Advertisement

ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ “AAP” ಅಖಾಡಕ್ಕೆ; 160 ಅಭ್ಯರ್ಥಿ ಹೆಸರು ಘೋಷಣೆ

02:52 PM Jan 25, 2021 | Team Udayavani |

ಚಂಡೀಗಢ್: ಮುಂಬರುವ ಪಂಜಾಬ್ ನ ಮುನ್ಸಿಪಲ್ ಕಾರ್ಪೋರೇಷನ್, ಮುನ್ಸಿಪಲ್ ಕಮಿಸಿ ಹಾಗೂ ನಗರ ಪಂಚಾಯತ್ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿದ್ದು, 160 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:48 ಎಂಪಿ ಎಐ ಟ್ರಿಪಲ್ ಕ್ಯಾಮೆರಾದೊಂದಿಗೆ ವೀವೊ ವೈ 31 ಮಾರುಕಟ್ಟೆಯಲ್ಲಿ ಲಭ್ಯ

ಪಕ್ಷದ ಕೇಂದ್ರ ಕಚೇರಿಯಿಂದ ಬಿಡುಗಡೆಗೊಳಿಸಿರುವ ಪ್ರಕಟಣೆ ಪ್ರಕಾರ, ದೆಹಲಿ ಶಾಸಕ, ಪಂಜಾಬ್ ನ ಆಪ್ ಉಸ್ತುವಾರಿ ಜರ್ನೈಲ್ ಸಿಂಗ್ ಮತ್ತು ಸಂಸದ, ಆಪ್ ರಾಜ್ಯಾಧ್ಯಕ್ಷ ಭಗವಂತ್ ಮಾನ್ , ಮುಂದಿನ ತಿಂಗಳು ಪಂಜಾಬ್ ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಪ್ “ಪೊರಕೆ” ಚಿಹ್ನೆಯಡಿ ಸ್ಪರ್ಧಿಸಲಿದ್ದು, ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಿ, ರಾಜಕೀಯ ಕೊಳಕನ್ನು ಗುಡಿಸಿ ಹಾಕಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮರಳುವುದೇ ಅವಳಿ ಕೆರೆಗಳ ಗತವೈಭವ? ಕೆರೆಗಳ ಸುತ್ತಲ ಸಮಸ್ಯೆಗಳಿಗೆ ಸಿಗಬೇಕಿದೆ ಸೂಕ್ತ ಪರಿಹಾರ

ಪಂಜಾಬ್ ನ 11 ಸ್ಥಳೀಯ ಸಂಸ್ಥೆಗಳಿಗೆ 160 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗಾಗಿ ಕೆಲಸ ಮಾಡುವ ಕೌನ್ಸಿಲರ್ ಗಳನ್ನು ಆಯ್ಕೆ ಮಾಡಲು ಜನರಿಗೊಂದು ಸುವರ್ಣಾವಕಾಶ ದೊರೆತಿದ್ದು, ನಗರಗಳಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಆಪ್ ತಿಳಿಸಿದೆ.

Advertisement

ವಿದ್ಯಾರ್ಹತೆ ಹೊಂದಿರುವ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಹೊಂದಿರುವ ಜನಪ್ರತಿನಿಧಿಯನ್ನು ಜನರು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಶಿಕ್ಷಿತ ಮತ್ತು ಬುದ್ದಿವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಪಂಜಾಬ್ ಮತದಾರರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತದಾನ ಮಾಡಬೇಕು ಎಂದು ಆಪ್ ಮುಖಂಡರು ವಿನಂತಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next