Advertisement

ವಲಸಿಗರು ಆಧಾರ್‌ ಕಾರ್ಡ್‌ ಕೊಟ್ಟರೆ ಪಡಿತರ: ಗೋಪಾಲಯ್ಯ

08:08 AM May 27, 2020 | Lakshmi GovindaRaj |

ನೆಲಮಂಗಲ: ಹೊರರಾಜ್ಯ ಹಾಗೂ ಜಿಲ್ಲೆಯ ವಲಸಿಗರೂ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್‌ ಕಾರ್ಡ್‌ ನೀಡಿದರೆ ಮೇ, ಜೂನ್‌ ತಿಂಗಳಲ್ಲಿ 5 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ  ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದರು. ತಾಲೂಕಿನ ಕುಲುವನಹಳ್ಳಿ ಸೇರಿ ವಿವಿಧ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

Advertisement

ದೇಶದ ವಿವಿಧ ಭಾಗಗಳಿಂದ ಸಾವಿರಾರು  ಜನ ರಾಜ್ಯಕ್ಕೆ ಬರುತ್ತಿದ್ದು ಅವರಿಗೆ ಹಸಿವು ನೀಗಿಸಲು 2 ತಿಂಗಳು ಉಚಿತ ಅಕ್ಕಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸಂಗ್ರಹ ಮಾಡಲಾಗಿದ್ದು ಆನ್‌ಲೈನ್‌ ಮೂಲಕ ಆಧಾರ್‌ಕಾರ್ಡ್‌ ನಂಬರ್‌ ನಮೂದಿಸಿ 5  ಕೆ.ಜಿ. ಅಕ್ಕಿ ನೀಡಲಾಗುತ್ತದೆ ಎಂದರು.

ಪಡಿತರ ಅಕ್ಕಿ ರುಚಿ ಸವಿದ ಸಚಿವ: ತಾಲೂಕಿನ ಕುಲವನಹಳ್ಳಿ, ಬಿಲ್ಲಿನ  ಕೋಟೆ, ಹೊನ್ನೇನಹಳ್ಳಿ ಸೇರಿ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿದ ಸಚಿವರು, ತೂಕ, ಪಡಿತರದ ಗುಣಮಟ್ಟ, ವಿತರಣೆ ಬಗ್ಗೆ ಪರಿಶೀಲನೆ  ನಡೆಸಿ ಶಿವಗಂಗೆ ಪ್ರವಾಸಿ ಮಂದಿರಲ್ಲಿ ಮುದ್ದೆ,ಪಡಿತರ ಅಕ್ಕಿ ಅನ್ನದ ರುಚಿ ಸವಿದರು. ಸಂದರ್ಭದಲ್ಲಿ ತಹಶೀಲ್ದಾರ್‌ ಶ್ರೀನಿ ವಾಸ್‌, ಆಹಾರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಸುಬ್ರಹ್ಮಣ್ಯ, ಶಿರಸ್ತೇದಾರ್‌ ಲಲಿತಾ, ಆಹಾರ ನಿರೀಕ್ಷಕ  ಅಮಾನುಲ್ಲಾ, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜೂ.1ರಿಂದ ಅಕ್ಕಿ, ಕಡಲೇಕಾಳು: ರಾಜ್ಯದ ಎಲ್ಲಾ ಪಡಿತರ ಕಾರ್ಡ್‌  ದಾರರಿಗೆ ಜೂ.1ರಿಂದ ಕೇಂದ್ರ- ರಾಜ್ಯ ಸರ್ಕಾರದ ಸಹಕಾರದೊಂ ದಿಗೆ ಪ್ರತಿಯೊಬ್ಬ ವ್ಯಕ್ತಿಗೆ 5 ಕೆ.ಜಿ. ಅಕ್ಕಿ, 2ಕೆ.ಜಿ. ಕಡಲೆಕಾಳು ವಿತರಣೆ ಮಾಡಲಾಗುತ್ತದೆ. ಮುಂದಿನ  ದಿನ ಗಳಲ್ಲಿ ರಾಗಿ, ಜೋಳ ನೀಡುವ ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next