Advertisement
ಸರ್ಕಾರದ ವಾದ: ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಆಧಾರ್ ಸಂಖ್ಯೆ ಜೋಡಣೆ ರಾಷ್ಟ್ರದ ಹಿತದೃಷ್ಟಿಯಿಂದ ಅವಶ್ಯಕ. ‘ಬ್ಲೂ ವೇಲ್ ಗೇಮ್’ನಂಥ ಆನ್‌ಲೈನ್ ಅವಘಡ ತಪ್ಪಿಸಲು, ಸುಳ್ಳು ಸುದ್ದಿ, ಅನೈತಿಕ ವಿಚಾರಗಳನ್ನು ಹರಡುವ, ಅಪರಾಧ-ಹಿಂಸಾಚಾರಕ್ಕೆ ಪ್ರೇರೇಪಿಸುವವರನ್ನು ಪತ್ತೆ ಹಚ್ಚಲು ಇದರಿಂದ ಸಹಾಯವಾಗುತ್ತದೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾತ್ರವಲ್ಲದೆ ಗೂಗಲ್, ಟ್ವಿಟರ್, ಯು ಟ್ಯೂಬ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಅಭಿಪ್ರಾಯ ಸಂಗ್ರಹಿಸಲು ಆ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಮುಂದುವರಿಯಬಹುದು. ಆದರೆ, ಅಂತಿಮ ತೀರ್ಪನ್ನು ಪ್ರಕಟಿಸುವಂತಿಲ್ಲ ಎಂದಿತು.