Advertisement

ಆಧಾರ್‌ ಕಾರ್ಡ್‌ ನೋಂದಣಿ ಅಭಿಯಾನ

11:38 AM Jan 10, 2017 | Team Udayavani |

ಯಲಹಂಕ: ಪ್ರಧಾನಿಯವರ ಮಹತ್ವಾಕಾಂಕ್ಷೆಯ “ಡಿಜಿಟಲ್‌ ಇಂಡಿಯಾ’ ಕಾರ್ಯ ಯೋಜನೆ ಹಾಗೂ ನಗದುರಹಿತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಇಂದಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ಗಳ ಅವಶ್ಯಕತೆ ಬಹುಮುಖ್ಯ ಎಂದು ಕೆಂಪೇಗೌಡ ವಾರ್ಡ್‌ ಕಾರ್ಪೋರೇಟರ್‌ ಚಂದ್ರಮ್ಮ ಕೆಂಪೇಗೌಡರ ತಿಳಿಸಿದ್ದಾರೆ.

Advertisement

ಯಲಹಂಕ ಮಾರುತಿ ನಗರದಲ್ಲಿ ಉಚಿತವಾಗಿ ಆಧಾರ್‌ ಕಾರ್ಡ್‌ ಮಾಡಿಕೊಡುವ ಮೂರು ದಿನಗಳ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಇಂದಿಗೂ ಸಾಕ್ಷರತೆ ಹಾಗೂ ಡಿಜಿಟಲ್‌ ತಂತ್ರಜಾnನದಿಂದ ವಂಚಿತವಾಗಿರುವ ಬಹುದೊಡ್ಡ ಜನವರ್ಗ ಭಾರತದಲ್ಲಿ ಇದ್ದು, ಇವರು ಪ್ರಧಾನಮಂತ್ರಿಗಳ ಕನಸಾದ ನಗದುರಹಿತ ವ್ಯವಹಾರಗಳನ್ನು ಅಂತರ್ಜಾಲ ವಹಿವಾಟುಗಳಲ್ಲಿ ನಡೆಸಲು ಕಷ್ಟವಾಗುತ್ತಿದೆ.

ಈ ವ್ಯವಹಾರಗಳನ್ನು ನಡೆಸಲು ಆಧಾರ್‌ಕಾರ್ಡ್‌ ಸಂಖ್ಯೆ ಅವಶ್ಯಕವಾಗಿದ್ದು, ಇಂತಹವರಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ.ಈ ನಿಟ್ಟಿನಲ್ಲಿ ಸಿಂಗನಾಯಕನಹಳ್ಳಿಯ “ವಿಶ್ವವಾಣಿ ಫೌಂಡೇಶನ್‌’ ಉಚಿತ ಆಧಾರ್‌ ಕಾರ್ಡ್‌ಗಳನ್ನು ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಮೊಬೈಲ್‌ ಸಿಮ್‌ ಪಡೆಯಲು, ಬ್ಯಾಂಕ್‌ ಖಾತೆ ಪಡೆಯಲು, ರೇಷನ್‌ ಕಾರ್ಡ್‌ ಪಡೆಯಲು, ಗ್ಯಾಸ್‌ ಸಬ್ಸಿಡಿ ಪಡೆಯಲು, ಅಷ್ಟೇ ಏಕೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಆರ್ಥಿಕ ವ್ಯವಹಾರಗಳನ್ನು ನಡೆಸಲು ಆಧಾರ್‌ ಕಾರ್ಡ್‌ ಅವಶ್ಯವಾಗಿದ್ದು, ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಹೊಂದಲೇಬೇಕಾಗಿರುತ್ತದೆ ಎಂದು ಸ್ಥಳೀಯ ಬಿಜೆಪಿ ನಾಯಕ ಮುರಾರಿ ರಾಮು ತಿಳಿಸಿದರು.

ಈ ಅಭಿಯಾನದಲ್ಲಿ ಈಗಾಗಲೇ ಸುಮಾರು ಮೂರು ಸಾವಿರ ಜನ ಆಧಾರ್‌ ಕಾರ್ಡ್‌ಗಳನ್ನು ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಆಧಾರ್‌ ಕಾರ್ಡ್‌ ಆಧಾರಿತ ಹಣಕಾಸು ವಹಿವಾಟುಗಳಾದ ಎಇಸಿಎಫ್, ಸ್ಮಾರ್ಟ್‌ ಫೋನ್‌ ಬಳಕೆ, ಇಂಟರ್‌ ಬ್ಯಾಂಕಿಂಗ್‌, ಮೈಕ್ರೋ ಎಟಿಎಂ, ಎಲ್ಲಕ್ಕಿಂತ ಮಿಗಿಲಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಭೀಮ್‌ ಆ್ಯಪ್‌’ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ಕಮ್ಮಟಗಳನ್ನು ಏರ್ಪಡಿಸಲಾಗುವುದು ಎಂದು ಕೆಂಪೇಗೌಡ ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಕೇಬಲ್‌ ನಾಗರಾಜ್‌, ಸಂತೊಷ್‌ಕುಮಾರ್‌, ವೈ.ಸಿ. ಮೋಹನ್‌ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next