Advertisement

ಕೊಡಗಿನ ಆನೆಕಾಡು ಅರಣ್ಯದಲ್ಲಿ ಕಾಡ್ಗಿಚ್ಚು; 70 ಎಕರೆ ಕಾಡು ಭಸ್ಮ

04:08 PM Mar 03, 2017 | Team Udayavani |

ಕೊಡಗು: ಕೊಡಗು ಜಿಲ್ಲೆಯ ಆನೆಕಾಡು ಅರಣ್ಯದಲ್ಲಿ ಕಾಡ್ಗಿಚ್ಚಿನಿಂದಾಗಿ ಸುಮಾರು 70ಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಿದ್ದು, ಅರಣ್ಯ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಆನೆಕಾಡು ಅರಣ್ಯದಲ್ಲಿ ಶುಕ್ರವಾರ ಕಾಡ್ಗಿಚ್ಚಿನಿಂದಾಗಿ 70ಕ್ಕೂ ಹೆಚ್ಚು ಎಕರೆ ಅರಣ್ಯ ಭಸ್ಮವಾಗಿದೆ. 60ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಬಿಸಿಲಿನಿಂದಾಗಿ ಕಾಡ್ಗಿಚ್ಚು ನಂದಿಸುವುದು ದೊಡ್ಡ ಪ್ರಯಾಸದ ಕೆಲಸವಾಗಿರುವದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next