ಬೆಂಗಳೂರು: ಮನೆಗೆ ನುಗ್ಗಿ ಸುಲಿಗೆ ಮಾಡಿದ್ದ ಮಹಿಳೆ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯನ್ನು ಸೋಲದೇವಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತೋಟದಗುಡ್ಡದಹಳ್ಳಿ ನಿವಾಸಿ ಸುನೀಲ್ ಕುಮಾರ್ (21) ಮತ್ತು ಆತನ ಸ್ನೇಹಿತೆ ಲಕ್ಷ್ಮೀಪ್ರಿಯಾ (31) ಬಂಧಿತರು. ಆರೋಪಿಗಳಿಂದ 2.2 ಲಕ್ಷ ರೂ. ಮೌಲ್ಯದ 45 ಗ್ರಾಂ ಚಿನ್ನಾಭರಣ, 1 ಮೊಬೈಲ್, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಸುನೀಲ್ ಕುಮಾರ್ ಬ್ಲೂಆ್ಯಪ್ ಮೂಲಕ ವ್ಯಕ್ತಿ ಯೊಬ್ಬರನ್ನು ಪರಿಚಯಿಸಿ ಕೊಂಡು ಸುಲಿಗೆ ಮಾಡಿದ್ದ ಎಂದು ಪೊಲೀಸರು ಹೇಳಿ ದರು. ಸುನೀಲ್ ಕುಮಾರ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಾಗಿದ್ದು, ಲಕ್ಷ್ಮೀಪ್ರಿಯಾಗೆ ಮದುವೆಯಾಗಿ, ಒಂದು ಮಗುವಿದೆ. ಆದರೆ, ಪತಿ ನಿಧನರಾಗಿದ್ದಾರೆ. ಆರೋಪಿ ಇತ್ತೀಚೆಗೆ ಬ್ಲೂಆ್ಯಪ್‌ನಲ್ಲಿ ಸಕ್ರಿಯವಾಗಿದ್ದು, ಅದೇ ಆ್ಯಪ್ ಬಳಕೆ ಮಾಡುತ್ತಿದ್ದ ದೂರುದಾರರ ಜತೆ ಯುವತಿ ಸೋಗಿನಲ್ಲಿ ಚಾಟಿಂಗ್ ನಡೆಸಿದ್ದಾನೆ. ದೂರುದಾರ ಯುವತಿ ಎಂದು ಭಾವಿಸಿ ಭೇಟಿಯಾಗಲು ಮನೆಗೆ ಕರೆದಿದ್ದಾನೆ. ಆದರೆ, ಆರೋಪಿ, ತನ್ನ ಬದಲು ತನ್ನ ತಂಗಿ ಕಳುಹಿಸುತ್ತೇನೆ ಎಂದು ಹೇಳಿ ಲಕ್ಷ್ಮೀಪ್ರಿಯಾಳನ್ನು ಕಳುಹಿಸಿದ್ದ. ಆಕೆ ಮನೆಗೆ ಹೋಗಿ ಮನೆಯಲ್ಲಿ ಯಾರು ಎಂಬುದನ್ನು ಖಚಿತಪಡಿಸಿಕೊಂಡು, ಆತನ ಜತೆ ಮಾತನಾಡಿ, ಜತೆಯಲ್ಲಿರುವಂತೆ ವಿಡಿಯೋ ಮಾಡಿಕೊಂಡಿದ್ದಾಳೆ.
ನಂತರ ಸುನೀಲ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ದೂರುದಾರರನ್ನು ಬೆದರಿಸಿ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.