Advertisement

ಆಧಾರ್‌ ಆಧಾರಿತ ಸ್ಕೈಪ್‌ ಲೈಟ್‌ ಬಿಡುಗಡೆ

03:50 AM Feb 23, 2017 | |

ನವದೆಹಲಿ: ಭಾರತೀಯ ಇಂಟರ್ನೆಟ್‌- ಮೊಬೈಲ್‌ ವಲಯವನ್ನು ಗುರಿಯಾಗಿಸಿ ಸಾಫ್ಟ್ವೇರ್‌ ದಿಗ್ಗಜ ಮೈಕ್ರೋಸಾಫ್ಟ್ ನೂತನ ಆಧಾರ್‌ ಆಧಾರಿತ, ವಿಡಿಯೋ ಕಾಲಿಂಗ್‌ ಆ್ಯಪ್‌ ಸ್ಕೈಪ್‌ ಲೈಟ್‌, ಲಿಂಕ್ಡ್ಇನ್‌ ಲೈಟ್‌ ಅನ್ನು ಬಿಡುಗಡೆ ಮಾಡಿದೆ. ಮುಂಬೈಯಲ್ಲಿನ ಸಮಾರಂಭದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಇದನ್ನು ಬಿಡುಗಡೆ ಮಾಡಿದರು. ನೂತನ ಸ್ಕೈಪ್‌ ಆ್ಯಪ್‌ ಸದ್ಯ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಸ್ಕೈಪ್‌ಲೈಟ್‌ ಕೇವಲ 13 ಎಂ.ಬಿ. ಹೊಂದಿದ್ದು, ಕಡಿಮೆ ಸ್ಟೋರೇಜ್‌ ಸಾಮರ್ಥ್ಯ ಇರುವ ಸ್ಮಾರ್ಟ್‌ ಫೋನ್‌ಗಳಲ್ಲೂ ಅಳವಡಿಸಿಕೊಳ್ಳಬಹುದು. ಜೊತೆಗೆ 2ಜಿಯಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಇರುವ ಸ್ಕೈಪ್‌ ಆ್ಯಪ್‌ ಹೆಚ್ಚಿನ ಇಂಟರ್ನೆಟ್‌ ವೇಗವನ್ನು ಬಯಸುತ್ತದೆ. ಇದಕ್ಕೂ ಆಧಾರ್‌ ಲಿಂಕ್‌ ಮಾಡಬಹುದಾಗಿದೆ. ಇನ್ನು ಉದ್ಯೋಗ ಮಾಹಿತಿ ನೀಡುವ ಸಾಮಾಜಿಕ ಜಾಲ ತಾಣ ಲಿಂಕ್ಡ್ ಇನ್‌ ಲೈಟ್‌ ಬಿಡುಗಡೆ ಮಾಡಲಾಗಿದ್ದು ಕಡಿಮೆ ಇಂಟರ್ನೆಟ್‌ ವೇಗದಲ್ಲೂ ಕಾರ್ಯಾಚರಿಸುತ್ತದೆ. ಇದಕ್ಕೂ ಆಧಾರ್‌ ಲಿಂಕ್‌ ಮಾಡಬಹುದಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next