Advertisement

ಆಧಾರ್‌ ಹ್ಯಾಕ್‌ಗೆ 13 ಶತಕೋಟಿ ವರ್ಷ ಬೇಕು

09:45 AM Mar 23, 2018 | Team Udayavani |

ಹೊಸದಿಲ್ಲಿ: ಭಾರತ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನೀಡುವ ಆಧಾರ್‌ ಮಾಹಿತಿ ಹ್ಯಾಕ್‌ ಮಾಡಲು ಒಂದು ಸೂಪರ್‌ಕಂಪ್ಯೂಟರ್‌ನಷ್ಟು ವರ್ಷಗಳು ಅಂದರೆ 13 ಶತಕೋಟಿ ವರ್ಷದ ಕಾಲಾವಧಿ ಬೇಕು. ಅಷ್ಟು ಬಲಿಷ್ಠ ಪ್ರಮಾಣದಲ್ಲಿ ಮಾಹಿತಿಯನ್ನು ಎನ್‌ ಕ್ರಿಪ್ಟ್ಗೆ (ಗೂಡಲಿಪ್ಯಂ ತೀಕರಣಕ್ಕೆ )ಒಳಪಡಿಸಲಾಗಿದೆ ಎಂದು ಪ್ರಾಧಿಕಾರದ ಸಿಇಒ ಅಜಯ ಭೂಷಣ ಪಾಂಡೆ ಹೇಳಿದ್ದಾರೆ. 

Advertisement

ಸುಪ್ರೀಂ ಕೋರ್ಟ್‌ನಲ್ಲಿ ಆಧಾರ್‌ ಬಗ್ಗೆ ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ ನೀಡಿದ ಅವರು, ಆಧಾರ್‌ ಮಾಹಿತಿ ಒಂದು ಬಾರಿ ಕೇಂದ್ರ ಸರ್ವರ್‌ ತಲುಪಿದರೆ ರಾಷ್ಟ್ರೀಯ ಭದ್ರತೆ ಹೊರತಾಗಿ ಅದನ್ನು ಹಂಚಿಕೆ ಮಾಡಲಾಗದು. ದತ್ತಾಂಶ ಇರುವ ಕೊಠಡಿಗೆ ಇಂಟರ್ನೆಟ್‌ ಮತ್ತಿತರ ಆಧುನಿಕ ಸಂಪರ್ಕ ಇಲ್ಲ. ಜುಲೈಯಿಂದ ಮುಖವನ್ನೇ ಗುರುತನ್ನಾಗಿಸಿ ಮತ್ತು ಕ್ಯುಆರ್‌ ಕೋಡ್‌ ಬಳಸಿ ದೃಢೀಕರಣ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ. ಬಯೋಮೆಟ್ರಿಕ್‌ ಗುರುತು ದಾಖಲಿಸುವ ಸಾಫ್ಟ್ ವೇರ್‌ ನಿಯಂತ್ರಣ ಭಾರತದಲ್ಲಿಯೇ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next