Advertisement

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ

03:59 PM May 29, 2024 | Team Udayavani |

ಪಣಜಿ: ಗೆಳೆಯರ ಜೊತೆ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಯುವಕ ಮೃತಪಟ್ಟ ಘಟನೆ ನಡೆದಿದ್ದು ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

Advertisement

ಮೃತ ಯುವಕನನ್ನು ಮೋಹಿತ್ ಕಶ್ಯಪ್ (17) ಎನ್ನಲಾಗಿದ್ದು, ಈತ ಭಟ್ವಾಡಿ ನಾನೋಡದ ಚಿರೇಖಾನಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಡಿಚೋಲಿ ಅಗ್ನಿಶಾಮಕ ದಳ ನೀಡಿದ ಮಾಹಿತಿಯ ಪ್ರಕಾರ ಪಣಜಿಯ ಕೆಲವು ಯುವಕರು ಚಿರೇಖಾನಿಯಲ್ಲಿ ತುಂಬಿದ ನೀರಿನಲ್ಲಿ ಈಜಲು ಬಂದಿದ್ದರು. ನೀರು ಎಷ್ಟು ಆಳದಲ್ಲಿ ತುಂಬಿದೆ ಎಂದು ಊಹಿಸಲು ಸಾಧ್ಯವಾಗದ ಕಾರಣ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿದ್ದರು, ಆದರೆ ಮೋಹಿತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇನ್ನುಳಿದವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ದಿಚೋಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಮೋಹಿತ್‍ನನ್ನು ಸ್ಥಳೀಯರು ನೀರಿನಿದ ಮೇಲಕ್ಕೆ ಎತ್ತಿದ್ದರು. ಕೂಡಲೇ ಮೋಹಿತ್‍ನನ್ನು 108 ಆಂಬ್ಯುಲೆನ್ಸ್‍ನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಅಲ್ಲಿನ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಡಿಚೋಲಿ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೇ ವೇಳೆ ಧನಗರವಾಡಿಯ ಸ್ಥಳೀಯ ಯುವಕನೊಬ್ಬ ಕಳೆದ ವರ್ಷ ಭಟ್ವಾಡಿ ನಾನೋಡದ ಚಿರೇಖಾನಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಈ ವರ್ಷವೂ ಅದೇ ಘಟನೆ ಮರುಕಳಿಸಿದೆ.

Advertisement

ಇದನ್ನೂ ಓದಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಮಹಿಳೆಯ ಕಿಡ್ನಿಯನ್ನೇ ತೆಗೆದ ವೈದ್ಯರು… ಮಹಿಳೆ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next