Advertisement
ಒಂದು ದಿನ ಒಬ್ಬ ದೇವತೆ ಅವನ ಮುಂದೆ ಪ್ರತ್ಯಕ್ಷಳಾಗಿ ”ದೇವರು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ಯಾವುದಾದರೂ ವರ ಕೇಳಿಕೋ, ರೋಗ ಪರಿಹಾರದ ವರ ಕೊಡಲಾ?” ಎಂದು ಕೇಳಿದಳು.
Related Articles
Advertisement
”ಸದ್ಗುಣದ ಮಾದರಿ ಪುರುಷನಾಗಿ ಇತರರನ್ನು ಪ್ರೇರಿಸುವ ಚೈತನ್ಯ?”
”ಬೇಡ, ಹಾಗಾಗಿ ಬಿಟ್ಟರೆ ನಾನು ಆಕರ್ಷಣೆಯ ಕೇಂದ್ರವಾದೇನು?”
”ಮತ್ತೇನು ವರ ಕೊಡಲಿ?”
”ದೇವರ ದಯೆಯಿಂದ ನಾನು ಬಯಸಿದ್ದೆಲ್ಲ ನನಗೆ ಸಿಕ್ಕಿದೆ”.
”ಅದಾಗದು, ಏನಾದರೂ ಪವಾಡದ ಶಕ್ತಿಗಾಗಿ ಕೇಳಲೇಬೇಕು ನೀನು”- ದೇವತೆ ಒತ್ತಾಯಿಸಿದಳು.
”ಹಾಗಿದ್ದರೆ, ನನ್ನ ಅರಿವಿಗೆ ಬರದಂತೆಯೇ ಇತರರಿಗೆ ಒಳಿತನ್ನೆಸಗುವಂತಾಗಲಿ”.
ಒಪ್ಪಿದ ದೇವತೆ, ಅವನಿಗೆ ಕೊಟ್ಟ ವರ ಬಹಳ ವಿಚಿತ್ರವಾದುದು. ಅವನ ನೆರಳು, ಅದು ಬೆನ್ನ ಹಿಂದೆ ಇರುವಷ್ಟು ಹೊತ್ತು ಅದಕ್ಕೊಂದು ದಿವ್ಯ ಶಕ್ತಿ ಇರುತ್ತಿತ್ತು. ಆ ನೆರಳಿನ ವ್ಯಾಪ್ತಿಯಲ್ಲಿದ್ದ ನೆಲ ಫಲವತ್ತಾಗುತ್ತಿತ್ತು. ನೆರಳು ಯಾವ ರೋಗಿಗಳ ಮೇಲೆ ಬೀಳುತ್ತಿತ್ತೋ ಅವರು ಗುಣಮುಖರಾಗುತ್ತಿದ್ದರು. ನೆರಳು ಬಿದ್ದಲ್ಲೆಲ್ಲ ನೀರ ಚಿಲುಮೆಗಳು ಚಿಮ್ಮುತ್ತಿದ್ದವು. ದುಃಖೀಗಳ ಮುಖಕ್ಕೆ ಅವನ ನೆರಳು ಬಿದ್ದರೆ ಸಾಕು, ಅವರ ಮುಖದಲ್ಲಿ ಖುಷಿಯ ರಂಗು ಹಮ್ಮತೊಡಗುತ್ತಿತ್ತು. ಆದರೆ, ಈ ಯಾವ ಪವಾಡವೂ ಆ ಸಂತನ ಅರಿವಿಗೆ ಬರಲೇ ಇಲ್ಲ. ಕಾರಣ, ಜನರ ಗಮನ ಕೇವಲ ಅವನ ನೆರಳ ಮೇಲಿತ್ತು; ಅವನ ಮೇಲಲ್ಲ. ಅವರು ಅವನ ನೆರಳಿನಿಂದ ಉಪಕೃತರಾದರು. ಅವನನ್ನು ಮಾತ್ರ ಮರೆತೇ ಬಿಟ್ಟರು.
ಅವನು ಬಯಸಿದ್ದುದೂ ಅದೇ ತಾನೆ?
– ಪ್ರತಿಮಾ