ಮುಂಬೈ: ಲಗಾನ್, ತಾರೇ ಜಮೀನ್ ಪರ್, ದಂಗಲ್‌ನಂಥ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ ಬಾಲಿವುಡ್ ನಟ ಆಮೀರ್ ಖಾನ್ ಅವರು ಸದ್ಯಕ್ಕೆ “ನಟನೆಯಿಂದ ಬ್ರೇಕ್’ ಪಡೆಯಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ ಅವರು, “ಕಳೆದ 35 ವರ್ಷಗಳ ನಟನಾ ವೃತ್ತಿಯಿಂದ ಸ್ವಲ್ಪ ಬ್ರೇಕ್ ಪಡೆಯಲು ನಿರ್ಧರಿಸಿದ್ದೇನೆ. ಇಷ್ಟು ದಿನ ನನ್ನ ಮನಸ್ಸು ಕೆಲಸದ ಮೇಲಷ್ಟೇ ಕೇಂದ್ರೀಕೃತವಾಗಿತ್ತು. ಈಗ ನನ್ನ ಕುಟುಂಬ, ಅಮ್ಮ, ನನ್ನ ಮಕ್ಕಳೊಂದಿಗೆ ಇರಲು ಬಯಸಿದ್ದೇನೆ.
“ಚಾಂಪಿಯನ್ಸ್’ ಸಿನಿಮಾದಲ್ಲಿ ನಟಿಸಲು ತೀರ್ಮಾನಿಸಿದ್ದೆ. ಆದರೆ, ಈಗ ಅದರ ನಿರ್ಮಾಪಕನಾಗಿ ಮಾತ್ರ ಕೆಲಸ ಮಾಡಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.