Advertisement

ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಆಮ್‌ ಆದ್ಮಿ

10:18 AM Feb 23, 2020 | Sriram |

ಮುಂಬಯಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನೇತೃತ್ವದ ಆಮ್‌ ಆದ್ಮಿ ಪಕ್ಷವು ಮಹಾರಾಷ್ಟ್ರದಲ್ಲಿ ಚುನಾವಣೆ ಸ್ಪರ್ಧೆಗಳಿಯಲು ನಿರ್ಧರಿಸಿದೆ.

Advertisement

ಮುಂಬರುವ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಸ್ಪರ್ಧಿಸಲು ನಿರ್ಧರಿಸಿದೆ. ಇದರಿಂದ ಆಮ್‌ ಆದ್ಮಿ ಪಕ್ಷಕ್ಕೆ ಮುಂಬಯಿ ಮನಪಾ ಚುನಾವಣೆಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯುತ್ತದೆ ಎಂಬುದರ ಬಗ್ಗೆ ಇಡಿ ದೇಶವು ಹೆಚ್ಚು ಗಮನ ಹರಿಸುತ್ತಿದೆ.

ದಿಲ್ಲಿಯಲ್ಲಿ ಭರ್ಜರಿ ಗೆಲುವಿನ ನಂತರ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ಪಕ್ಷವನ್ನು ವಿಸ್ತರಿಸುವ ನಿರ್ಣಯ ಆಮ್‌ ಆದ್ಮಿ ತೆಗೆದುಕೊಂಡಿದೆ. ಆದ್ದರಿಂದ ಮುಂಬಯಿ ಮಹಾನಗರ ಪಾಲಿಕೆ ಸೇರಿದಂತೆ ಮಹಾರಾಷ್ಟ್ರದ ಇತರ ಭಾಗಗಳ ಮನಪಾ ಚುನಾವಣೆಯಲ್ಲಿ ಸ್ಪರ್ಧಿಸುವಲ್ಲಿ ಪಕ್ಷವು ಗಮನಹರಿಸುತ್ತಿದ್ದೇವೆ ಎಂದು ಸಂಸದ ಸಂಜಯ್‌ ಸಿಂಗ್‌ ಹೇಳಿದ್ದಾರೆ. ಮುಂಬಯಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನಾವು ಯಾರ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂಬಯಿ ಹಾಗೂ ಮಹಾರಾಷ್ಟ್ರದಲ್ಲಿ ಪಕ್ಷವನ್ನು ಬಲಪಡಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಸಿಂಗ್‌ ಹೇಳಿದ್ದಾರೆ.

ಪಕ್ಷವು ಯಾವುದೇ ನಿರ್ಧಾರವನ್ನು ಆತುರದಲ್ಲಿ ಮಾಡುವುದಿಲ್ಲ. 2014ರ ನಾವು ತುಂಬಾ ಆತುರ ಮಾಡಿದ್ದೇವೆ. ಆ ವೇಳೆ ಆಮ್‌ ಆದ್ಮಿ ಪಕ್ಷ 430 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ 409 ಅಭ್ಯರ್ಥಿಗಳ ಠೇವಣಿಗಳು ರದ್ದಾಗಿತ್ತು. ಆದ್ದರಿಂದ, ಪ್ರಸಕ್ತ ಆಮ್‌ ಆದ್ಮಿ ಪಕ್ಷವು ಪರ್ಯಾಯವಾಗಿ ನಿಂತಿದೆ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸಲಾಗುವುದು ಎಂದು ಹೇಳಿದರು. ಈ ಆಯ್ಕೆಯನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ಸಾರ್ವಜನಿಕರು ನಿರ್ಧರಿಸಬೇಕು. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಜನರನ್ನು ತೊಡಗಿಸಿಕೊಳ್ಳಲು ಅಭಿಯಾನವನ್ನು ಪ್ರಾರಂಭಿಸಲಾಗುವುದು. ಈ ಅಭಿಯಾನದ ಅಡಿಯಲ್ಲಿ 5 ದಿನಗಳಲ್ಲಿ 13 ಲಕ್ಷ ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಠಾಕ್ರೆ ಸರಕಾರಕ್ಕೆ ಸಲಹೆ ನೀಡುವೆ
ದಿಲ್ಲಿಯಲ್ಲಿ ಆಮ್‌ಆದ್ಮಿ ಪಕ್ಷವು 100 ಯೂನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡಿದೆ. ದಿಲ್ಲಿ ಸರ‌ಕಾರವು ಹೇಗೆ ಈ ಕಾರ್ಯ ನಿಭಾಯಿಸಿದೆ ಎಂಬುದರ ಕುರಿತು ಉದ್ಧವ್‌ ಠಾಕ್ರೆ ಅವರ ಸರಕಾರಕ್ಕೆ ಸಲಹೆ ಕೇಳಿದರೆ ನಾವು ಅವರಿಗೆ ಸಹಾಯ ಮಾಡಲು ಸಿದ್ಧರಿದ್ದೇವೆ, ಎಂದು ಸಂಸದ ಸಂಜಯ್‌ ಸಿಂಗ್‌ ಅವರು ಹೇಳಿದರು. ಇಷ್ಟು ದೊಡ್ಡ ರಾಜ್ಯದಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದೆ. ಆದ್ದರಿಂದ ಮಹಾವಿಕಾಸ್‌ ಆಘಾಡಿಯ ಸರಕಾರವು ಜನರಿಗೆ ಉಚಿತ ವಿದ್ಯುತ್‌ ಒದಗಿಸಲು ಸಾಧ್ಯವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next