Advertisement

210 ಸರಕಾರಿ ವೆಬ್‌ಸೈಟ್‌ಗಳಲ್ಲಿ ಆಧಾರ್‌ ಮಾಹಿತಿ ಸೋರಿಕೆ

09:18 AM Nov 20, 2017 | |

ಹೊಸದಿಲ್ಲಿ: ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳ ಸುಮಾರು 200ಕ್ಕೂ ಹೆಚ್ಚು ಇಲಾಖೆಗಳು ನಾನಾ ಆಧಾರ್‌ ಕಾರ್ಡ್‌ಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿವೆ ಎಂಬ ಆಘಾತಕಾರಿ ವಿಚಾರವೊಂದನ್ನು ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಹೊರಹಾಕಿದೆ. ಆರ್‌ಟಿಐಯಡಿ ಕೇಳಿದ್ದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಈ ವಿಚಾರ ಹೊರಬಿದ್ದಿದೆ. 

Advertisement

ವಿವಿಧ ಯೋಜನೆಗಳಿಗೆ ಆಧಾರ್‌ ಸಂಖ್ಯೆಗಳ ಜೋಡಣೆಯಿಂದ ಆಗುವ ಸಾರ್ವಜನಿಕರ ಮಾಹಿತಿಯ ಸೋರಿಕೆ ವಿರುದ್ಧ  “ಮಾಹಿತಿ ಖಾಸಗಿತನ’ ಬಗ್ಗೆ ಕೂಗೆದ್ದಿರುವ ಈ ಸಂದರ್ಭದಲ್ಲೇ ಯುಐಡಿಎಐನ ಈ ಹೇಳಿಕೆ ಆಧಾರ್‌ ಜೋಡಣೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಮತ್ತೂಮ್ಮೆ ಚಾಲ್ತಿಗೆ ತಂದಿದೆ.  ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಧಿಕಾರ, ವೆಬ್‌ಸೈಟ್‌ಗಳಲ್ಲಿ ಮಾಹಿತಿ ಸೋರಿಕೆ ವಿಚಾರ ಗೊತ್ತಾದೊಡನೆ ಆ ಮಾಹಿತಿಯನ್ನು ತೆಗೆದುಹಾಕಲಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next