Advertisement

ಆಧಾರ್‌ ತಿದ್ದುಪಡಿ ಅವ್ಯವಸ್ಥೆ ಸರಿಪಡಿಸಲು ಆಗ್ರಹ

10:35 AM Jul 16, 2019 | Team Udayavani |

ಹಿರೇಕೆರೂರ: ತಾಲೂಕಿನ ಆಧಾರ್‌ ತಿದ್ದುಪಡಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಮತ್ತು ನಿಗದಿ ಮಾಡದೇ ನಿತ್ಯ ಜನತೆಗೆ ಆಧಾರ್‌ ಕಾರ್ಡ್‌ ತಿದ್ದುಪಡಿ ಮತ್ತು ನೋಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಉಣಕಲ್, ಸಾರ್ವಜನಿಕರು ಆಧಾರ್‌ ತಿದ್ದುಪಡಿ ಮತ್ತು ನೋಂದಣಿ ಮಾಡಿಸಲು ಹರಸಾಹಸ ಪಡುವಂತಾಗಿದೆ. ಇಲ್ಲಿನ ಕೆವಿಜಿ ಬ್ಯಾಂಕ್‌, ಅಂಚೆ ಕಚೇರಿ ಮತ್ತು ತಹಶೀಲ್ದಾರ್‌ ಕಚೇರಿಯಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳಲ್ಲಿ ನಿಗದಿತ ಅಂದರೆ 20 ರಿಂದ 40 ಜನತೆಯ ಆಧಾರ್‌ ತಿದ್ದುಪಡಿ ಮತ್ತು ನೋಂದಣಿ ಮಾಡಲಾಗುತ್ತಿದೆ. ಮತ್ತು ಇಲ್ಲಿ ಮಾಹಿತಿ ಕೊರತೆ ಮತ್ತು ಅವ್ಯವಸ್ಥೆಗಳಿಂದ ಕೂಡಿದ್ದು, ಇದರಿಂದ ಗ್ರಾಮೀಣ ಪ್ರದೇಶಗಳ ಜನತೆ, ಮಕ್ಕಳು, ಮಹಿಳೆಯರು ವೃದ್ಧರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ನಿತ್ಯ ಇಂತಿಷ್ಟೇ ಎಂದು ನಿಗದಿ ಮಾಡದೇ ಹೆಚ್ಚು ಜನತೆಯ ಆಧಾರ್‌ ಕಾರ್ಡ್‌ ತಿದ್ದುಪಡಿ ಮತ್ತು ನೋಂದಣಿ ಮಾಡಬೇಕು ಎಂದು ಒತ್ತಾಯಿಸಿದರು.

ಆಹಾರ ಶಿರಸ್ತೇದಾರ ಅರುಣಕುಮಾರ ಕಾರಗಿ ಮನವಿ ಸ್ವೀಕರಿಸಿದರು.

ಸಂಘಟನೆಯ ರಾಜು ಜವಳಿ, ಕುಮಾರ ಬಣಕಾರ, ಮುಜೀಬ್‌ ಬಳಿಗಾರ, ಅಸ್ಲಾಂ ಮಕಾನ್ದಾರ್‌, ಮಾರುತಿ ಎಸ್‌., ಶರತ್‌ ಪೂಜಾರ, ಚಂದ್ರು ಹಂಪಾಳಿ, ಲಕ್ಷ ್ಮಣ ಗೌಡರ್‌, ಅಣ್ಣಪ್ಪ ಬಡಿಗೇರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next