Advertisement

ಹಿರಿಯರ ಆಣೆ ಪ್ರಮಾಣ ಪದ್ಧತಿಯಿಂದ ರಾಜಕೀಯ ಮೌಲ್ಯ ಮರುಸ್ಥಾಪನೆ ಸಾಧ್ಯವೇ ?

04:16 PM Oct 18, 2019 | Team Udayavani |

ಮಣಿಪಾಲ: ರಾಜಕೀಯದಲ್ಲಿ ಆಣೆ ಪ್ರಮಾಣದ ಪದ್ಧತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ”ಹಿರಿಯರ ಆಣೆ ಪ್ರಮಾಣ ಪದ್ಧತಿಯಿಂದ ರಾಜಕೀಯ ಮೌಲ್ಯ ಮರುಸ್ಥಾಪನೆ ಸಾಧ್ಯವೇ ” ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಆಯ್ದ ಕೆಲವು ಇಲ್ಲಿದೆ.

Advertisement

ರೋಹಿಂದ್ರನಾಥ್ ಕೋಡಿಕಲ್: ಹುಚ್ಚುತನದ ಪರಮಾವಧಿ. ಇದನ್ನು ಪುನ ಪುನ ಪ್ರಚಾರ ಮಾಡಿ ನಮ್ಮನ್ನು ಮಂಕುದಿನ್ನೆ ಗಳಾಗಿ ಮಾಡುತ್ತಾರಲ್ಲ ಅದು ಇನ್ನೊಂದು ಹುಚ್ಚು.

ಸೂರಜ್ ಬಿರಾದಾರ್: ಆತ್ಮಸಾಕ್ಷಿಯ ಅನುಗುಣವಾಗಿ ಇದ್ದರೆ ಯಾವುದೇ ಆಣೆ ಪ್ರಮಾಣದ ಅಗತ್ಯ ಇರುವುದಿಲ್ಲ, ಆತ್ಮ ವಂಚನೆಯ ಕುರುಹುಗಳು ಏನಾದರೂ ಕಂಡು ಬಂದಾಗ ಆಣೆ ಪ್ರಮಾಣದ ಅಗತ್ಯತೆ ತುಸು ಹೆಚ್ಚಾಗಿ ಕಾಣಬಹುದು.

ಮೋಹನ್ ದಾಸ್ ಕಿಣಿ: ದೈವದ, ದೇವರ ಬಗ್ಗೆ ಪ್ರಾಮಾಣಿಕ ಭಕ್ತಿ ಇರುವವರಿಗೆ ಮಾತ್ರ ಆಣೆ ಪ್ರಮಾಣ. ರಾಜಕೀಯದಲ್ಲಿ ಅದೆಲ್ಲಿದೆ?

ಫ್ರಾನ್ಸಿಸ್ ಡಿಸೋಜಾ: ರಾಜಕೀಯದಲ್ಲಿ ಆಣೆ ಮತ್ತು ಪ್ರಮಾಣ ಸುಮ್ನೆ ನಾಟಕಕ್ಕೊಸ್ಕರ ಮಾತ್ರ ಸೀಮಿತ, ಮತ್ತು ಅದರ ಅಗತ್ಯ ಇಲ್ಲ ಅಂತ ನನಗನಿಸುತ್ತೆ. ರಾಜಕೀಯದಲ್ಲಿ ಪವಿತ್ರ ಗ್ರಂಥದ ಮೇಲೆ ಪ್ರಮಾಣ ಮಾಡುವುದು ಆ ಗ್ರಂಥಕ್ಕೆ ಅವಮಾನ ಮಾಡಿದ ಹಾಗೆ.

Advertisement

ಗಂಗಾಧರ್ ಉಡುಪ: ಇದರಿಂದ ಏನು ಸಾಧಿಸಲು ಸಾಧ್ಯವಿಲ್ಲ, ಯಾರೂ ಜನರ ಉದ್ಧಾರಕ್ಕಾಗಿ ಬಂದವರಲ್ಲ, ಅವರವರ ಉದ್ಧಾರಕ್ಕಾಗಿ ಅಣೆ ಪ್ರಮಾಣ ಮಾಡ್ತಾರೆ

ಮೋಹನ್ ಬೋರ್ಕಳ: ಅಣೆ ಪ್ರಮಾಣ ಎಂಬುದು ಭಕ್ತಿ ನಂಬಿಕೆ ದೈವ ಭಯ ದೈವ ನಿಷ್ಟೆ ಎಂಬುದರ ಮೇಲೆ ನಡೆಯೋ ಒಂದು ಸರ್ವಶಕ್ತ ಪ್ರಕ್ರಿಯೆ ರಾಜಕೀಯ ಮೌಲ್ಯ ಮರು ಸ್ಥಾಪನೆಗೆ ಅದನ್ನು ಬಳಸಿದರೆ ಅದು ತನ್ನ ಮಹತ್ವವನ್ನೇ ಕಳೆದುಕೊಳ್ಳಬಹುದು.

ದಯಾನಂದ ಕೊಯಿಲ : ದೈವೀವಿಶ್ವಾಸ ದ ಮೇಲೆ ಅವಲಂಬಿಸಿ ದೆ ನಾಸ್ತಿಕ ಕೇವಲ ಮಾತಿನಲ್ಲಿ ಆಣೆ ಪ್ರಮಾಣ ಬಳಸಿ ಆಸ್ತಿಕರನ್ನು ವಂಚಿಸಬಹುದು ನೈಜ ದೈವ ವಿಶ್ವಾಸಿಗಳು ಹಾಗೆ ಮಾಡುವುದಿಲ್ಲ ಯಾಕೆಂದರೆ ತಪ್ಪು ಮಾಡದ ಮನುಷ್ಯ ಮನುಷ್ಯ ನೇ ಅಲ್ಲ ,”ತಿದ್ದಿ ನಡೆಯುವುದು ಮನುಷತ್ವ ಎನಿಸಿಕೊಳ್ಳುತ್ತದೆ?

ದಿನೇಶ್ ಗೌಡ : ಅದೊಂದು ಕಾಲ ಇತ್ತು ತಾಯಿ ಆಣೆ ಅಂದ್ರೆ ಮುಗಿತಿತು ಈಗ ತಾಯಿಗೆ ಅನ್ನ ಹಾಕ್ದೆ ಹೊರ ಹಾಕೋರು ಇರ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next