Advertisement

ನವಜಾತ ಶಿಶುಗಳಿಗೂ ಆಧಾರ್‌ ಸಂಖ್ಯೆ?

12:40 AM Dec 17, 2021 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ನವಜಾತ ಶಿಶುಗಳಿಗೂ ಆಧಾರ್‌ ಸಂಖ್ಯೆ ನೀಡ ಲಾಗುತ್ತದೆ. ಇದಕ್ಕಾಗಿ ಜನನ ಮತ್ತು ನೋಂದಣಿ ಇಲಾಖೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲು ಯುಐಡಿಎಐ ಮುಂದಾಗಿದೆ.

Advertisement

ನವ ಜಾತ ಶಿಶು ವಿನ ಫೋಟೋ ಕ್ಲಿಕ್ಕಿಸಿ ಅದಕ್ಕೂ ಆಧಾರ್‌ ನಂಬರ್‌ ಕೊಡು ವುದು ನಮ್ಮ ಚಿಂತನೆ ಎಂದು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಷ್‌ ಗರ್ಗ್‌ ಹೇಳಿದ್ದಾರೆ.

ಪ್ರಸ್ತಾವಿತ ಯೋಜನೆ ಜಾರಿಗಾಗಿ ಜನನ ಮತ್ತು ಮರಣಗಳ ರಿಜಿಸ್ಟ್ರಾರ್‌ ಜತೆಗೆ ಸಹಭಾಗಿತ್ವ ಹೊಂದುವ ಇರಾದೆ ಇದೆ ಎಂದು ಅವರು ಹೇಳಿದ್ದಾರೆ. ಪ್ರತೀ ವರ್ಷ 2ರಿಂದ 2.5 ಕೋಟಿ ಮಂದಿ ಶಿಶುಗಳು ಜನಿಸುತ್ತವೆ. ಅವುಗಳಿಗೆ ಆಧಾರ್‌ ಮೂಲಕ ಜನನ ಪ್ರಮಾಣಪತ್ರ ನೀಡಲು ಯೋಚಿಸಲಾಗುತ್ತಿದೆ ಎಂದರು.

ಶಿಶು ಜನಿಸಿದ ಬಳಿಕ ಅದರ ಫೋಟೋ ತೆಗೆಯಲಾಗುತ್ತದೆ. ತಂದೆ ಅಥವಾ ತಾಯಿಯ ಆಧಾರ್‌ ಕಾರ್ಡ್‌ ಜತೆಗೆ ಭಾವಚಿತ್ರ ಹೊಂದಿರುವ ಶಿಶುವಿನ ಆಧಾರ್‌ ಲಿಂಕ್‌ ಮಾಡಲಾಗುತ್ತದೆ. ಆ ಶಿಶು ಐದು ವರ್ಷ ಪೂರೈಸಿದ ಬಳಿಕ ಬಯೋಮೆಟ್ರಿಕ್‌ ವಿವರ ಪಡೆದು ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಸುಭಾಷ್‌ ಗರ್ಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next