವನ್ನು ನಿಯಂತ್ರಿಸುವಲ್ಲಿ ಆಪ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ವಕ್ತಾರ ಶೆಹ್ ಝಾದ್ ಪೂನಾವಾಲಾ ದೂರಿದ್ದಾರೆ. ಪಂಜಾಬ್ ನಲ್ಲಿ ಡ್ರಗ್ ವ್ಯಸನಿಗಳ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿಯೊಂದು ಶಾಲೆ ಮತ್ತು ಪ್ರತಿಯೊಂದು ಪ್ರದೇಶಕ್ಕೂ ವ್ಯಾಪಿಸಿದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಾತಕಿಗಳಿಗೆ, ಗೂಂಡಾಗಳಿಗೆ ಅಕ್ರಮ ಶಸ್ತ್ರಾಸ್ತ್ರ ಮತ್ತು ಗುಂಡುಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾದಕ ವಸ್ತುಗಳನ್ನು ನಿಯಂತ್ರಿಸಲು ಆಮ್ ಆದ್ಮಿ ಪಕ್ಷದ ಸರ್ಕಾರ ವಿಫಲವಾಗುವ ಮೂಲಕ ಒಂದು ರಾಜ್ಯದ ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸಲು ಬರುತ್ತಿಲ್ಲ ಎಂದು ಸಂದೇಶವನ್ನು ರವಾನಿಸಿದಂತಾಗಿದ್ದು, ಈ ಜನರು ಇಡೀ ರಾಜ್ಯವನ್ನು ನಾಶ ಮಾಡುತ್ತಾರೆ ಎಂದು ಪೂನಾವಾಲಾ ಆರೋಪಿಸಿದರು.