ನವದೆಹಲಿ: ಪಡಿತರ ಚೀಟಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಇನ್ನಷ್ಟು ರಿಲೀಫ್ ನೀಡಿದ್ದು, ಆಧಾರ್ ಮತ್ತು ರೇಷನ್ ಕಾರ್ಡ್ ನಂಬರ್ ಜೋಡಣೆ ಅವಧಿಯ ಗಡುವನ್ನು ಮತ್ತೊಮ್ಮೆ ವಿಸ್ತರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:FIFA World Cup;ಕತಾರ್ ವಿರುದ್ಧ ಸೋಲು:ಇತಿಹಾಸ ಬರೆಯುವ ಅವಕಾಶ ಕಳೆದುಕೊಂಡ ಭಾರತ
ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಲು ಹೊಸ ಅವಧಿಯನ್ನು 2024ರ ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿದೆ. ಈ ಮೊದಲು ಜೂನ್ 30ರವರೆಗೆ ಮಾತ್ರ ಗಡುವು ನೀಡಲಾಗಿತ್ತು.
ಆಧಾರ್ ಮತ್ತು ರೇಷನ್ ಕಾರ್ಡ್ ನಂಬರ್ ಜೋಡಣೆಗಾಗಿ ದಿನಾಂಕ ವಿಸ್ತರಿಸಿರುವ ಕುರಿತು ಫುಡ್ ಆಂಡ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿದೆ ಎಂದು ವರದಿ ತಿಳಿಸಿದೆ.
ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಲು ಇವಿಷ್ಟು ದಾಖಲೆಗಳು ಅಗತ್ಯ:
1)ರೇಷನ್ ಕಾರ್ಡ್ ಒರಿಜಿನಲ್ ಕಾಪಿ
2)ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಫೋಟೊ ಕಾಪಿ
3)ಕುಟುಂಬದ ಯಜಮಾನನ ಆಧಾರ್ ಕಾರ್ಡ್
4)ಬ್ಯಾಂಕ್ ಪಾಸ್ ಬುಕ್ ಫೋಟೊ ಕಾಪಿ
5)ಕುಟುಂಬದ ಯಜಮಾನನ ಎರಡು ಪಾಸ್ ಪೋರ್ಟ್ ಸೈಜ್ ಫೋಟೊ