ಹೊಸದಿಲ್ಲಿ : ಆಧಾರ್ ಸಾಫ್ಟ್ ವೇರ್ ಭದ್ರತೆಯಲ್ಲಿ ಗಂಭೀರ ಲೋಪಗಳು ಪತ್ತೆಯಾಗಿದ್ದು ಆಧಾರ್ ಸಾಫ್ಟ್ ವೇರ್ ಹ್ಯಾಕ್ ಮಾಡುವ ಮೂಲಕ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಕುಳಿತುಕೊಂಡು ಯಾರೂ ಅನಧಿಕೃತ ಆಧಾರ್ ನೋಂದಾವಣೆ ಆಪರೇಟರ್‌ಗಳಾಗಿ ಕೆಲಸ ಮಾಡಬಹುದಾಗಿದೆ ಎಂದು ಹಫ್ ಪೋಸ್ಟ್ ಸುದ್ದಿ ವೆಬ್ ಸೈಟ್ ನಡೆಸಿರುವ ತನಿಖಾ ವರದಿ ತಿಳಿಸಿದೆ.
‘ಹೊಸ ಬಳಕೆದಾರರನ್ನು ನೋಂದಾಯಿಸುವುದಕ್ಕೆ ಬಳಸಲ್ಪಡುವ ಆಧಾರ್ ಸಾಫ್ಟ್ ವೇರ್ ಅನ್ನು ಹ್ಯಾಕ್ ಮಾಡಲು ಸಾಧ್ಯವಿದೆ. ಅದರಲ್ಲಿನ ಭದ್ರತಾ ಅಂಶಗಳಿರುವ ನಿರ್ಣಾಯಕ ‘ಪ್ಯಾಚ್’ ನಿಷ್ಕ್ರಿಯಗೊಳಿಸುವ ಮೂಲಕ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರೂ ಕೂಡ ಆಧಾರ್ ನೋಂದಾವಣೆ ಮಾಡಬಹುದಾಗಿದೆ ಎಂಬುದನ್ನು ಹಫ್ ಪೋಸ್ಟ್ ತನ್ನ ತನಿಖೆಯಿಂದ ಬಹಿರಂಗಪಡಿಸಿದೆ.
ಸುಮಾರು ಮೂರು ತಿಂಗಳ ಕಾಲ ಹಫ್ ಪೋಸ್ಟ್ ನಡೆಸಿರುವ ಕೂಲಂಕಷ ತನಿಖೆಯಲ್ಲಿ ಆಧಾರ್ ಸಾಫ್ಟ್ ವೇರ್ ನ ಈ ನಿರ್ಣಾಯಕ ಪ್ಯಾಚ್ ಹ್ಯಾಕ್ ಮಾಡಿದಲ್ಲಿ ಭದ್ರತಾ ಅಂಶಗಳನ್ನು ಬೈಪಾಸ್ ಮಾಡಬಹುದಾಗಿದ್ದು ತತ್‌ಪರಿಣಾಮವಾಗಿ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರಿಗೂ ಆಧಾರ್ ನಂಬರ್ ಕೊಡಬಹುದಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ.
ಆಧಾರ್ ಸಾಫ್ಟ್ ವೇರ್ ನ ಈ ನಿರ್ಣಾಯಕ ಪ್ಯಾಚ್ ತಲುಪುವಿಕೆಯನ್ನು ತಾನು ಪಡೆದಿದ್ದು ಹಲವಾರು ಪರಿಣತರ ಮೂಲಕ ಇದನ್ನು ತಾನು ಪರಿಶೀಲಿಸಿದ್ದೇನೆ ಎಂದು ಹಫ್ ಪೋಸ್ಟ್ ಹೇಳಿದೆ.
ಆಧಾರ್ ಸಾಫ್ಟ್ ವೇರ್ ನ ಈ ನಿರ್ಣಾಯಕ ಪ್ಯಾಚ್ ತಲುಪುವ ಮೂಲಕ ಅನಧಿಕೃತ ಜನರು ಕೂಡ ಆಧಾರ್ ನೋಂದಾವಣೆ ಮಾಡಬಹುದಾಗಿದೆ. ಏಕೆಂದರೆ ಆಧಾರ್ ಸಾಫ್ಟ್ ವೇರ್‌ನ ಈ ನಿರ್ಣಾಯಕ ಪ್ಯಾಚ್ ಹ್ಯಾಕ್ ಮಾಡಿದರೆ ಅದು ಆಧಾರ್ ನೋಂದಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಭದ್ರತಾ ದಾಖಲೆಗಳನ್ನು ಕೇಳುವುದಿಲ್ಲ ಎಂದು ಹಫ್ ಪೋಸ್ಟ್ ಹೇಳಿದೆ. ಪ್ರಕೃತ ಅಧಿಕೃತ ಆಧಾರ್ ಸಾಫ್ಟ್ ವೇರ್ ಎನ್‌ರೋಲ್‌ಮೆಂಟ್ ಆಪರೇಟರ್ ಗಳು ಇರುವ ತಾಣಗಳನ್ನು ಗುರುತಿಸುವುದಕ್ಕೆ ಅವಕಾಶವಿದೆ.
ಆಧಾರ್ ಸಾಫ್ಟ್ ವೇರ್ ಹ್ಯಾಕ್ ಮಾಡುವ ಮೂಲಕ ಅನಧಿಕೃತರಿಗೆ, ಎನ್‌ರೋಲ್‌ಮೆಂಟ್ ಆಪರೇಟರ್ ಗಳಾಗಿ ಲಾಗಿನ್ ಆಗುವುದಕ್ಕೆ ಸಾಧ್ಯವಿರುತ್ತದೆ ಎಂದು ಹಫ್ಪೋಸ್ಟ್ ಹೇಳಿದೆ.