ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದಲ್ಲಿ ಬದಲಾವಣೆಯಾಗಿದೆ. ಸೀಮಿತ ಓವರ್ ಗಳ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಲಾಗಿದೆ. ಟಿ20 ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೈಬಿಡಲಾಗಿದೆ. ಸದ್ಯ ವಿರಾಟ್ ಟೆಸ್ಟ್ ತಂಡವನ್ನು ಮಾತ್ರ ಮುನ್ನಡೆಸಲಿದ್ದಾರೆ.
ಬಿಸಿಸಿಐ ನ ನಿರ್ಧಾರಕ್ಕೆ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಆದರೆ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು “ ಈ ಬೆಳವಣಿಗೆ ನಡೆಯಲೇ ಬೇಕಿತ್ತು” ಎಂದಿದ್ದಾರೆ.
ಇದನ್ನೂ ಓದಿ:She said YES..! ಆ್ಯಶಸ್ ಪಂದ್ಯದಲ್ಲಿ ಹೀಗೊಂದು ಪ್ರೇಮ ಪ್ರಸಂಗ: ವಿಡಿಯೋ
ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ಆಕಾಶ್ ಚೋಪ್ರಾ, “ ನಾವು ಈ ಬಗ್ಗೆ ಮೊದಲೇ ಚರ್ಚೆ ನಡೆಸಿದ್ದೆವು. ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದಾಗಲೇ ಏಕದಿನ ತಂಡದ ನಾಯಕತ್ವದಿಂದ ತೆಗೆಯುವುದು ನಿರ್ಧಾರವಾಗಿತ್ತು” ಎಂದು ಹೇಳಿದ್ದಾರೆ.
ರೆಡ್ ಬಾಲ್ ಕ್ರಿಕೆಟ್ ಮತ್ತು ವೈಟ್ ಬಾಲ್ ಕ್ರಿಕೆಟ್ ಗೆ ಇಬ್ಬರು ನಾಯಕರು ಇರಬಹುದು. ಆದರೆ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಒಬ್ಬ, ಟಿ20 ತಂಡಕ್ಕೆ ಒಬ್ಬ ನಾಯಕನಾಗುವುದು ತುಂಬಾ ಕಷ್ಟ. ಹೀಗಾಗಿ ಈ ಬೆಳವಣಿಗೆಯನ್ನು ಮೊದಲೇ ಊಹಿಸಲಾಗಿತ್ತು ಎಂದು ಮಾಜಿ ಆರಂಭಿಕ ಆಟಗಾರ ಚೋಪ್ರಾ ಹೇಳಿದರು.