Advertisement

ಫೇಸ್‌ಬುಕ್‌ ಖಾತೆಗೂ ಬೇಕು ಇನ್ನು ಆಧಾರ್‌?

06:55 AM Dec 28, 2017 | Team Udayavani |

ನವದೆಹಲಿ: ಬ್ಯಾಂಕ್‌ ಖಾತೆ, ಹೊಸ ಮೊಬೈಲ್‌ ಸಂಪರ್ಕ ಸೇರಿದಂತೆ ಎಲ್ಲದಕ್ಕೂ ಆಧಾರ್‌ ಈಗ ಅತ್ಯಗತ್ಯ. ಇದೀಗ ಈ ಪಟ್ಟಿಗೆ ಫೇಸ್‌ಬುಕ್‌ ಖಾತೆಯೂ ಸೇರಿಕೊಂಡಿದೆ. ಸದ್ಯ ಈ ವಿಚಾರ ಕಡ್ಡಾಯ ಮಾಡದಿದ್ದರೂ, ಫೇಸ್‌ಬುಕ್‌ನಲ್ಲಿ ಆಧಾರ್‌ ಕಾರ್ಡ್‌ನಲ್ಲಿ ಇರುವ ರೀತಿಯಲ್ಲಿಯೇ ಹೆಸರು ನಮೂದಿಸುವಂತೆ ಹೊಸ ಖಾತೆದಾರರಿಗೆ ಸೂಚಿಸಲಾಗುತ್ತಿದೆ.

Advertisement

ಖಾತೆದಾರರನ್ನು ಸುಲಭವಾಗಿ ಗುರುತು ಹಿಡಿಯಲು ಸಾಧ್ಯ ಎನ್ನುವುದು ಇದರ ಆಶಯ. ಇದು ಹೊಸ ಫೀಚರ್‌ ಆಗಿದ್ದು, ಕೆಲ ಬಳಕೆದಾರರು ಮಾತ್ರ ಅದನ್ನು ನೋಡಲು ಸಾಧ್ಯ. ಖಾತೆ ತೆರೆಯುವ ವೇಳೆ ಆಧಾರ್‌ನಲ್ಲಿರುವಂತೆಯೇ ಹೆಸರು ಟೈಪ್‌ ಮಾಡಬೇಕಾದ್ದು ಕಡ್ಡಾಯವಲ್ಲ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ. 

ಆಧಾರ್‌ ಕಾರ್ಡ್‌ ನೀಡಬೇಕು ಎನ್ನುವುದನ್ನು ಜನಪ್ರಿಯ ಇ-ಕಾಮರ್ಸ್‌ ವೆಬ್‌ಸೈಟ್‌ಗಳೂ ಸೂಚಿಸುತ್ತಿವೆ. ಗ್ರಾಹಕರಿಗೆ ಪೂರೈಕೆ ಮಾಡುವ ವಸ್ತುಗಳನ್ನು ಸುಲಭವಾಗಿ ಟ್ರ್ಯಾಕ್‌ ಮಾಡಲು ಈ ಕ್ರಮ ನೆರವಾಗುತ್ತದೆ ಎನ್ನುವುದು ಅವುಗಳ ವಾದ. ಬೆಂಗಳೂರಿನ ಝೂಮ್‌ ಕಾರ್‌ ಕಂಪನಿ ಕೂಡ ಈಗ ಬುಕಿಂಗ್‌ಗೆ ಆಧಾರ್‌ ಬೇಕು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next