Advertisement

ಆಡುವ ಗೊಂಬೆಗೆ ರಾಜ್ ಪುತ್ರರ ಗಾಯನ

02:49 PM May 03, 2018 | Sharanya Alva |

ಹಿರಿಯ ನಿರ್ದೇಶಕ ಭಗವಾನ್‌ “ಆಡುವ ಗೊಂಬೆ’ ಎಂಬ ಸಿನಿಮಾ ನಿರ್ದೇಶಿಸುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣ ಮುಗಿದಿದೆ. ಆದರೆ, ಈಗ ಈ ಚಿತ್ರ ಒಂದು ದಾಖಲೆಗೆ ಸಾಕ್ಷಿಯಾಗಿದೆ. ಅದು ಮೂವರು ಅಣ್ಣ-ತಮ್ಮಂದಿರು ಒಂದೇ ಚಿತ್ರದಲ್ಲಿ ಹಾಡಿರುವುದು. ಆ ಅಣ್ಣ-ತಮ್ಮಂದಿರು ಬೇರಾರು ಅಲ್ಲ, ಡಾ.ರಾಜಕುಮಾರ್‌ ಅವರ ಮೂವರು ಪುತ್ರರು. ಹೌದು, “ಆಡುವ ಗೊಂಬೆ’ ಚಿತ್ರದಲ್ಲಿ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಹಾಗೂ ಪುನೀತ್‌ರಾಜಕುಮಾರ್‌ ಒಂದೊಂದು ಹಾಡನ್ನು ಹಾಡುವ ಮೂಲಕ ಒಂದೇ ಚಿತ್ರದಲ್ಲಿ ಮೂವರು ತೊಡಗಿಸಿಕೊಂಡಂತಾಗಿದೆ. 

Advertisement

ಜೊತೆಗೆ ಚಿತ್ರದ ಇನ್ನೊಂದು ಹಾಡನ್ನು ವಿಜಯ ರಾಘವೇಂದ್ರ ಹಾಡಿದ್ದಾರೆ. ಅಲ್ಲಿಗೆ ಡಾ.ರಾಜ್‌ ಕುಟುಂಬದ ನಾಲ್ವರು “ಆಡುವ ಗೊಂಬೆ’ ಚಿತ್ರಕ್ಕೆ ಹಾಡಿದಂತಾಗಿದೆ. ಈಗಾಗಲೇ ರಾಘವೇಂದ್ರ ರಾಜಕುಮಾರ್‌ ಅವರು ಹಾಡಿರುವ “ಆಡಿಸಿ ನೋಡು, ಬೀಳಿಸಿ ನೋಡು’ ಹಾಡಿಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು 14 ವರ್ಷಗಳ ನಂತರ ರಾಘವೇಂದ್ರ ರಾಜಕುಮಾರ್‌ ಅವರು “ಆಡುವ ಗೊಂಬೆ’ ಮೂಲಕ ಗಾಯನಕ್ಕೆ ವಾಪಾಸ್‌ ಆಗಿದ್ದಾರೆ. ಸ್ವತಃ ರಾಘವೇಂದ್ರ ರಾಜಕುಮಾರ್‌ ಅವರು “ಆಡುವ ಗೊಂಬೆ’ ಚಿತ್ರಕ್ಕೆ ಹಾಡಿದ ಬಗ್ಗೆ ಖುಷಿಯಿಂದ ಮಾತನಾಡಿದ್ದರು. 

“ತುಂಬಾ ಸೊಗಸಾದ ಹಾಡು. 14 ವರ್ಷಗಳ ನಂತರ ನಾನು ಭಗವಾನ್‌ ಅವರ ಚಿತ್ರದ ಮೂಲಕ ಮತ್ತೆ ಹಾಡುವಂತಾಯಿತು. ಹಾಡು ಕೂಡಾ ಚೆನ್ನಾಗಿ ಹೋಗುತ್ತಿದೆ’ ಎಂದಿದ್ದರು. 

85 ವರ್ಷದ ಭಗವಾನ್‌ ಅವರು 22 ವರ್ಷಗಳ ನಂತರ “ಆಡುವ ಗೊಂಬೆ’ ಮೂಲಕ ಮತ್ತೆ ನಿರ್ದೇಶನಕ್ಕೆ ವಾಪಾಸ್ಸಾಗಿದ್ದಾರೆ. ಇದು ಅವರ ನಿರ್ದೇಶಮದ 50ನೇ ಸಿನಿಮಾ ಎಂಬುದು ಮತ್ತೂಂದು ವಿಶೇಷ. ಈ ಚಿತ್ರದಲ್ಲಿ ಅನಂತ್‌ನಾಗ್‌, ಸಂಚಾರಿ ವಿಜಯ್‌, ಸುಧಾ ಬೆಳವಾಡಿ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next