Advertisement
ಆದೇಶದಲ್ಲೇನಿದೆ: ವಸತಿ ನಿಗಮದ ಮನೆಗಳು ನಕಲಿ ಫಲಾನುಭವಿಯ ಹೆಸರಿನಲ್ಲಿ ವಿತರಣೆಯಾಗುತ್ತಿರುವುದು ಗೊತ್ತಾಗಿದೆ. ಆದ್ದರಿಂದ ಪ್ರತಿ ಗ್ರಾ.ಪಂ.ಗಳು 2005ರಿಂದ ನಿಗಮದ ವಿವಿಧ ವಸತಿ ಯೋಜನೆಗಳ ಮೂಲಕ ವಸತಿ ಸೌಲಭ್ಯ ಪಡೆದವರ ಆಧಾರ್ ಸಂಖ್ಯೆಯನ್ನು ನಿಗಮದ ವೆಬ್‌ಸೈಟಿಗೆ ತುಂಬಿಸಬೇಕು. ಜು. 21ರಿಂದ ಈ ಅಭಿಯಾನ ಆರಂಭಿಸಿ ಜು. 31ರ ಒಳಗೆ ಪೂರ್ಣಗೊಳಿಸ ಬೇಕು. ಒಬ್ಬನೇ ವ್ಯಕ್ತಿಗೆ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಮನೆಗಳು ಮಂಜೂರಾಗಿದ್ದರೆ ಅಂತಹ ವ್ಯಕ್ತಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಬೇಕು ಎಂದು ಸೂಚಿಸಲಾಗಿದೆ.
Related Articles
Advertisement
ಬೆಳಕಿಗೆ ಬಂದ ಬಗೆ: 6 ತಿಂಗಳ ಹಿಂದೆ ವಸತಿ ಪೂರ್ಣಗೊಳಿಸಿದ ಪ್ರತಿ ಫಲಾನುಭವಿಗೆ ನಿಗಮದ ಮುಖ್ಯಸ್ಥರಿಂದ ಧನ್ಯವಾದ ಪತ್ರ ಬಂದಿತ್ತು. ನಿರ್ಮಾಣ ಹಂತದಲ್ಲಿರುವವರಿಗೆ ಮಂಜೂರಾತಿ ವಿವರ ಹಾಗೂ ಶೀಘ್ರ ಕಾಮಗಾರಿ ಮುಗಿಸುವಂತೆ ಪತ್ರ ಬರೆಯಲಾಗಿತ್ತು. ಈ ಸಂದರ್ಭ ಒಂದೇ ಗ್ರಾಮದಲ್ಲಿ ಒಬ್ಬನೇ ವ್ಯಕ್ತಿಗೆ ಹೆಚ್ಚುವರಿ ಮನೆಗಳು ಮಂಜೂರಾಗಿರುವುದು ಬೆಳಕಿಗೆ ಬಂದಿರುವ ಸಾಧ್ಯತೆಯಿದೆ.
ನಿಯಮಅರ್ಹ ವ್ಯಕ್ತಿ ಅರ್ಜಿ ಸಲ್ಲಿಸಿದ ಬಳಿಕ ವಸತಿ ನಿಗಮದ ಕಾಯ್ದೆಯಂತೆ ಮನೆ ಮಂಜೂರಾದಾಗ ಸಂಬಂಧಪಟ್ಟ ಆಡಳಿತದವರು ಫಲಾನುಭವಿಗೆ ನಮೂನೆ 9ರಲ್ಲಿ ಮಂಜೂರಾತಿ ಪತ್ರ ನೀಡಬೇಕು. ಮಂಜೂರಾತಿ ಪತ್ರ ದೊರೆತು 90 ದಿನಗಳ ಒಳಗೆ ಫಲಾನುಭವಿ ಪಂಚಾಂಗ ಹಾಕಬೇಕು. ಹೀಗೆ 90 ದಿನಗಳ ಒಳಗೆ ಮನೆಗೆ ಅಡಿಪಾಯ ಹಾಕದಿದ್ದರೆ ಆತನಿಗೆ ಮಂಜೂರಾದ ಮನೆ ರದ್ದಾಗುತ್ತದೆ. ಆತನಿಗೆ ಮನೆಯ ಆವಶ್ಯಕತೆ ಇಲ್ಲ ಎಂದೇ ತೀರ್ಮಾನಿಸಲಾಗುತ್ತದೆ. ಇಕ್ಕಟ್ಟಿನಲ್ಲಿ ಪಂಚಾಯತ್ ಅಧಿಕಾರಿಗಳು
ರಾಜಕಾರಣಿಗಳ ಒತ್ತಡದಿಂದ ಮನೆ ಮಂಜೂರು ಮಾಡಿಸಿಕೊಂಡವರು ಹಾಗೂ ಮಂಜೂರು ಮಾಡಿದ ಪಂಚಾಯತ್ ಅಧಿಕಾರಿಗಳಿಗೆ ಈಗ ಚಳಿ ಕಾಡಲಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಕಡ್ಡಾಯ ಎಂದು ಆದೇಶದಲ್ಲಿರುವ ಕಾರಣ ಅನೇಕರು ಸಿಕ್ಕಿಬೀಳುವ ಭಯದಲ್ಲಿದ್ದಾರೆ. ಏಕೆಂದರೆ ಒಂದು ತಾಲೂಕಿಗೆ 5-6 ಸಾವಿರ ಮನೆಗಳು ಪ್ರತಿ ವರ್ಷ ಮಂಜೂ ರಾಗುತ್ತವೆ. ತಾಲೂಕಿನಲ್ಲಿ 60 ಸಾವಿರ ಮನೆ ಗಳಿದ್ದು 25 ಸಾವಿರ ವಸತಿ ರಹಿತರಿದ್ದರೆ 5 ಸಾವಿರದಂತೆ ಮನೆಗಳ ಮಂಜೂರಾತಿಯಾದಾಗ 5 ವರ್ಷಗಳಲ್ಲಿ ಹೊಸ ಫಲಾನುಭವಿಗಳು ಮಾತ್ರ ಉಳಿಯಬೇಕು. ಆದರೆ ಮನೆರಹಿತರ ಸಂಖ್ಯೆ ದೊಡ್ಡದೇ ಇರುತ್ತದೆ. ಆದ್ದರಿಂದ ನಿಗಮ ಈ ಕ್ರಮಕ್ಕೆ ಮುಂದಾಗಿದೆ. ಇದರ ನಡುವೆ ರಾಜಕಾರಣಿಗಳ ಬೆಂಬಲಿಗರಿಗೆ ತೊಂದರೆಯಾದರೆ ಈ ಅಧಿಕಾರಿಯೂ ಎತ್ತಂಗಡಿಯಾದರೆ ಅಚ್ಚರಿಯಿಲ್ಲ. – ಲಕ್ಷ್ಮೀ ಮಚ್ಚಿನ