ಮುಂಬಯಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಗೆಳೆಯ ನೂಪುರ್ ಶಿಖರೆ ಮತ್ತು ಅವರ ತಾಯಿ ಪ್ರೀತಮ್ ಶಿಖರೆ ಅವರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮಿಸಿದರು.
ಇರಾ ಖಾನ್ ಸುಂದರವಾದ ರೇಷ್ಮೆ ಸೀರೆಯನ್ನು ಧರಿಸಿ ದೀಪಾವಳಿಯನ್ನು ಆಚರಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಫಿಟ್‌ನೆಸ್ ತರಬೇತುದಾರರಾಗಿರುವ ನೂಪುರ್ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದು, ಮೂವರೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ.
ಇರಾ ಖಾನ್ ಈ ವರ್ಷದ ಆರಂಭದಲ್ಲಿ ಪ್ರಾಮಿಸ್ ಡೇ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಗೆಳೆಯ ನೂಪುರ್ ಶಿಖರೆ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದರು.
ತಾನು ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು.
24 ರ ಹರೆಯದ ಇರಾ, ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು, ಅವರಿಗೆ ಜುನೈದ್ ಎಂಬ ಮಗನೂ ಇದ್ದಾನೆ.
ಇರಾ ಖಾನ್ 2019 ರಲ್ಲಿ ‘ಯೂರಿಪಿಡ್ಸ್’ ಮೀಡಿಯಾ’ ಎಂಬ ಸ್ಟೇಜ್ ಪ್ರೊಡಕ್ಷನ್‌ನೊಂದಿಗೆ ತನ್ನ ಚೊಚ್ಚಲ ನಿರ್ದೇಶನದ ಮೂಲಕ ಶೋಬಿಜ್‌ಗೆ ಕಾಲಿತ್ತಿದ್ದರು.