Advertisement
ಕಳೆದ 25 ವರ್ಷಗಳಿಂದ ಇಲ್ಲಿನ ರಾಮನಾಥಗೋಳಿ ಕಟ್ಟೆ ಫ್ರೆಂಡ್ಸ್ ಹಾಗೂ ಜಿ.ವಿ. ಆರ್ಟ್ಸ್ ಸಹಯೋಗದೊಡನೆ ಕೊಡಿ ಹಬ್ಬದ ಸಂದರ್ಭದಲ್ಲಿ ಥರ್ಮಾಕೋಲ್‌ನಿಂದ ನಿರ್ಮಿಸಲಾಗಿದ್ದ ತಾಜ್‌ಮಹಲ್, ಅಯೋದ್ಯ ರಾಮ ಮಂದಿರ, ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ, ಗೋಲ್ಡನ್ ಟೆಂಪಲ್, ತಿರುಪತಿ ವೆಂಕಟೇಶ್ವರ ಸಹಿತ ನಾನಾ ಕಲಾಕೃತಿಗಳು ಭಕ್ತರನ್ನು ಆಕರ್ಷಿಸುವುದರೊಡನೆ ರಂಜಿಸಿತು.
ಯಾವುದೇ ಫಲಾಪೇಕ್ಷೆ ಇಲ್ಲದೇ ಇಲ್ಲಿನ ಯುವಕರು ಕೇವಲ 15 ದಿನಗಳಲ್ಲಿ ಇಂತಹ ಕಲಾಕೃತಿಗಳನ್ನು ಕೈಚಳಕದಿಂದ ನಿರ್ಮಿಸಿ ಶಹಭಾಷ್ ಎಂಬ ಬಿರುದಿಗೆ ಪಾತ್ರರಾಗಿರುತ್ತಾರೆ. ಆದಿಯೋಗಿಯ ಈ ಕಲಾಕೃತಿಯು 19 ಫೀಟ್ ಎತ್ತರ ಹೊಂದಿದ್ದು 21 ಫೀಟ್ ಅಗಲದಿಂದ ಕೂಡಿದೆ. ನಯನ ಮನೋಹರವಾದ ಇಲ್ಲಿನ ಕಲಾಕೃತಿಯು ದಿನದಿಂದ ದಿನಕ್ಕೆ ಜನಮನ ಸೂರೆಗೊಳ್ಳುತ್ತಿದ್ದು ಕಲಾಕಾರರ ಪ್ರಾವಿಣ್ಯತೆಗೆ ಭೇಷ್ ಎಂದಿರುತ್ತಾರೆ.