Advertisement

America: ಭಾರತ ಮೂಲದ ಯುವತಿ ಅಪಘಾತದಲ್ಲಿ ಸಾವು

01:08 AM Mar 25, 2024 | Team Udayavani |

ನ್ಯೂಯಾರ್ಕ್‌: ಭಾರತ ಮೂಲದ ಉದ್ಯೋಗಿ ಅರ್ಶಿಯಾ ಜೋಶಿ(24) ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಮಾ.21ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಅಮೆರಿಕದಲ್ಲಿಯೇ ಪದವಿ ಪಡೆದಿದ್ದ ಆಕೆ, ಅಲ್ಲಿಯೇ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿದ್ದರು. ದಿಲ್ಲಿ ಮೂಲದ ಜೋಶಿ, ತಮ್ಮ ಕಾರಿನಲ್ಲಿ ಪಯಣಿಸುವಾಗ ಅಪಘಾತವಾಗಿ ಮೃತಪಟ್ಟಿದ್ದಾರೆ. ಆಕೆಯ ಪೋಷಕರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next