ಸೊಲ್ಲಾಪುರ: ಸಾಹಿತ್ಯ ಸಮ್ಮೇಳನಗಳಿಂದ ಭಾಷಾ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಅಂತಃಕರಣದಿಂದ ಸಾಹಿತ್ಯ ಹುಟ್ಟುತ್ತದೆ. ಹೃದಯದ ಭಾಷೆಯನ್ನು ಯಾರೂ ಅಳಿಸಲಾಗದು. ಜಾತಿ, ಧರ್ಮದ ಹಿಂದೆ ಮಾನವ ಜಾತಿ ಒಂದೇ. ಸರ್ವಧರ್ಮ ಸಮಭಾವ ಹಾಗೂ ಮಾನವ ಜಾತಿ ಕಲ್ಯಾಣಕ್ಕಾಗಿ ಇಂತಹ ಸಮ್ಮೇಳನಗಳು ಗಡಿ ಭಾಗದಲ್ಲಿ ನಡೆಯುತ್ತಿರುವುದು ತುಂಬಾ ಮಹತ್ವದ್ದಾಗಿದೆ ಎಂದು ಕೇಂದ್ರ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದರು.
ಮಾ. 11 ರಂದು ಅಕ್ಕಲ್‌ಕೋಟೆ ನಗರದ ಟೆನಿಸ್ ಕೊರ್ಟ್ ಮೈದಾನದಲ್ಲಿ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಆದರ್ಶ ನುಡಿಸಿರಿ 2018 ಸಮಾರಂಭ ಉದ್ಘಾಟಿಸಿ ಮಾತನಾಡಿದ ಇವರು, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲ್‌ಕೋಟ ತಾಲೂಕಿನಲ್ಲಿ ಹೆಚ್ಚಾಗಿ ಕನ್ನಡ ಭಾಷಿಕರಿದ್ದಾರೆ. ಇಂತಹ ಸಾಹಿತ್ಯ ಸಮ್ಮೇಳಗಳ ಮೂಲಕ ಕನ್ನಡ ಉಳಿಸಿ ಬೆಳೆಸಲು ಅನುಕೂಲವಾಗುತ್ತದೆ. ಆದರ್ಶ ಕನ್ನಡ ಬಳಗವು ಮರಾಠಿ ಮತ್ತು ಕನ್ನಡ ಭಾಷಿಕರ ಮನಸ್ಸು ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇಲ್ಲಿ ಯಾವುದೇ ಜಾತಿ, ಭೇದ ಭಾವಗಳಿಲ್ಲ. ಭಾಷಾ ಭೇದ-ಭಾವಗಳನ್ನು ಮರೆತು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ನಮ್ಮದ್ದಾಗಬೇಕು. ವಿಶಿಷ್ಟ ಧರ್ಮದ ಪ್ರಚಾರಕರಿಂದ ಸಾಹಿತಿಗಳ ಹತ್ಯೆ ಮಾಡಲಾಗುತ್ತಿದೆ. ಆದರೆ ಸಾಹಿತಗಳ ವಿಚಾರ ಎಂದೂ ಸಾಯುವುದಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕೂಡಲೇ ಕೇಂದ್ರ ಸರಕಾರ ಸ್ವತಂತ್ರ ಧರ್ಮ ಮಾನ್ಯತೆಗೆ ಸ್ವಂದಿಸಬೇಕು ಎಂದು ಹೇಳಿದರು.
ಮೊದಲಿಗೆ ನಗರದ ಏ-ವನ್ ಚೌಕಿನಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಕನ್ನಡ ಹೋರಾಟಗಾರ ಅ. ಬಾ. ಚಿಕ್ಕಮಣೂರ ಪೂಜೆ ಸಲ್ಲಿಸಿದರು. ನಂತರ ಸಮಾಜ ಸೇವಕ ಲಕ್ಷ್ಮಣ ಸಮಾಣೆ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಮುಖ್ಯ ರಸ್ತೆಗಳ ಮೂಲಕ ತೆರೆದ ವಾಹನದಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ ಕರ್ನಾಟಕದ ವಿವಿಧ ಕಲಾ ತಂಡಗಳಿಂದ ಹಾಗೂ ವಾದ್ಯ, ನೃತ್ಯಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ನಂತರ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯ ಭೋಸಲೆ ಅವರು ಮುಖ್ಯದ್ವಾರದ ಉದ್ಘಾಟನೆ ಮಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಸುರೇಖಾ ಕಾಟಗಾಂವ್ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ತದನಂತರ ಡಾ| ಜಯ ದೇವಿತಾಯಿ ಲಿಗಾಡೆ ವೇದಿಕೆ ಉದ್ಘಾಟನೆಯನ್ನು ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ನೆರವೇರಿಸಿದರು. ಸರ್ವಾಧ್ಯಕ್ಷತೆ ಡಾ| ಮಧುಮಾಲ ಲಿಗಾಡೆಯವರ ಉಪಸ್ಥಿತಿಯಲ್ಲಿ ನಾಗಣಸೂರದ ಪೂಜ್ಯ ಶ್ರೀಕಂಠ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಕಾರ್ಯಕ್ರಮ ಸಾನಿಧ್ಯ ವಹಿಸಿದರು. ಶಾಸಕ ಸಿದ್ಧರಾಮ ಮೆØàತ್ರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸಿದ್ರಾಮಪ್ಪಾ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಳಂದ ಶಾಸಕ ಬಿ. ಆರ್. ಪಾಟೀಲ ಅವರು ವಿಶ್ವಮಾನವ ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಪಾಟೀಲ, ವಟವೃಕ್ಷ ಸ್ವಾಮಿ ಸಮರ್ಥ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಮಾಜಿ ನಗರಾಧ್ಯಕ್ಷ ಅಶ್ಪಾಕ್ ಬಳೂರಗಿ, ಮಲ್ಲಿಕಾರ್ಜುನ ಕಾಟಗಾಂವ, ವಿಶ್ವನಾಥ ಹಡಲಗಿ, ದಿಲೀಪ್ ಶಿದ್ದೆ, ಚೇತನ ನರೂಟೆ, ಡಾ| ಸುವರ್ಣಾ ಮಲಗೊಂಡ, ಸುದೀಪ ಚಾಕೋತೆ, ಮಲ್ಲಿನಾಥ ಭಾಸಗಿ, ರಾಜಕುಮಾರ ಲಕಾಬಶೆಟ್ಟಿ, ಗಟ ವಿಕಾಸ ಅಧಿಕಾರಿ ಮಹಾದೇವ ಬೆಳ್ಳೆ, ವಿಸ್ತಾರ ಅಧಿಕಾರಿ ರತಿಲಾಲ ಭೂಸೆ, ಭೀಮಾಶಂಕರ ಕಾಪಸೆ, ರಾಮಚಂದ್ರ ಸಮಾಣೆ, ಲಕ್ಮಿàಕಾಂತ ತಿಮ್ಮಾಜಿ, ಡಾ| ಎಚ್. ಟಿ. ಪೋತೆ ಸೇರಿದಂತೆ ಮೊದಲಾದವರು ಪಾಲ್ಗೊಂಡಿದರು. ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಧರ ಗುರವ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಫುಲಾರಿ ವಂದಿಸಿದರು.